ಕೊಪ್ಪಳ: ಮಹಿಳೆ ಕೊಲೆ, ಅಪರಾಧಿಗೆ ಜೀವಾವಧಿ ಶಿಕ್ಷೆ

By Kannadaprabha NewsFirst Published Feb 4, 2023, 1:30 AM IST
Highlights

ಕಲಕಬಂಡಿ ಗ್ರಾಮದ ಈಶಪ್ಪ ಮುದಿಗೌಡ್ರ ಎಂಬಾತ ಮಹಿಳೆಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದ ನ್ಯಾಯಾಲಯ. 

ಕೊಪ್ಪಳ(ಫೆ.04):  ಮಹಿಳೆಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಕಲಕಬಂಡಿ ಗ್ರಾಮದ ಈಶಪ್ಪ ಮುದಿಗೌಡ್ರ ಎಂಬಾತ ಮಹಿಳೆಯನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಲಾಗಿದೆ.

ಪ್ರಕರಣ ಏನು?:

ಯಲಬುರ್ಗಾ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲಕಬಂಡಿ ಗ್ರಾಮದ ನಿವಾಸಿ ಮುತ್ತವ್ವ ಈಕೆಯು ಈಗ್ಗೆ ಸುಮಾರು ಎರಡೂವರೆ ವರ್ಷಗಳಿಂದ ಈಶಪ್ಪ ಮುದೇಗೌಡ್ರ ಈತನೊಂದಿಗೆ ಸಂಬಂಧವನ್ನಿಟ್ಟುಕೊಂಡು ಬಂದಿದ್ದು, ಬಳಿಕ ಮುತ್ತವ್ವ ಈಶಪ್ಪನ ಜತೆ ಸಂಬಂಧ ಬಿಟ್ಟಿದ್ದರು. ಹೀಗಾಗಿ ಮುತ್ತವ್ವ ಮೇಲೆ ದ್ವೇಷದಿಂದ ಕೊಲೆ ಮಾಡಿದ್ದ. ಈ ಕುರಿತು ಯಲಬುರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಐ ನಾಗರಾಜ ಕಮ್ಮಾರ ಅವರು ತನಿಖೆ ಮಾಡಿ ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು.

ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಯ ನೆಪ: ಕನಕಗಿರಿ ಪಾಲಿಟೆಕ್ನಿಕ್‌ ಕಾಲೇಜು ಬೆಂಗಳೂರಿಗೆ ಎತ್ತಂಗಡಿ!

ಪ್ರಕರಣದಲ್ಲಿ ಕಲಕಬಂಡಿ ಗ್ರಾಮದ ಈಶಪ್ಪನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿ.ಎಸ್‌. ರೇಖಾ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗರಾಜ ಆಚಾರ್‌, ಅಂಬಣ್ಣ ಟಿ. ಮತ್ತು ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಎಂ. ಅವರು ವಾದಿಸಿದ್ದರು.

click me!