ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಬಿತ್ತು ಮೂರು ಹೆಣ: ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್‌ಡೇ ಬಾಯ್!

Published : Apr 27, 2026, 12:39 PM IST
3 Killed After Cake smearing Dispute

ಸಾರಾಂಶ

ಬರ್ತ್‌ಡೇ ಪಾರ್ಟಿಗಳಲ್ಲಿ ಸ್ನೇಹಿತರು ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಈ ರೀತಿ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂರು ಹೆಣ ಬಿದ್ದಿದೆ. ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಆರಂಭವಾದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ.

ಹುಟ್ಟುಹಬ್ಬದ ಸಂಭ್ರಮದಲ್ಲೇ ಮೂವರು ಸ್ನೇಹಿತರ ಮೇಲೆ ಗುಂಡಿನ ಮಳೆಗರೆದ ಬರ್ತ್‌ಡೇ ಬಾಯ್

ಬುಲಂದ್‌ಶಹರ್‌: ಬರ್ತ್‌ಡೇ ಪಾರ್ಟಿಗಳಲ್ಲಿ ಬರ್ಡೇ ಬಾಯ್ ಅಥವಾ ಬರ್ಡೇ ಗರ್ಲ್‌ಗೆ ಸ್ನೇಹಿತರು ಮುಖಕ್ಕೆ ಕೇಕ್ ಹಚ್ಚಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಈ ರೀತಿ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಮೂರು ಹೆಣ ಬಿದ್ದಿದೆ. ಹೌದು ಬರ್ತ್‌ಡೇ ಬಾಯ್ ಮುಖಕ್ಕೆ ಕೇಕ್ ಹಚ್ಚಿದ ಕಾರಣಕ್ಕೆ ಆರಂಭವಾದ ಜಗಳ ಮೂವರು ಸ್ನೇಹಿತರ ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶ ಬುಲಂದ್‌ಶಹರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಅಮರ್‌ದೀಪ್ ಸೈನಿ, ಮನೀಶ್ ಸೈನಿ ಹಾಗೂ ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಜೀತು ಸೈನಿ ಹುಟ್ಟುಹಬ್ಬದ ಸಮಯದಲ್ಲಿ ಈ ದುರಂತ ನಡೆದಿದ್ದು, ಘಟನೆಯ ಬಳಿಕ ಆತ ಪರಾರಿಯಾಗಿದ್ದಾನೆ.

ಸಣ್ಣ ಗಲಾಟೆಗೆ ಬಲಿಯಾಗಿದ್ದು ಮೂರು ಜನ

ಜೀತು ಸೈನಿ ಮುಖಕ್ಕೆ ಸಂತ್ರಸ್ತರು ಕೇಕ್ ಹಚ್ಚಿದ್ದರಿಂದ ಕೋಪಗೊಂಡ ಜೀತು ಸೈನಿ ಹಾಗೂ ಇನ್ನೂ ಕೆಲವರು ಪರವಾನಗಿ ಇದ್ದ ಬಂದೂಕಿನಿಂದ ಹಲವು ಸುತ್ತುಗಳ ಗುಂಡು ಹಾರಿಸಿ ತನಗೆ ಆತ್ಮೀಯರೇ ಆಗಿದ್ದ ಮೂವರು ಯುವಕರ ಕತೆ ಮುಗಿಸಿದ್ದಾನೆ.

ಬುಲಂದ್‌ಶಹರ್ ಗ್ರಾಮೀಣ ಎಸ್‌ಪಿ ಅಂತರಿಕ್ಷ್ ಜೈನ್ ಅವರ ಪ್ರಕಾರ, ಖುರ್ಜ್‌ ನಗರ ಪೊಲೀಸ್ ಠಾಣೆಗೆ ತಡರಾತ್ರಿ ಸ್ಥಳೀಯ ಜಿಮ್‌ವೊಂದರಲ್ಲಿ ಬರ್ತ್‌ಡೇ ಪಾರ್ಟಿ ವೇಳೆ ಗುಂಡಿನ ದಾಳಿ ನಡೆದಿದೆ ಮೂವರು ಯುವಕರಿಗೆ ಗುಂಡೇಟು ತಲುಗಿದೆ ಎಂಬ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆ ವೇಳೆಗಾಗಲೇ ಬಹಳ ಗಂಭೀರ ಸ್ಥಿತಿಯಲ್ಲಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯ್ತು ಎಂದು ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ ತಂಡ ರಚನೆ

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 6 ಜನರ ತಂಡ ರಚಿಸಲಾಗಿದೆ. ಕೆಲವು ಶಂಕಿತರನ್ನು ಈಗಾಗಲೇ ಕಸ್ಟಡಿಗೆ ಪಡೆಯಲಾಗಿದೆ. ಸಂತ್ರಸ್ತ ಯುವಕರ ಕುಟುಂಬದವರು ಕೆಲವು ಶಂಕಿತರ ಹೆಸರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಒಬ್ಬ ಆರೋಪಿಯ ಬರ್ತ್‌ಡೇ ಆಗಿದ್ದು, ಒಬ್ಬ ಸಂತ್ರಸ್ತ ಆತನ ಮುಖಕ್ಕೆ ಕೇಕ್ ಹಚ್ಚಿದ್ದಕ್ಕೆ ಈ ಕೊಲೆ ನಡೆದಿದೆ. ಅವರ ನಡುವೆ ಮೊದಲೇ ವಿವಾದವಿತ್ತು. ಆ ವಿವಾದವೇ ಈ ಘಟನೆಗೆ ಕಾರಣವಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಬಂಧನಕ್ಕೆ ಬಲೆ ಬೀಸಲಾಗಿದೆ. ಇದುವರೆಗೆ ಯಾರನ್ನು ಬಂಧಿಸಿಲ್ಲ, ಆರೋಪಿಗಳ ಬಂಧನಕ್ಕೆ ಪ್ರಯತ್ನ ನಡೆದಿತ್ತು. ಕೆಲವರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ.

ಘಟನೆಯಲ್ಲಿ ಕೊಲೆಯಾದ ಓರ್ವನ ಸಹೋದರ ಸಂಜಯ್ ಸೈನಿ ಘಟನೆ ಬಗ್ಗೆ ಮಾತನಾಡಿದ್ದು, ಸಣ್ಣ ವಾಗ್ವಾದದ ನಂತರ ಆರೋಪಿಗಳು ಹಿಂದೆ ಸರಿದು ಬಂದೂಕುಗಳೊಂದಿಗೆ ಬಂದಿದ್ದಾರೆ. ಈ ನಡುವೆ ಘಟನಾ ಸ್ಥಳದಿಂದ ಸಂಜಯ್ ಅವರಿಗೆ ಕರೆ ಬಂದಿದ್ದು, ನಿಮ್ಮ ಸೋದರ ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾನೆ ಎಂದು ಹೇಳಿದ್ದಾರೆ. ಈ ವೇಳೆ ಸಂಜಯ್ ಅವರು ಈ ವಿಚಾರವನ್ನು ಬೆಳಗ್ಗೆ ಮಾತನಾಡುವ ಎಂದು ಹೇಳಿ ವಿವಾದವನ್ನು ಶಮನ ಮಾಡಲು ಯತ್ನಿಸಿದ್ದಾಗಿ ಹೇಳಿದ್ದಾರೆ.

ಸುಭಾಷ್ ಹಲ್ವಾಯಿ ಎಂಬುವವರ ಜೀತು ಸೈನಿ ಎಂಬಾತನ ಹುಟ್ಟುಹಬ್ಬವಿತ್ತು. ಆತನೇ ತನ್ನ ಹುಟ್ಟುಹಬ್ಬಕ್ಕಾಗಿ ಎಲ್ಲರನ್ನು ಕರೆದಿದ್ದ, ಅಲ್ಲಿ ವಿವಾದದ ನಂತರ ಜನ ಅಮರ್‌ದೀಪ್‌ನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ನನಗೆ ನಿಮ್ಮ ಸೋದರ ಇಲ್ಲಿ ಗಲಾಟೆ ಮಾಡುತ್ತಿದ್ದಾನೆ ಎಂದು ಕರೆ ಬಂದಿತ್ತು. ಆದರೆ ನಾನು ಮದುವೆ ಸಮಾರಂಭವೊಂದರಲ್ಲಿ ಇದ್ದಿದ್ದರಿಂದ ಈ ಬಗ್ಗೆ ಬೆಳಗ್ಗೆ ಮಾತನಾಡುವ ಎಂದು ಹೇಳಿ ಕರೆ ಕಡಿತಗೊಳಿಸಿದ್ದೆ. ಆದರೆ ಆರೋಪಿ ಗನ್ ಜೊತೆ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಅಪರಿಚಿತ ಗನ್‌ಮ್ಯಾನ್‌ಗಳಿಂದ ಮುಂದುವರಿದ ಉಗ್ರರ ಬೇಟೆ: ಹಫೀಜ್ ಸಯೀದ್ ಆಪ್ತ ಸಹಚರ ಅಫ್ರಿದಿ ಗುಂಡಿಗೆ ಬಲಿ

ಅವರಲ್ಲಿ 7 ರಿಂದ 8 ಪರವಾನಗಿ ಇದ್ದ ಲೈಸೆನ್ಸ್ ಇದ್ದವು. ಕೂಡಲೇ ಅವುಗಳನ್ನು ತೆಗೆದುಕೊಂಡು ಬಂದ ಅವರು ನನ್ನ ಸೋದರ ಹಾಗೂ ಅಳಿಯನಾದ ಮನೀಷ್ ಸೈನಿ ಹಾಗೂ ಆಕಾಶ್ ಸೈನಿಯನ್ನು ಕರೆದಿದ್ದಾರೆ. ನಂತರ ಒಮ್ಮೆಲೇ ಗುಂಡಿನ ದಾಳಿ ನಡೆಸಿದ್ದು, ಅವರಿಗೆ ತಪ್ಪಿಸಿಕೊಳ್ಳುವುದಕ್ಕೆ ಯಾವುದೇ ಅವಕಾಶ ನೀಡಲಿಲ್ಲ ಎಂದು ಸಂಜಯ್ ಸೈನಿ ಹೇಳಿದ್ದಾರೆ. ಶಾಂತವಾಗಿರುವಂತೆ ಮನವಿ ಮಾಡಿದರು 7 ರಿಂದ 8 ರೈಫಲ್ ತೆಗೆದುಕೊಂಡು ಬಂದು ಗುಂಡು ಹಾರಿಸಿದ್ದಾರೆ. ಅಮರ್‌ದೀಪ್, ಮನೀಶ್ ಹಾಗೂ ಆಕಾಶ್ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದಾರೆ ಎಂದು ಸಂಜಯ್ ಸೈನಿ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಮೀರತ್ ರೇಂಜ್‌ನ ಡಿಐಜಿ ಕಲಾನಿಧಿ ನೈನಿತಲ್ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಮ್‌ನಲ್ಲಿ ನಡೆದ ಸಣ್ಣ ಗಲಾಟೆಯೇ ಈ ದುರಂತಕ್ಕೆ ಕಾರಣವಾಗಿದೆ ಎಂದರು.

ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ಕೋಟ್ಯಾಂತರ ರೂ ಹಣ ಪಡೆದು ಮೋಸ: ಟಾಲಿವುಡ್ ನಟಿ ವಿರುದ್ಧ ಎನ್‌ಆರ್‌ಐ ಟೆಕ್ಕಿ ದೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆಯಾಗೋದಾಗಿ ನಂಬಿಸಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ 9.35 ಕೋಟಿ ರೂ. ನಾಮ: ಬಿಗ್‌ ಬಾಸ್ ನಟಿ ವಿರುದ್ಧ ವಂಚನೆ ಕೇಸ್ ದಾಖಲು!
ಲಾಡ್ಜ್ ಮೇಲೆ ದಾಳಿ: ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ, ಮಹಿಳೆಯ ರಕ್ಷಣೆ