ಅಯ್ಯೋ ದೇವ್ರೇ.. ತನ್ನ ಮಗುವನ್ನು ನೋಡಲು ಬಂದವನು ಮರ್ಡರ್​​..! ಕೊಂದದ್ದು 4 ದಿನದ ಬಾಣಂತಿ ಹೆಂಡತಿ..!

Published : Aug 11, 2024, 06:13 PM ISTUpdated : Aug 12, 2024, 12:41 PM IST
ಅಯ್ಯೋ ದೇವ್ರೇ.. ತನ್ನ ಮಗುವನ್ನು ನೋಡಲು ಬಂದವನು ಮರ್ಡರ್​​..! ಕೊಂದದ್ದು 4 ದಿನದ ಬಾಣಂತಿ ಹೆಂಡತಿ..!

ಸಾರಾಂಶ

ಅತ್ತೆಮನೆಯರು ಅಳಿಯನ್ನನ್ನೇ ಮುಗಿಸಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 4 ದಿನದ ಬಾಣಂತಿ ಹಾಗೂ ಮತ್ತವರ ಮನೆಯವರು ಸೇರಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಕಲಬುರ್ಗಿ: ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ರು. ಮೂರು ವರ್ಷ ಪ್ರೀತಿ ಮಾಡಿ ನಂತರ ಹೆತ್ತವರನ್ನ ಒಪ್ಪಿ ವರ್ಷದ ಹಿಂದಷ್ಟೇ ಮದುವೆಯಾಗಿದ್ರು. ಇನ್ನೂ ಇವರಿಬ್ಬರ ಪ್ರೀತಿಯ ಸಂಕೇತವಾಗಿ ನಾಲ್ಕು ತಿಂಗಳ ಹಿಂದಷ್ಟೇ ಒಂದು ಮಗುವಿನ ಜನನ ಕೂಡ ಆಗಿತ್ತು ಅಷ್ಟೇ. ಮಗುವನ್ನ ನೋಡಲು ಅತ್ತೆ ಮನೆಗೆ ಬಂದ ಗಂಡ ಹೆಣವಾಗಿದ್ದ. ಅತ್ತೆ ಮನೆಯಲ್ಲೇ ಆತ ಬರ್ಬರವಾಗಿ ಕೊಲೆಯಾಗಿದ್ದ. ಅಷ್ಟಕ್ಕೂ ಆತನನ್ನ ಕೊಲೆ ಮಾಡಿದ್ಯಾರು..? ಯಾಕಾಗಿ ಕೊಲೆ  ಮಾಡಿದ್ರು. ಆವತ್ತು ಅತ್ತೆ ಮನೆಯಲ್ಲಿ ಏನೆಲ್ಲಾ ಆಯ್ತು.? ಒಬ್ಬ ಅಮಾಯಕ ಯುವಕನೊಬ್ಬನ ಬರ್ಬರ ಕೊಲೆ ರಹಸ್ಯವೇವನ್ನು ಇಂದು ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ

ಪ್ರೀತಿಸಿ ಮದುವೆಯಾದ್ರೂ ಇಬ್ಬರ ನಡುವೆ ಪ್ರತೀ ನಿತ್ಯ ಜಗಳ. ಅದರಲ್ಲೂ ಗಂಡ ಈಶ್ವರ ಪ್ರತೀ ನಿತ್ಯ ಕುಡಿದು ಬಂದು ಹೆಂಡತಿಗೆ ಇನ್ನಿಲ್ಲದಂತೆ ಟಾರ್ಚರ್​​ ಕೊಡ್ತಿದ್ದ. ಹೆಂಡತಿ ಆಗ ಸರಿಹೋಗ್ತಾನೆ ಈಗ ಸರಿ ಹೋಗ್ತಾನೆ ಅಂತಲೇ ಅಂದುಕೊಂಡಿದ್ಲು. ಆದ್ರೆ ಈಶ್ವರ ಮಾತ್ರ ಬದಲಾಗಲಿಲ್ಲ. ಇನ್ನೂ ಮಗುವಾದ ಮೇಲೂ ಈಶ್ವರ ಹೆಂಡತಿಗೆ ಹೊಡೆಯೋದಕ್ಕೆ ಶುರು ಮಾಡಿದ್ದ. 4 ದಿನದ ಬಾಣಂತಿ ಅನ್ನೋದನ್ನೂ ನೋಡದೇ ಆಕೆಗೆ ದೈಹಿಕ ಹಿಂಸೆ ನೀಡ್ತಿದ್ದ. ಆದ್ರೆ ನೋಡೋವರೆಗೂ ನೋಡಿದ ಆ ಕುಟುಂಬ ಆವತ್ತು ಮಗು ನೋಡೋದಕ್ಕೆ ಅಂತ ಬಂದವನ ಮೇಲೆ ಎರಗಿ ಬಿದ್ದಿತ್ತು. ಅವನ ಕೈಕಾಲುಗಳನ್ನ ಕಟ್ಟಿ ಅವನ ಕತ್ತು ಹಿಸುಕಿ ಕೊಂದೇ ಬಿಟ್ಟಿತು.

ನಾಲ್ಕು ದಿನದ ಬಾಣಂತಿಯೇ ಗಂಡನ ಹೆಣ ಹಾಕಿದ್ಲು. ಇನ್ನೂ ಆಕೆಗೆ ಸಹಾಯ ಮಾಡಿದ್ದು ಆಕೆಯ ತಾಯಿ ಮತ್ತು ತಮ್ಮ ಜೊತೆಗೆ ಆತನ ಗೆಳೆಯರು. ಸದ್ಯ ಪೊಲೀಶರು ಎಲ್ಲರನ್ನೂ ಬಂದಿಸಿದ್ದಾರೆ. ಆದ್ರೆ ಇವರೆಲ್ಲಾ ಈಶ್ವರನನ್ನ ಕೊಂದಿದ್ದೇಕೆ.? ಅಂಥ ತಪ್ಪು ಆತ ಮಾಡಿದ್ದಾದ್ರೂ ಏನು.? ಎಂದು ಕೇಳಿದರೆ ನೀವು ಶಾಕ್ ಆಗ್ತೀರ

Paris Olympics 2024: ಬ್ರೇಕ್‌ ಡ್ಯಾನ್ಸ್‌ ಸ್ಪರ್ಧೆ ವೇಳೆ ಫ್ರೀ ಆಫ್ಘನ್ ವುಮೆನ್ ಬಟ್ಟೆ ಧರಿಸಿದ ಅಥ್ಲೀಟ್ ಅನರ್ಹ!

ಇನ್ನು ಗರ್ಬಿಣಿ ರಂಜಿತಾ ಹೆರಿಗೆಗಾಗಿ ತವರಿಗೆ ಹೋದಾಗಲೂ ಅವರ ಮನೆಗೆ ಹೋಗಿ ಗಲಾಟೆ ಮಾಡುವುದು ಮುಂದುವರೆದಿತ್ತು. ನಾಲ್ಕು ದಿನಗಳ ಹಿಂದಷ್ಟೇ ರಂಜಿತಾ ಗಂಡು ಮಗುವಿಗೆ ಜನ್ಮ ನೀಡಿದ್ದಳು.‌ ಮಗು ಹುಟ್ಟಿದ್ದಕ್ಕೂ ಸಂತೋಷ ಪಡದ ಈತ ಮತ್ತದೇ ಹಳೆಯ ಶೈಲಿಯಲ್ಲಿ ಕುಡಿದು ಹೋಗಿ ಅತ್ತೆ ಮನೆಯಲ್ಲಿ ಗಲಾಟೆ ಶುರು ಮಾಡಿದ್ದಾನೆ. ಇದರಿಂದ ರೋಷಿ ಹೋದ ಪತ್ನಿ ರಂಜಿತಾ, ಅತ್ತೆ ಹಾಗೂ ಬಾಮೈದ ಸೇರಿ ಈತನ ಮೇಲೆ ಪ್ರತಿ ದಾಳಿ ಮಾಡಿದ್ದಾರೆ. 

ಈ ಕೊಲೆಯ ತನಿಖೆಯ ಆಳಕ್ಕಿಳಿದ ಆರ್.ಜಿ ನಗರ ಠಾಣಾ ಇನ್ಸಪೆಕ್ಟರ್ ಅವರಿಗೆ ಇನ್ನೂ ಏನೋ ಮಿಸ್ ಆಗ್ತಿದೆ ಅನ್ನೋದಕ್ಕೆ ಶುರುವಾಗುತ್ತೆ. ಮೊಬೈಲ್ ಸಿಡಿಆರ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್ ನತ್ತ ಮೊರೆ ಹೋಗ್ತಾರೆ. ಆಗ ಈ ಕೊಲೆಯಲ್ಲಿ ಇನ್ನಷ್ಟು ಜನರು ಇರುವುದು ಗೊತ್ತಾಗುತ್ತೆ. ಅಲ್ಲದೇ ಆ ದಿಕ್ಕಿನಲ್ಲಿ ತನಿಖೆ ನಡೆಸಿ ಮತ್ತೆ ಅಭಿಷೇಕ, ಆತೀಷ, ಮಹೇಶಕುಮಾರ, ಲೋಕೇಶ, ರಮೇಶ ಅನ್ನೋರನ್ನ ಅರೆಸ್ಟ್ ಮಾಡುತ್ತಾರೆ. 

ದೇವೇಗೌಡರ ವಯಸ್ಸಿಗೆ ಮರ್ಯಾದೆ ಕೊಡುವುದು ಕಲಿಯಬೇಕು: ಡಿಕೆಶಿಗೆ ನಿಖಿಲ್‌ ಕುಮಾರಸ್ವಾಮಿ ಟಾಂಗ್

ಇನ್ನೂ ಈಶ್ವರನನ್ನ ಕೊಂದ ನಂತರ ಶವವನ್ನು ರಾತ್ರಿಯವರೆಗೆ ಹಾಗೇ ಬಿಟ್ಟು ಮಧ್ಯರಾತ್ರಿ ಗೋಣಿ ಚೀಲದಲ್ಲಿ ತುಂಬಿಕೊಂಡು ನದಿಗೆ ಬಿಸಾಕುವ ಖತರ್ನಾಕ್ ಪ್ಲ್ಯಾನ್ ಸಹ ಹೆಂಡತಿ ಕುಟುಂಬ ಮಾಡಿಕೊಂಡಿದ್ದರಂತೆ. ಆದ್ರೆ ಇವರ ಮನೆಯಲ್ಲಿನ ಗಲಾಟೆ ಕೂಗಾಟ ಕೇಳಿಸಿಕೊಂಡಿದ್ದ ಅಪಾರ್ಟಮೆಂಟನ ಇತರೇ ನಿವಾಸಿಗಳು ಈಶ್ವರನ ಮನೆಯವರಿಗೆ ಗಲಾಟೆ ವಿಷಯ ತಿಳಿಸಿದ ಕಾರಣದಿಂದಾಗಿ ಅವರು ಬಂದು ನೋಡಿದಾಗ ಕೊಲೆ ಬೆಳಕಿಗೆ ಬಂದಿದೆ. 

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಈ ಪ್ರಕರಣ ಇದಕ್ಕೆ ತದ್ವಿರುದ್ದವಾಗಿದೆ. ಕುಟುಂಬದ ಸಮಸ್ಯೆಗಳು ಏನೇ ಇರಲಿ,  ಮಾತಾಡಿಕೊಂಡು ಬಗೆಹರಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಜಗಳ ತೆಗೆದ ಪತಿಯನ್ನು ಕೊಲೆಯೇ ಮಾಡುವ ಮಟ್ಟಿಗೆ ಹೋಗಿದ್ದು ದುರದೃಷ್ಟಕರ. ಮಾಡಿದ ತಪ್ಪಿಗೆ ಕೊಲೆಯಾದ ಈಶ್ವರನ ಪತ್ನಿ, ಅತ್ತೆ ಹಾಗು ಭಾಮೈದ ಜೈಲು ಕಂಬಿ ಎಣಿಸುತ್ತಿದ್ದಾರೆ. ಆದರೆ ಏನು ಅರಿಯದ ನಾಲ್ಕು ದಿನದ ಕಂದಮ್ಮ ತಂದೆಯನ್ನು ಕಳೆದುಕೊಂಡಿದ್ದಲ್ಲದೇ ತಾಯಿಯೊಂದಿಗೆ ಕೃಷ್ಣ ಗೃಹ ಸೇರಬೇಕಾಗಿ ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ