ಕಾಂಗ್ರೆಸ್ ಮುಖಂಡನ ಕೊಂದ ಹಂತಕನ ಮೇಲೆ ಪೊಲೀಸ್ ಫೈರಿಂಗ್ 

By Ravi Nayak  |  First Published Jul 16, 2022, 1:36 PM IST

ಕಲಬುರಗಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆಯೇ ಗುಂಡಿನ ಸದ್ದು. ಕಾಂಗ್ರೆಸ್ ಮುಖಂಡನೊಬ್ಬನನ್ನು ಹಾಡುವಾಗಲೇ ಬರ್ಬರವಾಗಿ ಕೊಂದು ಹಾಕಿದ್ದ ಹಂತಕನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ..


ಕಲಬುರಗಿ (ಜು.16) :- ಕಲ್ಬುರ್ಗಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು ಮಾರ್ದನಿಸಿದೆ. ಕಾಂಗ್ರೆಸ್ ಮುಖಂಡನೊಬ್ಬನನ್ನು ಹಾಡುವಾಗಲೇ ಬರ್ಬರವಾಗಿ ಕೊಂದು ಹಾಕಿದ ಹಂತಕನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಮತ್ತು ಶಹಾಬಾದ್ ನಗರ ಸಭೆಯ ಅಧ್ಯಕ್ಷೆಯ ಪತಿ ಗಿರೀಶ ಕಂಬನೂರನನ್ನ ಹಾಡು ಹಗಲೇ ಕೊಂದು ಹಾಕಿದ್ದ ಹಂತಕನ ಮೇಲೆ ಪೊಲೀಸ್ ರು ಫೈರಿಂಗ್ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಶಹಾಬಾದ ಪಟ್ಟಣದಲ್ಲಿ ನಲ್ಲಿ ನಡೆದಿದೆ. 

ರೌಡಿಶೀಟರ್ ವಿಜಯಕುಮಾರ ಹಳ್ಳಿ ಎನ್ನುವಾತನೇ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಕೊಲೆ ಆರೋಪಿ. ಇದೇ ತಿಂಗಳ ಜುಲೈ 11 ರಂದು ಶಹಾಬಾದ ರೈಲ್ವೆ ಸ್ಟೇಷನ್ (Shahabad railway station) ಮುಂಬಾಗದಲ್ಲಿ ಗಿರಿಶ ಕಂಬನೂರನನ್ನು 7-8 ಜನ ಹಂತಕರು ಅಟ್ಯಾಕ್ (attack) ಮಾಡಿ ಕೊಂದು ಹಾಕಿದ್ದರು. ಅಲ್ಲದೇ ಅಂಗಾತ ನೆಲಕ್ಕೆ ಬಿದ್ದಿದ್ದ ಗಿರೀಶ ಕಂಬನೂರನ ಹೊಟ್ಟೆಯಲ್ಲಿ ಉದ್ದನೆಯ ತಲವಾರವೊಂದರಿಂದ ಆಳವಾಗಿ ಇರಿದು, ಅದನ್ನು ಹೊಟ್ಟೆಯಲ್ಲಿಯೇ ಬಿಟ್ಟು ಹೋಗಿ ವಿಕೃತಿ ಮೆರೆದಿದ್ದರು. 

Tap to resize

Latest Videos

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತಿಗಾಗಿ ಪತ್ನಿ ಧರಣಿ: ಬೇರೆ ಜಾತಿ ಕಾರಣಕ್ಕೆ ಮತ್ತೊಂದು ವಿವಾಹವಾದ ಗಂಡ..!

ಪೊಲೀಸರ ಮೇಲೆ ದಾಳಿ: ಶಹಾಬಾದ್ ಕಾಂಗ್ರೆಸ್ ಮುಖಂಡ ಗಿರೀಶ್ ಕಂಬನೂರ್ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆಗಿರುವ ವಿಜಯ್ ಕುಮಾರ್ ಹಳ್ಳಿಯನ್ನ ಪೊಲೀಸರು ನಿನ್ನೆಯಷ್ಟೆ ಬಂಧಿಸಿದ್ದರು. ಆತ ಮಚ್ಚು ಬಿಸಾಕಿ ಹೋಗಿದ್ದ ಸ್ಥಳದಲ್ಲಿ ಆತನನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದ ಸಂದರ್ಭದಲ್ಲಿ ಫೈರಿಂಗ್ ನಡೆದಿದೆ. ಬಿಸಾಕಿದ್ದ ತಲವಾರವೊಂದನ್ನು ತೆಗೆಯುವ ಸಂದರ್ಭದಲ್ಲಿ ಅದರಿಂದಲೇ ಆತ ಪಕ್ಕದಲ್ಲಿದ್ದ ಪಿ.ಎಸ್.ಐ ಸುವರ್ಣ ಅವರ ಮೇಲೆ ಮಾರಕಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಲು ವಿಜಯ್ ಕುಮಾರ್ ಹಳ್ಳಿ ಯತ್ನಿಸಿದ್ದಾನೆ.  ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ಯಾತನೂರ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ತಮ್ಮ ಸೊಂಟದಲ್ಲಿದ್ದ ಪಿಸ್ತೂಲು ತೆಗೆದು ಆತನಿಗೆ ವಾರ್ನ ಮಾಡಿದ್ದಾರೆ. ಅದಾಗ್ಯೂ ಆರೋಪಿ ವಿಜಯಕುಮಾರ ಮಾರಕಾಸ್ತ್ರ ಬಿಡದಾದಾಗ, ಆತನ ಕಾಲಿನತ್ತ ಗುರಿಯಿಟ್ಟು ಫೈರಿಂಗ್ ಮಾಡುತ್ತಾರೆ. ಒಂದು ಗುಂಡು ವಿಜಯಕುಮಾರನ ಬಲ ಮೊಳಕಾಲಿಗೆ ತಗುಲಿದೆ. 

ಪಿ.ಎಸ್.ಐ ಸುವರ್ಣಾಗೂ ಗಾಯ: ಆರೋಪಿ ವಿಜಯಕುಮಾರ ಹಳ್ಳಿ ನಡೆಸಿದ ಮಾರಕಾಸ್ತ್ರದ ದಾಳಿಯಿಂದ ಶಹಾಬಾದ ಪೊಲೀಸ್ ಠಾಣೆಯ ಪಿ.ಎಸ್.ಐ ಸುವರ್ಣ ಹಳ್ಳಿ ಅವರಿಗೂ ಗಂಭೀರ ಗಾಯಗಳಾಗಿವೆ. ಸರ್ಕಲ್ ಇನ್ಸಪೆಕ್ಟರ್ (circle inspector) ಪ್ರಕಾಶ ಯಾತನೂರ ನಡೆಸಿದ ಫೈರಿಂಗನಲ್ಲಿ ಗಾಯಗೊಂಡ ಕೊಲೆ ಆರೋಪಿ ವಿಜಕುಮಾರ ಹಳ್ಳಿಯನ್ನು ಹಾಗೂ ಆತನ ದಾಳಿಯಿಂದ ಗಾಯಗೊಂಡ ಪಿ.ಎಸ್.ಐ ಸುವರ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆತರಲಾಗುತ್ತದೆ.

ಇದನ್ನೂ ಓದಿ: ಭೋವಿ ಶ್ರೀ ಸೇರಿ ಇಬ್ಬರು ಶಾಸಕರಿಗೆ ಕೊಲೆ ಬೆದರಿಕೆ ಸಂದೇಶ

ಪಿ.ಎಸ್.ಐ ಸುವರ್ಣ ಅವರನ್ನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದರೆ, ಫೈರಿಂಗನಲ್ಲಿ ಗಾಯಗೊಂಡಿರುವ ಕೊಲೆ ಆರೋಪಿ ವಿಜಕುಮಾರ ಹಳ್ಳಿಯನ್ನು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಎಸ್ಪಿ ಭೇಟಿ.. ಪಿ.ಎಸ್.ಐ ಆರೋಗ್ಯ ವಿಚಾರಣೆ: ಬಸವೇಶ್ವರ ಆಸ್ಪತ್ರೆಗೆ ಎಸ್ಪಿ ಇಶಾ ಪಂಥ್ ಭೇಟಿ ನೀಡಿ ಗಾಯಾಳು ಪಿ.ಎಸ್.ಐ ಸುವರ್ಣಾ ಅವರ ಆರೋಗ್ಯ ವಿಚಾರಿಸಿದರು. ನಂತರ ಸರಕಾರಿ ಆಸ್ಪತ್ರೆಗೂ ಭೇಟಿ ನೀಡಿ ಆರೋಪಿ ವಿಜಯಕುಮಾರನ ಸ್ಥಿತಿಗತಿ ಗಮನಿಸಿದರು. 

ವಿಜಯಕುಮಾರ ಹಳ್ಳಿ ಮೇಲೆ ಒಟ್ಟು 6 ಕೇಸ್: ಆರೋಪಿ ವಿಜಕುಮಾರ ಹಳ್ಳಿ ಮೇಲೆ ಎರಡು ಕೊಲೆ ಪ್ರಕರಣ, ಎರಡು ಕೊಲೆ ಯತ್ನ ಪ್ರಕರಣ, ಜೈಲಿನಲ್ಲಿದ್ದುಕೊಂಡೇ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಒಟ್ಟು 6 ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ ಎಂದು ಎಸ್ಪಿ ಇಶಾ ಪಂಥ್ ತಿಳಿಸಿದ್ದಾರೆ. 

ಗಾಯಾಳು ಪಿ.ಎಸ್.ಐ ಸುವರ್ಣ ಸದ್ಯ ಬಸವೇಶ್ವರ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿಜಕುಮಾರ ನಡೆಸಿದ ದಾಳಿಯಿಂದ ಪಿ.ಎಸ್.ಐ ಸುವರ್ಣ ಅವರ ಬಲ ಭುಜಕ್ಕೆ ತೀವ್ರ ಗಾಯವಾಗಿದೆ ಎಂದು ಎಸ್ಪಿ ಇಶಾಂತ್ ತಿಳಿಸಿದ್ದಾರೆ. 

ಇದನ್ನೂ ಓದಿ: ಅಮ್ಮನ ಹುಟ್ಟುಹಬ್ಬದಂದು ಸೂಸೈಡ್‌ ಮಾಡಿಕೊಂಡ ಮಗ, 

ಕೊಲೆ ಮಾಡಿ ಮಾರಕಾಸ್ತ್ರ ದೇಹದಲ್ಲೇ ಬಿಡುವುದು ಈತನ ಸ್ಟೈಲ್: ಕೊಲೆ ಮಾಡಿ ಕೊಲೆಯಾದವನ ದೇಹದಲ್ಲಿಯೇ ಮಾರಕಾಸ್ತ್ರ ಒಂದನ್ನು ಬಿಟ್ಟು ಹೋಗುವುದು ಕೊಲೆ ಆರೋಪಿ ವಿಜಯಕುಮಾರ್ ಹಳ್ಳಿಯ ಕೊಲೆ ಶೈಲಿಯಾಗಿತ್ತು. ಗಿರೀಶ್ ಕಂಬನೂರ್ ನ ಹೊಟ್ಟೆಯಲ್ಲಿ ತಲವಾರವೊಂದನ್ನು ಬಿಟ್ಟು ಹೋಗಿದ್ದ. ಅಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ ಗಿರೀಶನ ಅಣ್ಣ ಸತೀಷನನ್ನೂ ಸಹ ಇದೇ ವಿಜಕುಮಾರ ಹಳ್ಳಿ ಆಂಡ್ಯ ಗ್ಯಾಂಗ್ ಇದೇ ರೀತಿ ಕೊಲೆ ಮಾಡಿದ್ದರು. ಆಗಲೂ ಸತೀಷನ ದೇಹದಲ್ಲಿ ಮಾರಕಾಸ್ತ್ರವೊಂದನ್ನು ಬಿಟ್ಟು ಹೋಗಿದ್ದರು. ತನ್ನ ಬಗ್ಗೆ ಜನರಲ್ಲಿ ಭಯ ಹುಟ್ಟಿಸಲು ವಿಜಯಕುಮಾರ ಈ ರೀತಿ ಮಾಡುತ್ತಿದ್ದ ಎಂದು ಎಸ್ಪಿ ಇಶಾ ಪಂಥ್ ತಿಳಿಸಿದ್ದಾರೆ.

click me!