ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಫ್ಘಾನಿಸ್ತಾನದ ಮಹಿಳೆಯರನ್ನು ಮುಕ್ತಗೊಳಿಸಿ ಎನ್ನುವ ಘೋಷಣೆಯಿರುವ ಡ್ರೆಸ್ ತೊಟ್ಟು ಬ್ರೇಕ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಿರಾಶ್ರಿತ ತಂಡದ ಸ್ಪರ್ಧಿ ಮನಿಶಾ ತಾಲಶ್ ಅನರ್ಹಗೊಂಡ ಸ್ಪರ್ಧಿಯನ್ನು ಅನರ್ಹಗೊಳಿಸಲಾಗಿದೆ.

ಪ್ಯಾರಿಸ್: ಒಲಿಂಪಿಕ್ಸ್‌ನ ಬ್ರೇಕ್‌ ಡ್ಯಾನ್ಸ್‌ ಸ್ಪರ್ಧೆ ವೇಳೆ 'ಫ್ರೀ ಆಫ್ಘನ್ ವುಮೆನ್' (ಅಫ್ಘಾನಿಸ್ತಾನದ ಮಹಿಳೆಯರನ್ನು ಮುಕ್ತಗೊಳಿಸಿ) ಎಂದು ಬರೆಯಲಾಗಿದ್ದ ಬಟ್ಟೆ ಧರಿಸಿದ್ದ ಸ್ಪರ್ಧಿಯನ್ನು ಆಯೋಜಕರು ಅನರ್ಹಗೊಳಿಸಿದ್ದಾರೆ. 

ಅಫ್ಘಾನಿಸ್ತಾನ ಮೂಲದ, ಒಲಿಂಪಿಕ್ಸ್‌ನ ನಿರಾಶ್ರಿತ ತಂಡದ ಸ್ಪರ್ಧಿ ಮನಿಶಾ ತಾಲಶ್ ಅನರ್ಹಗೊಂಡ ಸ್ಪರ್ಧಿ. ಶನಿವಾರ ಸ್ಪರ್ಧೆ ವೇಳೆ 21 ವರ್ಷದ ಮನಿಶಾ, ಫ್ರೀ ಆಫ್ಘನ್ ವುಮೆನ್ ಎಂದು ಬರೆದಿದ್ದ ಬಟ್ಟೆ ಧರಿಸಿದ್ದರು. ಒಲಿಂಪಿಕ್ಸ್‌ನಲ್ಲಿ ರಾಜಕೀಯ ಘೋಷಣೆಗಳಿಗೆ ನಿಷೇಧವಿರುವುದರಿಂದ ಮನಿಶಾರನ್ನು ಆಯೋಜಕರು ಅನರ್ಹಗೊಳಿಸಿದ್ದಾರೆ. ಅಫ್ಘಾನಿಸ್ತಾನ ದಲ್ಲಿ 2021ರಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಪಲಾಯನಗೈದಿದ್ದ ಮನಿಶಾ, ಸ್ಪೇನ್‌ನಲ್ಲಿ ನೆಲೆಸಿದ್ದಾರೆ.

Scroll to load tweet…

ಲಿಂಗತ್ವ ವಿವಾದದ ನಡುವೆ ಚಿನ್ನ ಗೆದ್ದ ಬಾಕ್ಸರ್ ಇಮಾನ

ಪ್ಯಾರಿಸ್: ಲಿಂಗತ್ವ ವಿವಾದಗಳ ನಡುವೆಯೇ ಅಲ್ಲೇರಿಯಾದ ಬಾಕ್ಸರ್ ಇಮಾನೆ ಖೆಲಿಫ್ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಮಹಿಳೆಯರ 66 ಕೆ.ಜಿ. ವೆಲ್ವೆರ್ ವೇಟ್ ವಿಭಾಗದ ಫೈನಲ್‌ನಲ್ಲಿ ಚೀನಾದ ಯಾಂಗ್ ಲಿಯು ವಿರುದ್ಧ 5:0 ಅಂತದರಲ್ಲಿ ಗೆದ್ದರು. ಮಹಿಳೆಯಾಗಿ ಜನಿಸಿದ್ದರೂ ಪುರುಷ ಹಾರ್ಮೋನ್ ಜಾಸ್ತಿಯಿದ್ದ ಕಾರಣ, ಇಮಾನೆಯನ್ನು ಮಹಿಳೆಯರ ವಿಭಾಗದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

ಒಲಿಂಪಿಕ್‌ ಹಬ್ಬಕ್ಕೆ ಪ್ಯಾರಿಸ್‌ನಲ್ಲಿಂದು ಅದ್ಧೂರಿ ತೆರೆ; ಸಮಾರೋಪ ಸಮಾರಂಭದ ಲೇಟೆಸ್ಟ್‌

ಹಾಕಿ ತಂಡಕ್ಕೆ ಭಾರತದಲ್ಲಿ ಅದ್ದೂರಿ ಸ್ವಾಗತ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರರು ಶನಿವಾರ ತವರಿಗೆ ಆಗಮಿಸಿದ್ದು, ಅದ್ದೂರಿ ಸ್ವಾಗತ ಕೋರಲಾಯಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಹುತೇಕ ಆಟಗಾ ರರು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಣಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ನೂರಾರು ಅಭಿಮಾನಿಗಳು ಹೂ ಹಾರ ಹಾಕಿ, ಸಿಹಿ ಹಂಚಿ, ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತಿಸಲಾಯಿತು. 

ಇದಾದ ಬಳಿಕ ಆಟಗಾರರು ನಗರದ ಹಾಕಿ ಕ್ರೀಡಾಂಗಣದ ಹೊರಗಿರುವ, ದಿಗ್ಗಜ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ತಂಡದ ಗೋಲ್‌ಕೀಪರ್ ಶ್ರೀಜೇಶ್ ಜೊತೆ ಅಮಿತ್‌ ರೋಹಿದಾಸ್, ಅಭಿಷೇಕ್ ಹಾಗೂ ಇನ್ನೂ ಕೆಲ ಆಟಗಾರರು ಪ್ಯಾರಿಸ್‌ನಲ್ಲೇ ಉಳಿದುಕೊಂಡಿದ್ದು, ಭಾನುವಾರ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಕಂಚು ಗೆದ್ದ ಅಮನ್ ಒಲಿಂಪಿಕ್ ಕುಸ್ತಿ ಸ್ಪರ್ಧೆಗೆ ಕೇವಲ 10 ಗಂಟೆಗೆ ಮೊದಲು 4.6 kg ತೂಕ ಇಳಿಸಿದ್ದೇಗೆ?

₹2.4 ಕೋಟಿ ಬಹುಮಾನ

ತವರಿಗೆ ಆಗಮಿಸಿದ ಹಾಕಿ ಆಟಗಾರರನ್ನು ಕೇಂದ್ರ ಕ್ರೀಡಾ ಸಚಿವ ಮಾನ್ ಸುಖ್ ಮಾಂಡವೀಯ ಅವರು ಸನ್ಮಾನಿಸಿದರು. ಇದೇ ವೇಳೆ ಅವರು ತಂಡಕ್ಕೆ ₹2.40 ಕೋಟಿ ನಗದು ಬಹು ಮಾನದ ಚೆಕ್ ಹಸ್ತಾಂತರಿಸಿದರು.

ಅಭಿನವ್ ಬಿಂದ್ರಾಗೆ ಐಒಸಿ ಒಲಿಂಪಿಕ್ ಆರ್ಡರ್ ಗೌರವ! 

ಪ್ಯಾರಿಸ್: ಒಲಿಂಪಿಕ್ ಕ್ರೀಡಾಕೂಟದ ಪ್ರಚಾರ ಹಾಗೂ ಬೆಳವಣಿಗೆಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಭಾರತದ ದಿಗ್ಗಜ ಶೂಟ‌ರ್, ಒಲಿಂಪಿಕ್ ಚಿನ್ನ ವಿಜೇತ ಅಭಿನವ್ ಬಿಂದ್ರಾ ಅವರು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) 'ಒಲಿಂಪಿಕ್ ಆರ್ಡರ್' ಗೌರವಕ್ಕೆ ಭಾಜನರಾಗಿದ್ದಾರೆ. 

ಪ್ಯಾರಿಸ್‌ನಲ್ಲಿ ಶನಿವಾರ ನಡೆದ ಐಒಸಿಯ 142ನೇ ವಾರ್ಷಿಕ ಸಭೆಯಲ್ಲಿ ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು ಬಿಂದ್ರಾಗೆ ಈ ಗೌರವವನ್ನು ಪ್ರದಾನ ಮಾಡಿದರು. ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. 2018ರಿಂದ ಐಒಸಿ ಅಥ್ಲೆಟ್‌ಗಳ ಸಮಿತಿಯ ಸದಸ್ಯರಾಗಿದ್ದಾರೆ. 

ಏನಿದು ಒಲಿಂಪಿಕ್ ಆರ್ಡರ್?: ಒಲಿಂಪಿಕ್‌ನಲ್ಲಿ ವೈಯಕ್ತಿಕ ಸಾಧನೆ, ಕ್ರೀಡಾಕೂಟದ ಬಗ್ಗೆ ಸಕಾರಾತ್ಮಕ ಪ್ರಚಾರ, ಕ್ರೀಡೆಯ ಅಭಿವೃದ್ಧಿಗೆ ವಿವಿಧ ರೀತಿಗಳಲ್ಲಿ ನೆರವಾಗುವ ವ್ಯಕ್ತಿಗಳಿಗೆ ಐಒಸಿ ಒಲಿಂಪಿಕ್ ಆರ್ಡರ್ ಗೌರವ ನೀಡಲಿದೆ. ಒಲಿಂಪಿಕ್ ಆರ್ಡರ್ ಸಮಿತಿ ಈ ಗೌರವಕ್ಕೆ ಹೆಸರುಗಳನ್ನು ಶಿಫಾರಸು ಮಾಡಲಿದ್ದು, ಕಾರ್ಯಕಾರಿ ಸಮಿತಿ ನಿರ್ಧರಿಸಲಿದೆ.