ಪ್ರೀತಿಸಿ ಮದುವೆಯಾದ ಪತಿಗಾಗಿ ಪತ್ನಿ ಧರಣಿ: ಬೇರೆ ಜಾತಿ ಕಾರಣಕ್ಕೆ ಮತ್ತೊಂದು ವಿವಾಹವಾದ ಗಂಡ..!

By Kannadaprabha News  |  First Published Jul 16, 2022, 1:19 PM IST

ಪತಿ ಮಂಜುನಾಥ ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ, ನನ್ನ ಪತಿ ನನಗೆ ಬೇಕೆಂದು ಕಣ್ಣೀರಿಡುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿರುವ ಸುಧಾ


ಚಿಕ್ಕಬಳ್ಳಾಪುರ(ಜು.16):  ಪ್ರೀತಿಸಿ ಮದುವೆಯಾದ ಪತ್ನಿ ಇದೀಗ ತನ್ನ ಪತಿಗಾಗಿಯೇ ಎರಡು ದಿನಗಳಿಂದ ಪತಿಯ ಮನೆ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯ ಸಾದೇನಹಳ್ಳಿಯಲ್ಲಿ ನಡೆದಿದೆ. ಪತಿಗಾಗಿ ಧರಣಿ ನಡೆಸುತ್ತಿರುವ ಸುಧಾ(ಹೆಸರು ಬದಲಾಯಿಸಲಾಗಿದೆ) ಎಂಬುವರು ತನ್ನ ಪತಿ ಮಂಜುನಾಥ ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ, ನನ್ನ ಪತಿ ನನಗೆ ಬೇಕೆಂದು ಕಣ್ಣೀರಿಡುತ್ತಾ ಆಹೋರಾತ್ರಿ ಧರಣಿ ನಡೆಸುತ್ತಿದ್ದಾಳೆ.

ಗೌರಿಬಿದನೂರು ಕಸಬಾ ಹೋಬಳಿಯ ಶಂಭುಕ ನಗರದ ನಿವಾಸಿಯಾದ ಸುಧಾ 4 ವರ್ಷಗಳ ಹಿಂದೆ ಸಾದೇನಹಳ್ಳಿಯ ಮಂಜುನಾಥನನ್ನು ಪ್ರೀತಿಸಿ ವಿವಾಹ ಆಗಿದ್ದಳು. ಆದರೆ ಇತ್ತೀಚೆಗೆ ಮಂಜುನಾಥ ಮನೆ ಕಡೆಯವರು ಸುಧಾ ಪರಿಶಿಷ್ಟ ಜಾತಿಯವಳು ಎಂಬ ಕಾರಣಕ್ಕೆ ಈತನಿಗೆ ಬೇರೊಂದು ಮದುವೆ ಮಾಡಿ ಚಿಕ್ಕಬಳ್ಳಾಪುರದಲ್ಲಿ ಮನೆ ಮಾಡಿ ಇಟ್ಟಿದ್ದಾರೆ. ಇದರ ವಿರುದ್ಧ ಮೊದಲ ಪತ್ನಿ ಸುಧಾ ಪತಿಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾಳೆ.

Tap to resize

Latest Videos

ಅಮ್ಮನ ಹುಟ್ಟುಹಬ್ಬದಂದು ಸೂಸೈಡ್‌ ಮಾಡಿಕೊಂಡ ಮಗ, ವಿಶ್ವದ ಬೆಸ್ಟ್‌ ಗಿಫ್ಟ್‌ ಎಂದು ಡೆತ್‌ನೋಟ್‌!

ಮಂಜುನಾಥ ಬೇರೊಂದು ಯುವತಿಯ ಜೊತೆ ಮದುವೆ ಆಗಿದ್ದು ಗಂಡು ಮಗು ಸಹ ಆಗಿದೆ. ಅವರನ್ನು ಅವರ ಪೋಷಕರು ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ಮನೆ ಮಾಡಿ ಇಟ್ಟಿದ್ದಾರೆಂದು ಧರಣಿ ನಡೆಸುತ್ತಿರುವ ಪವಿತ್ರ ಮಾಧ್ಯಮಗಳಿಗೆ ತಿಳಿಸಿದ್ದಾಳೆ. ವಿಷಯ ತಿಳಿದು ಕೂಡಲೇ ಮಂಚೇನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪವಿತ್ರ ಜೊತೆ ಚರ್ಚೆ ನಡೆಸಿದ್ದು ಪವಿತ್ರ ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದಾರೆ.
 

click me!