ಸಂಧಾನದ ನಂತರವೂ ಸರಿಹೋಗದ ಸಂಸಾರ: 4 ದಿನದ ಹಿಂದಷ್ಟೇ ಮನೆಗೆ ಬಂದ ಪತ್ನಿಯ ಕೊಂದು ಮಗುವಿನೊಂದಿಗೆ ಬಾವಿಗೆ ಜಿಗಿದ ಪತಿ

Published : Apr 28, 2026, 03:57 PM IST
Kalburgi husband suicide killing his wife

ಸಾರಾಂಶ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೊಬ್ಬ ಪತ್ನಿಯನ್ನು ಕೊಂದು, ಮಗುವಿನೊಂದಿಗೆ ಬಾವಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಸ್ಥಳೀಯರು ಕೂಡಲೇ ಮಗುವನ್ನು ರಕ್ಷಿಸಿದರೂ, ಪತಿ ಪತ್ನಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯ ಕೊಂದು ಸಾವಿಗೆ ಶರಣಾದ ಪತಿ

ಕಲಬುರಗಿ: ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಕೊಂದು ಪತಿ ಸಾವಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿ ಪತಿ ಮಗುವಿನೊಂದಿಗೆ ಬಾವಿಗೆ ಹಾರಿದ್ದಾನೆ. ಆದರೆ ಈ ವೇಳೆ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಕೂಡಲೇ ಬಾವಿಗಿಳಿದು ಮಗುವನ್ನು ರಕ್ಷಿಸಿದ್ದಾರೆ. ಆದರೆ ಬಾವಿಯಲ್ಲಿ ಮುಳುಗಿ ಪತಿ ಸಾವಿಗೆ ಶರಣಾಗಿದ್ದಾನೆ. ಗಂಡನಿಂದಲೇ ಕೊಲೆಯಾದ ಮಹಿಳೆಯನ್ನು 23 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಹಾಗೆಯೇ ಲಕ್ಷ್ಮೀಕಾಂತ ಎಂಬಾತನೇ ಪತ್ನಿಯನ್ನು ಕೊಂದು ಸಾವಿಗೆ ಶರಣಾದಂತಹ ವ್ಯಕ್ತಿ.

ಪತ್ನಿ ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ

ಮನೆಯೊಳಗೆ ಹೆಂಡತಿ ಕೊಲೆ ಮಾಡಿದ ಲಕ್ಷ್ಮೀಕಾಂತ ಬಳಿಕ ಮನೆಯ ಹೊರಗಿದ್ದ ಬಾವಿಗೆ ಹಾರಿದ್ದ. ಪತ್ನಿ ಅಂಜಲಿ ಹಾಗೂ ಪತಿ ಲಕ್ಷ್ಮೀಕಾಂತ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿದ್ದವು, ಕೌಟುಂಬಿಕ ಕಲಹದಿಂದಾಗಿ ಪತ್ನಿ ಅಂಜಲಿ ಗಂಡನ ಕಾಟ ತಾಳದೇ ಒಂದೂವರೆ ವರ್ಷದ ಹಿಂದೆಯೇ ತವರಿಗೆ ಹೋಗಿದ್ದಳು. ಅಂಜಲಿ ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಚಿಕ್ಕೆಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಅಲ್ಲಿಯೇ ನೆಲೆಸಿದ್ದಳು. ಅಂಜಲಿಗೆ ಮದರಾ ಕೆ ಗ್ರಾಮದಲ್ಲಿ ನೆಲೆಸುವುದು ಇಷ್ಟವಿರಲಿಲ್ಲ, ಮಹಾರಾಷ್ಟ್ರದ ಪೂನಾದಲ್ಲಿ ಕೆಲಸ ಮಾಡಿ ಬದುಕಬೇಕು ಎಂಬುದು ಆಕೆಯ ಬೇಡಿಕೆಯಾಗಿತ್ತು. ಇದೇ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಆಗಾಗ ಜಗಳ ನಡೆದಿತ್ತು. ಹೀಗಾಗಿ ಕೇವಲ ನಾಲ್ಕೆ ನಾಲ್ಕು ದಿನಗಳ ಹಿಂದಷ್ಟೇ ಗ್ರಾಮಸ್ಥರು ಹಾಗೂ ಸಂಬಂಧಿಕರು ದಂಪತಿಗಳ ನಡುವೆ ರಾಜೀ ಪಂಚಾಯತಿ ಮಾಡಿಸಿದ್ದರು.

ಇದನ್ನೂ ಓದಿ: ನಾಸಿಕ್ ಟಿಸಿಎಸ್ ಜಿಹಾದ್ ಪ್ರಕರಣ: ಮತಾಂತರಕ್ಕೆ ಬುರ್ಖಾ, ಇಸ್ಲಾಮಿಕ್ ಪುಸ್ತಕ, ಹೆಸರು ಬದಲಿಸಲು ಸಂತ್ರಸ್ತರಿಗೆ ಒತ್ತಾಯ

4 ದಿನದ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದ ಅಂಜಲಿ:

ಹೀಗಾಗಿ ನಾಲ್ಕು ದಿನಗಳ ಹಿಂದಷ್ಟೇ ಅಂಜಲಿ ಗಂಡನ ಮನೆಗೆ ಬಂದಿದ್ದಳು. ಆದರೆ ಸಂಧಾನದ ನಂತರ ಹೊಸ ಬದುಕಿ ಭರವಸೆಯೊಂದಿಗೆ ಗಂಡನ ಮನೆಗೆ ಬಂದಿದ್ದ ಅಂಜಲಿ ಇಂದು ಗಂಡನ ಕೈಯಲ್ಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಪತ್ನಿಯನ್ನು ಕೊಂದ ನಂತರ ಎರಡು ವರ್ಷದ ಮಗುವಿನ ಜೊತೆಗೆ ಲಕ್ಷ್ಮೀಕಾಂತ ಬಾವಿಗೆ ಹಾರಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಸ್ಥಳೀಯರು ಕೂಡಲೇ ಬಾವಿಗೆ ಜಿಗಿದು ಮಗುವನ್ನು ರಕ್ಷಿಸಿದ್ದಾರೆ ಆದರೆ ಲಕ್ಷ್ಮೀಕಾಂತ ಮಾತ್ರ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರೇವೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್‌ಗೆ ಮುಗಿಬಿದ್ದ ಜನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
ಬಗೆದಷ್ಟು ಬಯಲಾಗ್ತಿದೆ ನಾಸಿಕ್ TCS ಮತಾಂತರ ಕೇಸ್‌: ಸಂತ್ರಸ್ತರಿಗೆ ಬುರ್ಖಾ, ಇಸ್ಲಾಮಿಕ್ ಪುಸ್ತಕ, ಹೆಸರು ಬದಲಿಸಲು ಒತ್ತಾಯ