ಚಿಕ್ಕಬಳ್ಳಾಪುರ: 2 ಮಕ್ಕಳ ಜೊತೆ ಬಾವಿಗೆ ಜಿಗಿದ ತಾಯಿ, ಈಜಿ ಪಾರಾದ 7 ವರ್ಷದ ಪುತ್ರಿ

By Kannadaprabha News  |  First Published Jul 23, 2023, 2:30 AM IST

ನಾಗಮ್ಮ ಮತ್ತು 5 ವರ್ಷದ ಬಾಲಕಿ ಶ್ರೀನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೊಬ್ಬ ಪುತ್ರಿ ಏಳು ವರ್ಷದ ಬಾಲಕಿ ಗಂಗೋತ್ರಿ ಈಜಿ ದಡ ಸೇರಿ ಬದುಕುಳಿದಿದ್ದಾಳೆ.


ಚಿಕ್ಕಬಳ್ಳಾಪುರ(ಜು.23):  ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರಲ್ಲಿ ಒಬ್ಬ ಮಗಳು ಈಜಿ ದಡ ಸೇರಿ ಬದುಕುಳಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಸೇಟ್‌ದಿನ್ನೆಯ ಜಡಿಗೆನಹಳ್ಳಿಯಲ್ಲಿ ನಡೆದಿದೆ.

ನಾಗಮ್ಮ (39) ಮತ್ತು 5 ವರ್ಷದ ಬಾಲಕಿ ಶ್ರೀನಿಧಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಮತ್ತೊಬ್ಬ ಪುತ್ರಿ ಏಳು ವರ್ಷದ ಬಾಲಕಿ ಗಂಗೋತ್ರಿ ಈಜಿ ದಡ ಸೇರಿ ಬದುಕುಳಿದಿದ್ದಾಳೆ.

Tap to resize

Latest Videos

ಮಂಡ್ಯ: ಅನಾರೋಗ್ಯದಿಂದ ಬೇಸತ್ತು ವಿಧವೆ ನೇಣು ಬಿಗಿದು ಆತ್ಮಹತ್ಯೆ

ಮನೆಯಲ್ಲಿ ಪತಿ, ಪತ್ನಿ ನಡುವೆ ನಿತ್ಯ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ನಾಗಮ್ಮ ಶುಕ್ರವಾರ ರಾತ್ರಿ ತನ್ನ ಇಬ್ಬರು ಮಕ್ಕಳೊಂದಿಗೆ ಜಡಿಗೆನಹಳ್ಳಿ ಹೊರವಲಯದ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

click me!