ವ್ಯಕ್ತಿಯೊಬ್ಬನ ಆತ್ಮಹತ್ಯೆಗೆ ಕಾರಣಳಾದ ಮಹಿಳೆಗೆ 5 ವರ್ಷಗಳ ಸಾದಾ ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಕಲಬುರಗಿ(ಡಿ.14): ಮಾನಸಿಕ ಕಿರುಕುಳ ನೀಡಿ ವ್ಯಕ್ತಿಯೊಬ್ಬನ ಆತ್ಮಹತ್ಯೆಗೆ ಕಾರಣಳಾದ ಮಹಿಳೆಗೆ ಇಲ್ಲಿನ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಸಾದಾ ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಿದೆ.
ಇಲ್ಲಿನ ಗಣೇಶ ನಗರದ ಅನಿತಾ ಅಲಿಯಾಸ್ ಅನ್ನಪೂರ್ಣ ಗಂಡ ರಾಮಲಿಂಗ ಡೊಂಗರಗಾಂವ ಶಿಕ್ಷೆಗೆ ಗುರಿಯಾದ ಮಹಿಳೆ. ಅನಿತಾ ಗಣೇಶ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನಾಗರಾಜ ಸಿದ್ದಯ್ಯ ಸಮಾಳ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆತನ ಮನೆಯವರೊಂದಿಗೆ ಕಿರಿಕಿರಿ ಮಾಡಿ ನಾಗರಾಜ ನನ್ನ ಜೊತೆ ಬಂದು ಸಂಸಾರ ಮಾಡಬೇಕು ಇಲ್ಲದಿದ್ದರೆ ಆತ ಹೇಗೆ ಜೀವನ ಮಾಡುತ್ತಾನೆ ನೋಡುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಮತ್ತು ಮಾನಸಿಕ ಕಿರುಕುಳ ನೀಡಿದ್ದರಿಂದ ನಾಗರಾಜ ಆರೋಪಿತಳ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
undefined
ಕಾರ್‌ಲ್ಲಿದ್ದವರಿಗೆ ಚಾಕು ತೋರಿಸಿ ಸುಲಿಗೆ; ಚಿನ್ನದ ಸರ, ಮೊಬೈಲ್ ಕಸಿದು ಪರಾರಿ
ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್‌ಪೆಕ್ಟರ್ ಶಿವಾನಂದ ವಾಲಿಕಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿತ ಮಹಿಳೆಗೆ 5 ವರ್ಷಗಳ ಸಾದಾ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕರಾದ ಗುರುಲಿಂಗಪ್ಪ ತೇಲಿ ಅವರು ವಾದ ಮಂಡಿಸಿದ್ದರು.