ಶ್ರದ್ಧಾ ಕೊಲೆ ಕೇಸ್‌ನಿಂದ ಪ್ರೇರಣೆ ಸಿಕ್ತಾ? ಯುವತಿಯ ಕೊಂದು ದೇಹದ ಭಾಗ ಎಲ್ಲೆಡೆ ಎಸೆದ ಯುವಕ

Published : Mar 13, 2023, 12:08 PM ISTUpdated : Mar 13, 2023, 12:10 PM IST
ಶ್ರದ್ಧಾ ಕೊಲೆ ಕೇಸ್‌ನಿಂದ ಪ್ರೇರಣೆ ಸಿಕ್ತಾ? ಯುವತಿಯ ಕೊಂದು ದೇಹದ ಭಾಗ ಎಲ್ಲೆಡೆ ಎಸೆದ ಯುವಕ

ಸಾರಾಂಶ

ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ಹೋಲುವ ಮತ್ತೊಂದು ಕೊಲೆ ಪ್ರಕರಣ ಕಣಿವೆ ನಾಡು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.

ಶ್ರೀನಗರ:  ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಕೊಲೆ ಪ್ರಕರಣವನ್ನು ಹೋಲುವ ಮತ್ತೊಂದು ಕೊಲೆ ಪ್ರಕರಣ ಕಣಿವೆ ನಾಡು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.  30 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತುಂಡು ತುಂಡಾಗಿ ಕತ್ತರಿಸಿದ ಆರೋಪಿ ದೇಹದ ಭಾಗಗಳನ್ನು ಎಲ್ಲೆಂದರಲ್ಲಿ ಎಸೆದು ಬಂದಿದ್ದಾನೆ. ಈ ಕೊಲೆ ಪ್ರಕರಣವನ್ನು ಭೇದಿಸಿದ ಬುದ್ಗಾಮ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಸಾರಣೆ (ಮೇಸ್ತ್ರಿ) ಕೆಲಸ ಮಾಡುತ್ತಿದ್ದ.  ಸೋಬುಗ್ ಪ್ರದೇಶದ 30 ವರ್ಷದ ಮಹಿಳೆ ಕೊಲೆಯಾಗಿದ್ದರು. 

ಮಾರ್ಚ್ 8 ರಂದು ಮಹಿಳೆಯ ಸಹೋದರ ಸೋಬುಗ್ ಬುಡ್ಗಾಮ್ ನಿವಾಸಿ ತನ್ವೀರ್ ಅಹ್ಮದ್ ಖಾನ್ (Tanveer Ahmad Khan), ಅವರು ತಮ್ಮ ಸಹೋದರಿ 30 ವರ್ಷದ ಆರಿಫಾ (Aarifa) ಕೋಚಿಂಗ್‌ ಕ್ಲಾಸ್‌ಗೆಂದು ಮಾರ್ಚ್‌ 7 ರಂದು ತೆರಳಿದ್ದು ಮರಳಿ ಮನೆಗೆ ಬಂದಿಲ್ಲ ಎಂದು ದೂರು ನೀಡಿದ್ದರು ಎಂದು  ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ತಾಹಿರ್ ಗಿಲಾನಿ ತಿಳಿಸಿದ್ದಾರೆ. 

ಮಹಿಳೆಯ ಸಹೋದರ ನೀಡಿದ ದೂರಿನಂತೆ ಮಹಿಳೆ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು. ತನಿಖೆ ವೇಳೆ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನು ಬಳಸಿ ಅದರ ಸಹಾಯದಿಂದ ಹಲವು ಶಂಕಿತರನ್ನು ವಿಚಾರಣೆ ನಡೆಸಲು ಸಾಧ್ಯವಾಯ್ತು. ಅದರಂತೆ ತನಿಖೆ ವೇಳೆ  ಮೊಹಂದಪೋರಾ ಬಡ್ಗಾಮ್ ನಿವಾಸಿ ಅಬ್ದುಲ್ ಅಜೀಜ್ ವಾನಿ ಅವರ ಪುತ್ರ 40 ವರ್ಷ ಪ್ರಾಯದ ಶಬೀರ್ ಅಹ್ಮದ್ ವಾನಿ (Shabir Ahmad Wani) ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಗಿಲಾನಿ ಹೇಳಿದ್ದಾರೆ.

ಬೇರೊಬ್ಬನ ಜೊತೆ ಪತ್ನಿಯ ಸರಸ, ಪ್ರಶ್ನಿಸಿದ ಗಂಡ ಅತ್ತೆಯ ಹೈತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಚಾಲಕಿ ಸುಂದರಿ!

ನಿರಂತರ ವಿಚಾರಣೆಯ ನಂತರ ಆರೋಪಿಯು ಈ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ತನ್ನ ಈ ಕೃತ್ಯವನ್ನು ಮುಚ್ಚಿ ಹಾಕಲು ಮಹಿಳೆಯ ದೇಹವನ್ನು ಹಲವು ತುಂಡುಗಳಾಗಿ ಮಾಡಿ ವಿವಿಧ ಸ್ಥಳಗಳಲ್ಲಿ ಹೂತಿಟ್ಟಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ. ನಂತರ ಹಲವು ಸ್ಥಳಗಳಿಗೆ ಆತನನ್ನು ಕರೆದೊಯ್ದ ಪೊಲೀಸರು ಮಹಿಳೆಯ ಮೃತದೇಹದ ಹಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
 
ಅದರಂತೆ ಮಹಿಳೆಯ ಮೃತದೇಹದ ತಲೆಯು ಆರೋಪಿಯ ನಿವಾಸದಲ್ಲಿ ಪತ್ತೆಯಾಗಿದ್ದು, ಉಳಿದ ಭಾಗವು ಕತ್ತಿನಿಂದ ಕಾಲಿನವರೆಗೆ ಸೆಬ್ಡಾನ್ ಸೇತುವೆಯ (Sebdan Bridge) ಕೆಳಗೆ ಪತ್ತೆಯಾಗಿದೆ. ಆರೋಪಿಯ ಮನೆಯ ಸಮೀಪವಿರುವ ನೀರಿನ ತೊಟ್ಟಿಯಲ್ಲಿ ಆಕೆಯ ಕೈಕಾಲುಗಳು ಮತ್ತು ತೋಳುಗಳು ಪತ್ತೆಯಾಗಿವೆ. ಅಪರಾಧಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಹೆಚ್ಚಿನ ತನಿಖೆಗಾಗಿ ಅಪರಾಧದ ಸ್ಥಳವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.

ಮಹಿಳೆಯ ಮರಣೋತ್ತರ ಪರೀಕ್ಷೆ (post-mortem) ನಡೆಸಲಾಗಿದ್ದು, ಎಲ್ಲಾ ವೈದ್ಯಕೀಯ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದರು. ಆದರೆ ಈ ಘಟನೆ ನಡೆಯಲು ಕಾರಣವೇನು ಎಂಬ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಯಬೇಕಾಗಿದೆ. ಈ ಘಟನೆ ಖಂಡಿಸಿ ನೂರಾರು ಜನ ಸ್ಥಳೀಯರು ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದು, ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. 

ದೆಹಲಿಯಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ: ಢಾಬಾದ ಫ್ರೀಜರ್‌ನೊಳಗೆ ಪತ್ತೆಯಾದ ಮಹಿಳೆಯ ಮೃತದೇಹ..!

ಕಳೆದ ವರ್ಷ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಖರ್ (shradha waquer) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಪ್ರಿಯತಮೆ ಶ್ರದ್ಧಾಳನ್ನು ಹತ್ಯೆ ಮಾಡಿದ ಆರೋಪಿ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಆಕೆಯ ದೇಹವನ್ನು ಕಟ್ಟರ್‌ ಮೆಷಿನ್‌ನಿಂದ 35 ಪೀಸುಗಳಾಗಿ ಕತ್ತರಿಸಿದ ನಂತರ ಶವವನ್ನು ಶೇಖರಿಸಿಡಲು ಪ್ರಿಡ್ಜ್‌ ಖರೀದಿಸಿದ ಆರೋಪಿ ಅದರಲ್ಲಿ ಶ್ರದ್ಧಾ ದೇಹವನ್ನು ಶೇಖರಿಸಿಟ್ಟಿದ್ದ, ನಂತರ ದಿನವೂ ದೇಹದ ಸ್ವಲ್ಪ ಸ್ವಲ್ಪವೇ ತುಂಡುಗಳನ್ನು ತೆಗೆದುಕೊಂಡು ಹೋಗಿ ಮಧ್ಯರಾತ್ರಿ ಸಮೀಪದ ಕಾಡಿಗೆಸೆದು ಬಂದಿದ್ದ. 

ಇತ್ತ ಪೋಷಕರನ್ನು ತೊರೆದು ಅಫ್ತಾಬ್ (Aftab) ಜೊತೆ ಹೊರಟು ಹೋಗಿದ್ದ ಶ್ರದ್ಧಾ ಜೊತೆ ಆಕೆಯ ಪೋಷಕರು ಯಾವುದೇ ಸಂಪರ್ಕ ಹೊಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅವಳು ಹಾಕುವ ಪೋಸ್ಟ್‌ಗಳನ್ನು ನೋಡಿ ಆಕೆಯ ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆಕೆಯ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್‌ಗಳಿಲ್ಲದ ಹಿನ್ನೆಲೆಯಲ್ಲಿ ಅನುಮಾನಗೊಂಡ ಶ್ರದ್ಧಾ ತಂದೆ ದೆಹಲಿಗೆ ಬಂದು ನೋಡಿದಾಗ ಆಕೆಯ ವಾಸವಿದ್ದ ಮನೆ ಬೀಗ ಹಾಕಿತ್ತು. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದಾಗ ಪ್ರಕರಣ ಬಯಲಿಗೆ ಬಂದಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!