ಬಸವನಬಾಗೇವಾಡಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

By Kannadaprabha News  |  First Published Dec 14, 2022, 1:30 PM IST

ಮಹಿಳೆಯೊಬ್ಬಳು ಕೌಟುಂಬಿಕ ಕಲಹದಿಂದ ನೊಂದು ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದ ಘಟನೆ 


ಬಸವನಬಾಗೇವಾಡಿ(ಡಿ.14):  ತಾಲೂಕಿನ ಉಕ್ಕಲಿ ಗ್ರಾಮದ ಮಹಿಳೆಯೊಬ್ಬಳು ಕೌಟುಂಬಿಕ ಕಲಹದಿಂದ ನೊಂದು ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.  ಗ್ರಾಮದ ರೇಣುಕಾ ಅಮೀನಪ್ಪ ಕೋನಿನ(26) ಎಂಬ ಮಹಿಳೆಯು ತನ್ನ ಇಬ್ಬರು ಮಕ್ಕಳಾದ ಯಲ್ಲವ್ವ (2), ಅಮೃತಾ (1) ಅವರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಎರಡು ದಿನಗಳ ಹಿಂದೆ ಹಾರಿದ್ದು, ಮಂಗಳವಾರ ತಾಯಿ ಮತ್ತು ಒಂದು ಹೆಣ್ಣು ಮಗುವಿನ ಶವ ಸಿಕ್ಕಿದೆ.

ರೇಣುಕಾ ಅವರು ಎರಡು ದಿನಗಳ ಹಿಂದೆ ಗಂಡನ ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಹೋಗಿದ್ದರು. ಜೊತೆಗೆ ತನ್ನ ಪುಟ್ಟಇಬ್ಬರು ಹೆಣ್ಣಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಎರಡು ದಿನಗಳ ಕಾಲ ಗಂಡನ ಮನೆಯವರು ರೇಣುಕಾ ಇಬ್ಬರು ಮಕ್ಕಳನ್ನು ಹುಡುಕಾಡಿದ ನಂತರ ಗಂಡನ ಮನೆಯವರು ಕಾಣೆಯಾಗಿದ್ದರ ಕುರಿತು ಸೋಮವಾರ ಮನಗೂಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. 

Tap to resize

Latest Videos

ಅಣ್ಣ-ತಂಗಿ ಮನಸ್ಸಲ್ಲಿ ಮೂಡಿತ್ತು ಪ್ರೇಮ: ಪ್ರೀತಿ ಫಲಿಸಲ್ಲ ಎಂದು 'ಜೋಡಿ' ಆತ್ಮಹತ್ಯೆ

ಮಂಗಳವಾರ ಉಕ್ಕಲಿ ಗ್ರಾಮದ ಕಾಲುವೆಯಲ್ಲಿ ರೇಣುಕಾ ಹಾಗೂ ಒಂದು ಹೆಣ್ಣಮಗುವಿನ ಶವ ಪತ್ತೆಯಾಗಿದೆ. ಮತ್ತೊಬ್ಬ ಹೆಣ್ಣುಮಗುವಿನ ಶವ ಪತ್ತೆಗಾಗಿ ಸ್ಥಳೀಯರು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮನಗೂಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಪರಶುರಾಮ ಮನಗೂಳಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
 

click me!