ಹಾವೇರಿ: ನೇಣು ಬಿಗಿದುಕೊಂಡು ರಾಣೆಬೆನ್ನೂರು ನಗರಸಭೆ ಸದಸ್ಯೆ ಆತ್ಮಹತ್ಯೆ

By Girish Goudar  |  First Published Feb 3, 2023, 9:51 PM IST

ನೇಣು ಬಿಗಿದುಕೊಂಡು ನಗರಸಭೆ ಸದಸ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವಿನಾಯಕ ನಗರದಲ್ಲಿ ನಡೆದಿದೆ. 


ಹಾವೇರಿ(ಫೆ.03):  ನೇಣು ಬಿಗಿದುಕೊಂಡು ನಗರಸಭೆ ಸದಸ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವಿನಾಯಕ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಉಷಾ ಚಿನ್ನಿಕಟ್ಟಿ ಎಂಬುವರೇ ನೇಣಿಗೆ ಶರಣಾದ ದುರ್ದೈವಿಯಾಗಿದ್ದಾರೆ. 

ರಾಣೆಬೆನ್ನೂರು ನಗರಸಭೆಯ 23 ನೇ ವಾರ್ಡ್‌ನ ಸದಸ್ಯೆ ಉಷಾ ಚಿನ್ನಿಕಟ್ಟಿ ಅವರು ವಿನಾಯಕ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಮಂಗಳೂರು: ಖಾಸಗಿ ವಿಡಿಯೋ ವೈರಲ್, ಬ್ಲ್ಯಾಕ್ ಮೇಲ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

ಉಷಾ ಚಿನ್ನಿಕಟ್ಟಿ ಇಂದು ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆಯಿಂದಲೇ ಉಷಾ ಚಿನ್ನಿಕಟ್ಟಿ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ. 

click me!