
ಬೆಂಗಳೂರು (ಫೆ.04): ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಸಾವನಪ್ಪಿದ್ದು, ಈ ಸಾವಿಗೆ ವೈದ್ಯರೇ ಕಾರಣವೆಂದು ಪೋಷಕರು ಆರೋಪಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸಿಂಚನ (15) ಮೃತ ಬಾಲಕಿ. ವಾಂತಿ ಬೇಧಿ ಆಗಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಸಿಂಚನ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ.
ಹತ್ತನೆ ತರಗತಿ ಮುಗಿಸಿದ್ದ ಬಾಲಕಿ, ಚಿತ್ರರಂಗದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ನಂತರ ಹಲವು ಚಿತ್ರಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ನಿನ್ನೆ (ಶುಕ್ರವಾರ) ರಾತ್ರಿ ಅನಾರೋಗ್ಯ ಹಿನ್ನಲೆ ಎಸ್ಕೆ ಹೆಲ್ತ್ ಎಂಬ ಆಸ್ಪತ್ರೆಗೆ ಕುಟುಂಬಸ್ಥರು ಸೇರಿಸಿದ್ದರು. ದಾರಿ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಆರು ತಿಂಗಳ ಬಳಿಕ ಶವ ನೋಡಿ ಪೊಲೀಸರೇ ಶಾಕ್
ಒಂದೇ ಕುಟುಂಬದ ಇಬ್ಬರು ಬಾಲಕರು ಸಾವು: ಬಹಿರ್ದೆಸೆಗೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಸಹೋದರರು ಹಳ್ಳದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಗುತ್ತಿಗನೂರು ಗ್ರಾಮ ಹೊರ ವಲಯದಲ್ಲಿ ಸಂಭವಿಸಿದೆ. ಗ್ರಾಮದ ಚೌಡಕಿ ಮಲ್ಲಿಕಾರ್ಜುನ ಪುತ್ರರಾದ ಮಣಿಕಂಠ (12) ಹಾಗೂ ಹರ್ಷವರ್ಧನ (8) ಮೃತ ಬಾಲಕರು. ಗುತ್ತಿಗನೂರು ಗ್ರಾಮದ ಚೌಡಕಿ ಕುಟುಂಬದ ಈ ಬಾಲಕರು ಬೈಲೂರು ಹಾಗೂ ಬಳ್ಳಾರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರನ್ನ ನಂಬಿಸಿ ಅತ್ಯಾಚಾರ: ಆರೋಪಿ ಬಂಧನ
ಗ್ರಾಮದಲ್ಲಿ ನಡೆದಿದ್ದ ಅಂಬಾದೇವಿ ಜಾತ್ರೆಗೆಂದು ಗುತ್ತಿಗನೂರಿಗೆ ಬಂದಿದ್ದರು. ಮೃತ ಮಣಿಕಂಠ, ಹರ್ಷವರ್ಧನ ಸೇರಿದಂತೆ ಮೂವರು ಸಹೋದರರು ಬಹಿರ್ದೆಸೆಗೆ ಹಳ್ಳದ ಕಡೆ ತೆರಳಿದ್ದರು. ಸ್ವಚ್ಛಗೊಳಿಸಿಕೊಳ್ಳಲು ಹಳ್ಳದಲ್ಲಿ ಇಳಿದಾಗ ಕಾಲು ಜಾರಿ ಹಳ್ಳದಲ್ಲಿ ಮುಳುಗಿ ಮೃತಗೊಂಡಿದ್ದಾರೆ. ಬಹಿರ್ದೆಸೆಗೆ ತೆರಳಿದ್ದ ಮಕ್ಕಳು ಬಹಳ ಹೊತ್ತಾದರೂ ಬಾರದಿದ್ದಾಗ ಹುಡುಕಾಟ ನಡೆಸಿದಾಗ ಇಬ್ಬರು ಮಕ್ಕಳು ಸಾವಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹಬ್ಬಕ್ಕೆ ಬಂದು ಮಕ್ಕಳನ್ನು ಕಳೆದುಕೊಂಡೆವು ಎಂದು ಗೋಳಿಟ್ಟರು. ಪೋಷಕರ ಆಕ್ರಂದನ ಕಂಡು ಗ್ರಾಮಸ್ಥರು ಕಣ್ಣೀರಿಟ್ಟರು. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ