Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!

By Kannadaprabha News  |  First Published Dec 12, 2021, 10:17 AM IST

*2018ರಲ್ಲಿ 8 ಕೇಜಿ ಸಿಕ್ಕಿತ್ತು: 2021ರಲ್ಲಿ 3000 ಕೇಜಿ ಜಪ್ತಿ!
*ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಈಗ ಹೆದ್ದಾರಿ
*ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ


ನವದೆಹಲಿ (ಡಿ. 12): ವಿಶ್ವದಲ್ಲೇ ಅತಿ ಹೆಚ್ಚು ಮಾದಕ (Drug) ವಸ್ತು ಬೆಳೆಯುವ ದೇಶವಾದ ಅಫ್ಘಾನಿಸ್ತಾನವನ್ನು (Afghanistan) ನೆರೆಯಲ್ಲೇ ಹೊಂದಿರುವ ಭಾರತ, ಇತ್ತೀಚಿನ ವರ್ಷಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರ ಪ್ರಮುಖ ಸಾಗಣೆ ಕೇಂದ್ರವಾಗಿ ಹೊರಹೊಮ್ಮಿದೆ. ಕಳೆದ 4 ವರ್ಷಗಳಲ್ಲಿ ಹೆರಾಯಿನ್‌ ಜಪ್ತಿ ಪ್ರಮಾಣದಲ್ಲಿ ಶೇ.37,000 ದಷ್ಟುಹೆಚ್ಚಳವಾಗಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಅಧಿಕಾರಿಗಳು ಹೇಳಿದ್ದಾರೆ. 2018ರಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ( DRI) ಮತ್ತು ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು 7.98 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರು. 2019ರಲ್ಲಿ ಜಪ್ತಿ ಪ್ರಮಾಣ ಶೇ.25ರಷ್ಟುಹೆಚ್ಚಳದ ಮೂಲಕ 9.16 ಕೆಜಿಗೆ ತಲುಪಿತು.

ಇನ್ನು ಕೋವಿಡ್‌ ಕಾಣಿಸಿಕೊಂಡ 2020ರಲ್ಲಿ 202 ಕೆಜಿ ವಶದ ಮೂಲಕ ಜಪ್ತಿ ಪ್ರಮಾಣದಲ್ಲಿ ಶೇ.2000ರಷ್ಟುಹೆಚ್ಚಳವಾಯಿತು. 2021ರಲ್ಲಿ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಒಂದೇ ಪ್ರಕರಣದಲ್ಲಿ 21000 ಕೋಟಿ ಮೌಲ್ಯದ 3000 ಕೆಜಿ ಹೆರಾಯಿನ್‌ ವಶದೊಂದಿಗೆ ಜಪ್ತಿ ಪ್ರಮಾಣದಲ್ಲಿ ಶೇ.37000ರಷ್ಟುಹೆಚ್ಚಳ ದಾಖಲಾಗಿದೆ. ಅಷ್ಘಾನಿಸ್ತಾನದ ಮೇಲೆ ತಾಲಿಬಾನ್‌ (Taliban) ಹಿಡಿತದ ಬಳಿಕ ಅಲ್ಲಿ ಮಾದಕ ವಸ್ತು ತಯಾರಿಕೆಗೆ ಬಳಸುವ ಗಸಗಸೆ ಗಿಡ ಕೃಷಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದೇ, ಭಾರತದಲ್ಲಿ ಜಪ್ತಿ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

Tap to resize

Latest Videos

ರಾಜ್ಯಗಳಲ್ಲೂ ಹೆಚ್ಚಳ:

ಇನ್ನು ಕಳೆದ 4 ವರ್ಷದಲ್ಲಿ ವಿವಿಧ ರಾಜ್ಯಗಳಲ್ಲಿ ವಶಪಡಿಸಿಕೊಂಡ ಹೆರಾಯಿನ್‌ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 2017ರಲ್ಲಿ 825 ಕೆಜಿ, 2019ರಲ್ಲಿ 913 ಕೆಜಿ, 2020ರಲ್ಲಿ 2308 ಕೆಜಿ ಹೆರಾಯಿನ್‌ ವಶಪಡಿಸಿಕೊಂಡಿದ್ದರೆ, 2021ರಲ್ಲಿ ಈ ಪ್ರಮಾಣ 3276 ಕೆಜಿಗೆ ಏರಿದೆ. ಅಂದರೆ 2017-2020ರ ಅವಧಿಯಲ್ಲಿ ಶೇ.400ರಷ್ಟುಏರಿಕೆ ಕಂಡುಬಂದಿದೆ.

ಕಳ್ಳಸಾಗಣೆದಾರರಿಗೆ ಭಾರತವೇ ರಹದಾರಿ:

ಕಳ್ಳಸಾಗಣೆದಾರರು ವಿದೇಶಗಳಿಗೆ ಮಾದಕ ವಸ್ತು ರವಾನಿಸಲು ನಾನಾ ಮಾರ್ಗಗಳನ್ನು ಬಳಸುತ್ತಾರೆ. ಅಫ್ಘಾನಿಸ್ತಾನದಿಂದ ಯುರೋಪ್‌, ಅಮೆರಿಕಕ್ಕೆ ಕಳ್ಳಸಾಗಣೆಗೆ ಇರಾನ್‌, ಇರಾಕ್‌ ಮಾರ್ಗವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ಮಾರ್ಗಗಳಲ್ಲಿ ಇದೀಗ ತಪಾಸಣೆ ಬಿಗಿ ಮಾಡಿರುವುದು, ಇಂಥ ಮಾದಕ ವಸ್ತು ದೋಚುವ ಪ್ರಕರಣ ಹೆಚ್ಚಳ ಮತ್ತು ಈ ದೇಶಗಳೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳಲು ಪಾಕಿಸ್ತಾನ ಹಿಂದು ಮುಂದು ನೋಡುತ್ತಿರುವ ಕಾರಣ, ಕಳ್ಳಸಾಗಣೆದಾರರು ಕೆಲ ವರ್ಷಗಳಿಂದ ಭಾರತವನ್ನೇ ತಮ್ಮ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

iDrugs Racket in Bengaluru: ಅಂತಾರಾಜ್ಯ ಪೆಡ್ಲರ್‌ ಸೆರೆ: 11 ಕೋಟಿ ಡ್ರಗ್ಸ್‌ ವಶ

ಅದರಲ್ಲೂ ಭಾರತ ಅತ್ಯಂತ ವಿಶಾಲವಾದ ಕರಾವಳಿ ಮತ್ತು ಹಲವು ಬಂದರುಗಳನ್ನು ಹೊಂದಿರುವ ಕಾರಣ, ಕಳ್ಳಸಾಗಣೆದಾರರಿಗೆ ಭಾರತ ಪ್ರಮುಖ ರಹದಾರಿಯಾಗಿ ಕಾಣಿಸಿದೆ. ಹೀಗೆ ಭಾರತಕ್ಕೆ ನಾನಾ ಮಾರ್ಗಗಳ ಮೂಲಕ ತಲುಪುವ ಮಾದಕ ವಸ್ತು, ಇಲ್ಲಿಂದ ಅಮೆರಿಕ, ಯುರೋಪ್‌ ದೇಶಗಳಿಗೆ ರವಾನೆಯಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Instagram Drug Dealerಗಳ ಕೈಚಳಕ : ಎರಡೇ ಕ್ಲಿಕ್‌ನಲ್ಲಿ ಮಾದಕ ವಸ್ತು ಮಾರಾಟ!

ಮೆಟಾ-ಫೇಸ್‌ಬುಕ್ (Meta Facebook) ಒಡೆತನದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ (Instagram) ಯುವಜನರ ಫೇವರೇಟ್‌ ಸ್ಪಾಟ್.‌ ಇನ್ಸ್ಟಾಗ್ರಾಮ್‌ ಬಳಕೆದಾರರಲ್ಲಿ ಯುವ ಜನತೆ ದರ್ಬಾರ್‌ ಹೆಚ್ಚು. ಚಾಟಿಂಗ್‌ ಡೇಟಿಂಗ್‌ ನಿಂದ ಹಿಡಿದು ಮಾರ್ಕೆಟಿಂಗ್‌ ವರೆಗೂ ಇನ್ಸ್ಟಾಗ್ರಾಮ್‌ನಲ್ಲಿ ಎಲ್ಲದಕ್ಕೂ ಅವಕಾಶವಿದೆ. ಆದರೆ ಯುವ ಜನಾಂಗವೇ ಹೆಚ್ಚು ಬಳಸುಉತ್ತಿರುವ ಇನ್ಸ್ಟಾಗ್ರಾಮ್‌ ಬಗ್ಗೆ ಈಗ ಶಾಕಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ. ಈ ಫೋಟೋ ಹಂಚಿಕೆ ಅಪ್ಲಿಕೇಶನ್ ಈಗ ಡ್ರಗ್‌ ಡೀಲರ್‌ಗಳ (Drug Dealer) ಅಡ್ಡ ಆಗಿ ಮಾರ್ಪಟ್ಟಿದೆ.

CCB Busts Drug Racket: ಬೆಂಗ್ಳೂರಲ್ಲಿ ದಿನಸಿ ಪೂರೈಕೆ ಸೋಗಲ್ಲಿ ಮನೆಗೇ ಡ್ರಗ್ಸ್‌ ಪೂರೈಕೆ..!

ಹೌದು ಇಂಥಹದ್ದೊಂದು ಶಾಕಿಂಗ್‌ ವರದಿಯನ್ನು  ಟೆಕ್ ಟ್ರಾನ್ಸ್‌ಪರೆನ್ಸಿ ಪ್ರಾಜೆಕ್ಟ್‌ (Tech Transparency Project- TTP) ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಇನ್ಸ್ಟಾಗ್ರಾಮ್ ಯುವ ಬಳಕೆದಾರರಿಗೆ ಡ್ರಗ್ ಡೀಲರ್‌ಗಳ ಖಾತೆಗಳನ್ನು‌ (Accounts) ಶಿಫಾರಸು ಮಾಡುತ್ತಿರುವುದು ಕಂಡುಬಂದಿದೆ. ಟೆಕ್ ಟ್ರಾನ್ಸ್‌ಪರೆನ್ಸಿ ಪ್ರಾಜೆಕ್ಟ್‌ನ ವರದಿಯು ಯುವ ಬಳಕೆದಾರರಿಗೆ ಡ್ರಗ್-ಸಂಬಂಧಿತ ಹ್ಯಾಶ್‌ಟ್ಯಾಗ್‌ಗಳನ್ನು Instagram ಸೂಚಿಸುತ್ತಿದೆ ಎಂದು ಬಹಿರಂಗಪಡಿಸಿದೆ. 13 ವರ್ಷ ವಯಸ್ಸಿನ ಹದಿಹರೆಯದ ಬಳಕೆದಾರರಿಗೆ ಕೇವಲ ಎರಡು ಕ್ಲಿಕ್‌ಗಳಲ್ಲಿ ಡ್ರಗ್‌ ಖರೀದಿ ಮಾಡುವಂತೆ ವ್ಯವಸ್ಥೆ ರೂಪಿಸಲಾಗಿದೆ. ‌ಜಾಲತಾಣದಲ್ಲಿ ಮಾರಾಟಕ್ಕಿರುವ ಡ್ರಗ್  ಕಂಡುಹಿಡಿಯಲು ಯುವಕರಿಗೆ ಅತ್ಯಂತ ಸುಲಭದ ಮಾರ್ಗಗಳನ್ನು ಇದು ನೀಡುತ್ತಿದೆ ಎಂದು ವರದಿ ತಿಳಿಸಿದೆ.

click me!