Kamalakar Bhat case: ಕೊ*ಲೆ ದಿನ ಆಗಿದ್ದೇನು? ಐದೇ ನಿಮಿಷದಲ್ಲಿ ನಡೆದ ಘೋರ ಘಟನೆ ಬಗ್ಗೆ ಮೃತ ವಸಂತ್​ ಪತ್ನಿ ರಿವೀಲ್​

Published : Feb 11, 2026, 02:12 PM IST
Kamalakara Bhat

ಸಾರಾಂಶ

ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ನಾಯ್ಕ್ ಪ್ರಕರಣದಲ್ಲಿ ಮೃತಪಟ್ಟ ವಸಂತ್ ಅವರ ಪತ್ನಿ, ಘಟನೆಯ ದಿನ ನಡೆದ ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇವಲ ಐದೇ ನಿಮಿಷಗಳಲ್ಲಿ ನಡೆದ ಆ ಘಟನೆಯ ಬಗ್ಗೆ ರಿವೀಲ್​ ಮಾಡಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಜ್ಯೋತಿಷಿ ಕಮಲಾಕರ ಭಟ್​ ಮತ್ತು ಸುಚಿತ್ರಾ ನಾಯ್ಕ್​ ಘಟನೆ ಬಗ್ಗೆ ಇದೀಗ ಮೃತ ವಸಂತ್​ ಅವರ ಪತ್ನಿ ಶಾಕಿಂಗ್​ ಎನ್ನುವಂಥ ಸತ್ಯವನ್ನು ರಿವೀಲ್​ ಮಾಡಿದ್ದಾರೆ. ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂದು ನಡೆದ ಘಟನೆಯ ಇಂಚಿಂಚು ಮಾಹಿತಿಯನ್ನು ನೀಡಿದ್ದಾರೆ. ಸುಚಿತ್ರಾ ಅವರ ಪತಿ ಮಹೇಶ್​ ಅವರ ಸಹೋದರ ವಸಂತ್​ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು. ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ಅವರು, ಅನ್ಯಾಯವಾಗಿ ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ದಿನ ಆಗಿದ್ದೇನು, ಐದೇ ನಿಮಿಷಗಳಲ್ಲಿ ಆ ನಾಲ್ಕು ಮಂದಿ ಮಾಡಿದ್ದೇನು ಎನ್ನುವ ಬಗ್ಗೆ ವಸಂತ್​ ಅವರ ಪತ್ನಿ ರಿವೀಲ್​ ಮಾಡಿದ್ದಾರೆ.

300-400 ರೂಪಾಯಿಗೆ ಹೋಗ್ತಿದ್ಲು

ಅವರು ಹೇಳಿದಂತೆ, ಸುಚಿತ್ರಾ ನಾಯ್ಕ್​ 300-400 ರೂಪಾಯಿಗೆ ಕಂಡಕಂಡವರ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದಳು. ಆದರೆ ಕೋಟ್ಯಧೀಶ್ವರನಾಗಿರುವ ಕಮಲಾಕರ ಭಟ್ (Kamalakara Bhat) ಸಿಕ್ಕ ಮೇಲೆ ಅವಳ ವರ್ತನೆ ಬದಲಾಗಿದೆ. ಸುಚಿತ್ರಾಳ ಹಿಂಸೆ ತಾಳದೇ ಗಂಡ ಮಹೇಶ್​ ಬೆಂಗಳೂರಿನಲ್ಲಿ ಇದ್ದರು. ಅಷ್ಟಕ್ಕೂ ಮಹೇಶ್​ ಅವರಿಗೂ ತಮಗೂ ಯಾವುದೇ ರೀತಿಯ ಒಡನಾಟವೇ ಇರಲಿಲ್ಲ.ಮಾತ್ರವಲ್ಲದೇ ಸುಚಿತ್ರಾಳ ಮಗಳನ್ನು ಕೂಡ ತಾವು ಹುಟ್ಟಿದಾಗಿನಿಂದ ನೋಡೇ ಇರಲಿಲ್ಲ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅದೇ ಮೊದಲ ಬಾರಿಗೆ ಸುಚಿತ್ರಾ ಮಗಳ, ಆಸರೆ ಕೋರಿ ವಸಂತ್​ ಅವರ ಮನೆಗೆ ಬಂದಿದ್ದಳು. ಆದರೆ ಅದೇ ಅವರಿಗೆ ಮುಳುವಾಗಿ ಹೋಯ್ತು. ವಸಂತ್​ ಅವರು ಪ್ರಾಣ ಕಳೆದುಕೊಳ್ಳಬೇಕಾಯ್ತು.

ಮಗಳು ಮೊದಲ ಬಾರಿಗೆ ಬಂದಿದ್ದಳು

ಸುಚಿತ್ರಾ ಮಗಳು ಕಮಲಾಕರ ಭಟ್​ ಟಾರ್ಚರ್​ ಕೊಡುವುದನ್ನು ಮತ್ತು ತಾಯಿಯ ವಿಚಿತ್ರ ವರ್ತನೆ ಬಗ್ಗೆ ಅಪ್ಪ ಮಹೇಶ್​ಗೆ ಮೆಸೇಜ್​ ಮಾಡಿದ್ದಳು. ಅವರು ಬೆಂಗಳೂರಿನಲ್ಲಿ ಇದ್ದರು. ನಾನೂ ನಿನ್ನ ಜೊತೆ ಬರುತ್ತೇನೆ. ಇಲ್ಲಿ ಇರಲು ಆಗಲ್ಲ ಎಂದಳು. ಆಗ ಮಹೇಶ್​ ಅವರು ನನ್ನ ಗಂಡನಿಗೆ ಈ ಬಗ್ಗೆ ತಿಳಿಸಿದರು. ಮಗಳನ್ನು ಕರೆದುಕೊಂಡು ಬಂದು ಇಟ್ಟುಕೊಳ್ಳುವಂತೆ ಹೇಳಿದರು. ಅದಕ್ಕೂ ಮೊದಲು ಮಹೇಶ್​ ಅವರಿಗೂ ನಮಗೂ ಅಷ್ಟೊಂದು ಟಚ್ಚೇ ಇರಲಿಲ್ಲ. ಅವರ ಮಗಳನ್ನೂ ನಾನು ನೋಡಿರಲಿಲ್ಲ. ಅದೇ ಮೊದಲ ಬಾರಿಗೆ ಅವಳು ನಮ್ಮ ಮನೆಗೆ ಬಂದಳು. ಅದೇಮೊದಲ ಬಾರಿಗೆ ನನ್ನನ್ನು ದೊಡ್ಡಮ್ಮ ಎಂದು ಕರೆದಳು.

ಐದೇ ನಿಮಿಷದಲ್ಲಿ ನಡೆದು ಹೋಯ್ತು ಘಟನೆ

ಆಗ ನನ್ನ ಗಂಡ ತೋಟಕ್ಕೆ ಹೋದವರು ಬಂದರು. ಅಷ್ಟರಲ್ಲಿ ಸುಚಿತ್ರಾ ಸೇರಿ ನಾಲ್ಕು ಮಂದಿ ಬಂದರು. ಎಲ್ಲರೂ ಶೂಸ್​ ಹಾಕಿಕೊಂಡೇ ಒಳಗೆ ಬಂದರು. ಆಗ ನನ್ನ ಗಂಡ ಒಳಗೆ ಯಾಕೆ, ಇಲ್ಲೇ ಕುಳಿತು ಮಾತನಾಡೋಣ ಬನ್ನಿ ಎಂದರು. ಇಷ್ಟಾಗಿದ್ದು ಕೇವಲ ಐದಾರು ನಿಮಿಷದಲ್ಲಿ ಮಾತ್ರ. ಅಷ್ಟೊತ್ತಿಗಾಗಲೇ ಬಂದವರು ನನ್ನ ಗಂಡನನ್ನು ಚಾಕುವಿನಿಂದ ಚುಚ್ಚಿ ಸಾಯಿಸಿಯೇ ಬಿಟ್ಟರು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ವಸಂತ್​ ಅವರ ಪತ್ನಿ. ನಾನು ಕಮಲಾಕರ ಭಟ್​ ಅವರನ್ನು ಮೊದಲು ನೋಡಲಿಲ್ಲ. ಆದ್ದರಿಂದ ಅವರು ಅಲ್ಲಿ ಬಂದಿದ್ದರೋ ಇಲ್ಲವೋ ಗೊತ್ತಾಗಲಿಲ್ಲ. ಆದರೆ ಸುಚಿತ್ರಾ ಮಗಳು, ಅವರು ಕೂಡ ಮನೆಗೆ ಸುಚಿತ್ರಾ ಜೊತೆ ಬಂದು ಅಲ್ಲೇ ನಿಂತಿದ್ದನ್ನು ನೋಡಿದ್ದಳಂತೆ ಎಂದು ಹೇಳಿದ್ದಾರೆ.

ಈ ಮನೆ ಸೇರಿ, ಇದಾಗಲೇ ಲಕ್ಷಾಂತರ ರೂಪಾಯಿ ಸಾಲ ಇದೆ. ನನ್ನ ಗಂಡನೇ ಜೀವನ ಆಧಾರವಾಗಿದ್ದರು ಎಂದು ದುಃಖ ತೋಡಿಕೊಂಡಿರುವ ವಸಂತ್​ ಅವರ ಪತ್ನಿ, ಅವರಿಬ್ಬರೂ ಬೆಳಕನ್ನು ನೋಡಬಾರದು. ಆ ರೀತಿಯ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ಆದರೆ, ಯಾವುದೂ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮಾತ್ರ ಬಲು ಘೋರ ದುರಂತ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಕ್ಲು ಶಿವ ಹತ್ಯೆ ಪ್ರಕರಣ: ನಾಪತ್ತೆಯಾಗಿ ಸಿಐಡಿಗೆ ತಲೆ ಕೆಡಿಸಿದ ಬೈರತಿ ಬಸವರಾಜ್, ವಿದೇಶಕ್ಕೆ ತೆರಳಿರೋದು ಅನುಮಾನ
ಯಾರೂ ಕೆಮ್ಮಂಗಿಲ್ಲ: ಜೋರಾಗಿ ಕೆಮ್ಮಿದ್ದಕ್ಕೆ ಯುವಕನ ಮೇಲೆ ಭೀಕರ ಹಲ್ಲೆ, ಚಿಕಿತ್ಸೆ ಫಲಿಸದೇ ಸಾವು!