3 ಕೆಜಿ ಆಲುಗಡ್ಡೆಯಿಂದ ಯುಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತು, ಅಚ್ಚರಿಯಾದರೂ ಸತ್ಯ!

By Chethan KumarFirst Published Aug 11, 2024, 4:06 PM IST
Highlights

ಕರ್ತವ್ಯದಲ್ಲಿರುವ ಪೊಲೀಸರು ಹಲವು ಕಾರಣಗಳಿಂದ ಅಮಾನತ್ತಾಗಿದ್ದಾರೆ. ಆದರೆ ಇದೀಗ ಆಲುಗಡ್ಡೆಯಿಂದ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತ್ತಾದ ಘಟನೆ ನಡೆದಿದೆ.
 

ಲಖನೌ(ಆ.11) ಕಾನೂನು ಸುವ್ಯವಸ್ಥೆ ಕಾಪಾಡಿ ಜನಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರು ಕೆಲವು ಬಾರಿ ನಿಯಮ ಉಲ್ಲಂಘಿಸಿ ಶಿಕ್ಷೆಗೆ ಗುರಿಯಾಗಿದ್ದಾರೆ. ಕೆಲವು ಬಾರಿ ಅಮಾನತ್ತುಗೊಂಡಿದ್ದಾರೆ. ಇದೀಗ ಪೊಲೀಸ್ ಇನ್ಸ್‌ಪೆಕ್ಟರ್ 3 ಕೆಜಿ ಆಲುಗಡ್ಡೆ ಕಾರಣದಿಂದ ಅಮಾನತುಗೊಂಡ ಘಟನೆ ಉತ್ತರ ಪ್ರದೇಶದ ಕನೌಜ್‌ನಲ್ಲಿ ನಡೆದಿದೆ. ಸಬ್ ಇನ್ಸ್‌ಪೆಕ್ಟರ್ ರಾಮ್‌ಕೃಪಾಲ್ ಆಡಿಯೋ ವೈರಲ್ ಆದ ಬೆನ್ನಲ್ಲೇ ಹಿರಿಯ ಅಧಿಕಾರಿಗಳು  ಕ್ರಮ ಕೈಗೊಂಡಿದ್ದಾರೆ.

ಸೌರಿಖ್ ಪೊಲೀಸ್ ಠಾಣಾ ವ್ಯಾಪ್ತಿಯ ಚಪುನ್ನ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ರಾಮ್‌ಕೃಪಾಲ್ ಇದೀಗ ಹಿರಿಯ ಅಧಿಕಾರಿಗಳ ಕೈಗೆ 3 ಕೆಜಿ ಆಲುಗಡ್ಡೆಯಿಂದ ಸಿಕ್ಕಿಬಿದ್ದಿದ್ದಾರೆ. ರಾಮ್‌ಕೃಪಾಲ್ ಅವರ ಆಡಿಯೋ ಒಂದು ಹಿರಿಯ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿದೆ.  ರಾಮ್‌ಕೃಪಾಲ್ ಲಂಚ ಕೇಳಿದ ಆಡಿಯೋ ಇದಾಗಿದೆ. ರಾಮ್‌ಕೃಪಾಲ್ ವ್ಯಕ್ತಿಯೊಬ್ಬರಲ್ಲಿ ಮಾತನಾಡುತ್ತಾ 5 ಕೆಜಿ ಆಲುಗಡ್ಡೆ ಲಂಚದ ರೂಪದಲ್ಲಿ ನೀಡುವಂತೆ ಸೂಚಿಸಿದ್ದಾರೆ. ಆದರೆ ವ್ಯಕ್ತಿ, ಅಷ್ಟು ಶಕ್ತಿ ತನ್ನಲ್ಲಿ ಇಲ್ಲ. 5 ಕೆಜಿ ಆಲುಗಡ್ಡೆ ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ಗರಿಷ್ಠ 2 ಕೆಜಿ ಆಲುಗಡ್ಡೆ ನೀಡುವುದಾಗಿ ಸೂಚಿಸಿದ್ದಾರೆ. ಈ ಕುರಿತು ಸಬ್ ಇನ್ಸ್‌ಪೆಕ್ಟರ್ ರಾಮ್‌ಕೃಪಾಲ್ ಹಾಗೂ ವ್ಯಕ್ತಿ ನಡುವೆ ಭಾರಿ ಚೌಕಾಸಿ ನಡೆದಿದೆ.

Latest Videos

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಸಿದ ಆರೋಪ; ನಾಲ್ವರು ಶಿಕ್ಷಕರು ಅಮಾನತು

ಆರ್ಥಿಕವಾಗಿ ಅಷ್ಟು ಸಾಮರ್ಥ್ಯ ತನ್ನಲ್ಲಿ ಇಲ್ಲ. ಹೀಗಾಗಿ ಈ ಲಂಚದ ಬೇಡಿಕೆ ಹೆಚ್ಚಾಯಿತು ಎಂದಿದ್ದಾನೆ. ಕೊನೆಗೆ ಸಬ್ ಇನ್ಸ್‌ಪೆಕ್ಟರ್ 3 ಕೆಜಿ ಆಲುಗಡ್ಡೆಯನ್ನು ಲಂಚವಾಗಿ ಪಡೆಯಲು ಡೀಲ್ ಒಕೆ ಮಾಡಿದ್ದಾರೆ. ಈ ಆಡಿಯೋ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಕ್ಕಿದೆ. ಇದರಿಂದ ರಾಮ್‌ಕೃಪಾಲ್ ಅಮಾನತುಗೊಂಡಿದ್ದಾರೆ. ಆದರೆ ಇದು ಕೇವಲ ಆಲುಗಡ್ಡೆ ವಿಚಾರವಲ್ಲ. ಇದರ ಹಿಂದಿನ ಕತೆ ಬೇರೆ ಇದೆ.

 

UP Not for beginners
In Kannauj, a cop asked for ‘5 Kg Aloo’ as a bribe. The other person expressed inability to give & said he could afford only 2 Kgs. The Deal was settled at 3 Kgs. The Cop has been suspended, ACP Kannauj says that Aloo was being used as a Code word. pic.twitter.com/ZBkZFd40O9

— Tanishq Punjabi (@tanishqq9)

 

3 ಕೆಜಿ ಆಲುಗಡ್ಡೆ ಲಂಚವಾಗಿ ಪಡೆದ ಕಾರಣ ರಾಮ್‌ಕೃಪಾಲ್ ಅಮಾನತುಗೊಂಡಿಲ್ಲ. ಆಲುಗಡ್ಡೆ ಕೇವಲ ಕೋಡ್‌ ವರ್ಡ್ ಮಾತ್ರ. 5 ಕೆಜಿ ಆಲುಗಡ್ಡೆಗೆ ರಾಮ್‌ಕೃಪಾಲ್ ಬೇಡಿಕೆ ಇಟ್ಟಿದ್ದಾರೆ ಎಂದರೆ ಇದು 5 ಸಾವಿರ ರೂಪಾಯಿ ಆಗಿರಬಹುದು, ಅಥವಾ 5 ಲಕ್ಷ ರೂಪಾಯಿ ಆಗಿರಬಹುದು ಎಂದು ಕನೌಜ್‌ನ ಎಸಿಪಿ ಅಜಯ್ ಕುಮಾರ್ ಹೇಳಿದ್ದಾರೆ. 

ಇದು ಮೇಲ್ನೋಟಕ್ಕೆ 3 ಕೆಜಿ ತರಕಾರಿ ಮಾತು ಎನಿಸಬಹುದು. ಆದರೆ ಇದರ ಹಿಂದೆ ಅತೀ ದೊಡ್ಡ ಲಂಚದ ಬೇಡಿಕೆ ಇದೆ. ಹೀಗಾಗಿ ಅಮಾನತು ಶಿಕ್ಷೆ ವಿಧಿಸಿದ್ದೇವೆ. ಇದೀಗ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಆಡಿಯೋ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಈ ಡೀಲ್ ಕುರಿತು ಮಾಹಿತಿ ಬಹಿರಂಗವಾಗಲಿದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.
ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಧಾರ

click me!