* ಮನೆಯಲ್ಲಿ ಜೆಡಿಎಸ್ ಮುಖಂಡ, ಮಹಿಳೆ ಹತ್ಯೆ
* ಅನೈತಿಕ ಸಂಬಂಧ ಶಂಕೆ
* ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನ ಚಂದಾಪುರದಲ್ಲಿ ನಡೆದ ಘಟನೆ
ಆನೇಕಲ್, (ಡಿ.12): ಜೆಡಿಎಸ್ ಮುಖಂಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಮಹಿಳೆಯನ್ನು ಮನೆಯೊಂದರಲ್ಲಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಆನೇಕಲ್‌ನ (Anekal)ಚಂದಾಪುರದಲ್ಲಿ ನಡೆದಿದೆ.
ಚಿಕ್ಕಹಾಗಡೆ ನಾರಾಯಣಸ್ವಾಮಿ ಹತ್ಯೆಯಾದ ಜೆಡಿಎಸ್ ಮುಖಂಡರಾಗಿದ್ದು(JDS Leader), ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಅದೇ ಊರಿನ ಕಾವ್ಯ ಎನ್ನುವ ಮಹಿಳೆ ಜತೆ ಅನೈತಿಕ ಸಂಬಂಧ (Illicit Affair) ಇಟ್ಟುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆಕೆಯ ಗಂಡ ಇಲ್ಲದ ಸಮಯ ನೋಡಿಕೊಂಡು ಶನಿವಾರ ಸಂಜೆ ಕಾವ್ಯ ಮನೆಗೆ ನಾರಾಯಣಸ್ವಾಮಿ ಆಗಮಿಸಿದ್ದಾನೆ. ಆ ಸಮಯದಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಇಬ್ಬರನ್ನೂ ಹತ್ಯೆ ಮಾಡಿದ್ದಾರೆ.
Illicit Relationship:ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ, ಊರೆಲ್ಲ ಸುದ್ದಿ
ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು. ಆದ್ದರಿಂದ ಕಾವ್ಯಳ ಗಂಡ ಮುತ್ತುರಾಜ್ ಸ್ನೇಹಿತರನ್ನು ಕರೆದುಕೊಂಡು ಬಂದು ಈ ಕೊಲೆಗಳನ್ನ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಲವು ಸ್ನೇಹಿತರ ಜೊತೆ ಸೇರಿ ಮುತ್ತುರಾಜ್ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಡಿವೈಎಸ್‌ಪಿ ಎಂ. ಮಲ್ಲೇಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾವ್ಯಾಳ ಪತಿ ಮುತ್ತುರಾಜ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದದಾರೆ.
ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ವಿಜಯಪುರ: ಯುವಕನ ಜೊತೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಶ್ವೇಶ್ವರ ನಗರದ ಮನೆಯಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಸಂಜು ಹುಲ್ಲೂರ ಯುವಕನ ಜೊತೆಗೆ ವಾಸವಿದ್ದಳು. ಆದರೆ ಇಂದು ಅಚಾನಕ್ಕಾಗಿ ವಿದ್ಯಾರ್ಥಿನಿ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿದ್ಯಾರ್ಥಿನಿ ಜೊತೆಗಿದ್ದ ಸಂಜು ವಿಜಯಪುರ ನಗರದ ಹೊರ ಭಾಗದ ಯೋಗಾಪುರ ಕಾಲೋನಿಯ ಯುವಕ ಎಂದು ತನಿಖೆ ವೇಳೆ ತಿಳಿದುಬಂದಿದೆ. ಸಂಜುನನ್ನು ಈ ವಿದ್ಯಾರ್ಥಿನಿ ಪ್ರೀತಿ ಮಾಡುತ್ತಿದ್ದಳು ಎಂಬ ಶಂಕೆಯೂ ಸಹ ವ್ಯಕ್ತವಾಗುತ್ತಿದೆ. ಅದು ಅಲ್ಲದೇ ಸಂಜು ಹುಲ್ಲೂರ ವಿದ್ಯಾರ್ಥಿನಿಯನ್ನು ದೈಹಿಕವಾಗಿ ಬಳಸಿಕೊಂಡು ಕೊಲೆಗೈದು ನೇಣಿಗೆ ಹಾಕಿದ್ದಾನೆಂದು ವಿದ್ಯಾರ್ಥಿನಿ ಕುಟುಂಬ ಆರೋಪ ಮಾಡುತ್ತಿದೆ.
ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಸಂಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ತನಿಖೆ ಕೈಗೊಂಡಿದ್ದಾರೆ.
ಲಾರಿ-ಬೈಕ್ ಭೀಕರ ಅಪಘಾತ
ಹಾವೇರಿ: ಲಾರಿ-ಬೈಕ್ ಭೀಕರ ಅಪಘಾತದಲ್ಲಿ ತಂದೆಯ ಕಣ್ಣೆದುರೇ ಪುತ್ರಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಲಾರಿಯ ಚಾಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ಗುತ್ತಲ ತಾಂಡಾ ಬಳಿ ಇಂದು ಈ ಅಪಘಾತ ಸಂಭವಿಸಿದೆ.
ಹಾವೇರಿಯ ದೇವಗಿರಿಯ ಮಾಲಾ ಕೋಟೆಪ್ಪ ತಡಸದ ಎಂಬಾಕೆ ಸಾವಿಗೀಡಾದ ಯುವತಿ. ಈಕೆ ತನ್ನ ತಂದೆಯ ಜತೆ ಬೈಕ್ನಲ್ಲಿ ಸಾಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಯುವತಿ ಸ್ಥಳದಲ್ಲೇ ಸಾವಿಗೀಡಾದರೆ, ಈಕೆಯ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ.