ಮಾಜಿ ಸಿಎಂ ಸಹೋದರಿಗೆ ಐಟಿ ಶಾಕ್‌: ಕಾಂಗ್ರೆಸ್‌ ಮುಖಂಡನ ಮನೆಯಲ್ಲಿ 2.8 ಕೋಟಿ ನಗದು ಪತ್ತೆ!

By Sathish Kumar KHFirst Published May 7, 2023, 5:28 PM IST
Highlights

ರಾಜ್ಯದ ವಿವಿಧೆಡೆ ಕಾಂಗ್ರೆಸ್‌ ಮುಖಂಡರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. 

ಬೆಂಗಳೂರು (ಮೇ 07): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಹಣ ಸಂಗ್ರಹಣೆ ಮಾಡಲಾಗಿದೆ ಎಂಬ ಅನುಮಾನಗಳು ವ್ಯಕ್ತವಾದವರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಹೋದರಿ ಎಸ್‌.ಎಂ. ಸುನೀತಾ ಹಾಗೂ ಕಾಂಗ್ರೆಸ್‌ ಮುಖಂಡರಾದ ಬ್ಯಾಡಗಿ ಚನ್ನಬಸಪ್ಪ ಹಾಗೂ ಕಲಬುರಗಿ ಅರವಿಂದ್‌ ಚೌವ್ಹಾಣ್‌ ಮನೆ ಮೇಲೆ ದಾಳಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ ಎಸ್ .ಎಂ.‌ಕೃಷ್ಣ ಸಹೋದರಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಸ್.ಎಂ. ಸುನಿತಾ ಮನೆ ಮೇಲೆ ದಾಳಿ‌ ಮಾಡಿರುವ ಐಟಿ ತಂಡವು ಸುಮಾರು ಎಂಟು ಅಧಿಕಾರಿಗಳಿಂದ ಪರಿಶೀಲನೆ ಮಾಡುತ್ತಿದ್ದಾರೆ. ಕೋರಮಂಗಲ 1ನೇ ಬ್ಲಾಕ್ ನಲ್ಲಿರೋ ಎಸ್.ಎಂ. ಕೃಷ್ಣ ಸೋದರಿ ಮನೆಯಿದೆ. ಬಾಗ್ಮನೆ ಹೆಸ್ರಲ್ಲಿರೋ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಮತ್ತೊಂಡೆದೆ ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಮೇಲೆಯೂ ದಾಳಿ ಮಾಡಲಾಗಿದೆ. ಎರಡು ದಿನಗಳಿಂದ ದಾಳಿ‌ ಮಾಡಿ‌ ಪರಿಶೀಲನೆ ನಡೆಸಲಾಗುತ್ತಿದೆ. 

ಸಿದ್ದರಾಮಯ್ಯನ ಮಗ ವಿಕ್ಟೋರಿಯಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್‌ ನಡೆಸ್ತಾರೆ!

ಬ್ಯಾಡಗಿ ಚೆನ್ನಬಸಪ್ಪ ಮನೆಯಲ್ಲಿ 2.8 ಕೋಟಿ ನಗದು ಲಭ್ಯ:  ಮತ್ತೊಂದೆ ಕಾಂಗ್ರೆಸ್‌ ಮುಖಂಡರಾದ ಬ್ಯಾಡಗಿ ಚೆನ್ನಬಸಪ್ಪ ಮನೆ ಮೇಲಿನ ಐಟಿ ದಾಳಿ ಮಾಡಲಾಗಿದ್ದು, ಇಂದು ಪರಿಶೀಲನೆ ಅಂತ್ಯಗೊಳಿಸಲಾಗಿದೆ. ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ಮನೆಯ ಮೇಲೆ ಬೆಳಿಗ್ಗೆಯಿಂದ ನಿರಂತರವಾಗಿ ಶೋಧನೆ ಕಾರ್ಯ ಮುಂದುವರೆದಿತ್ತು. ಚೆನ್ನಬಸಪ್ಪ ಮನೆಯಲ್ಲಿ ಒಟ್ಟು 2 ಕೋಟಿ 85 ಲಕ್ಷ ರೂಪಾಯಿ ಪತ್ತೆಯಾಗಿದೆ. 2 ಕೋಟಿ 85 ಲಕ್ಷ ರೂಪಾಯಿ ಜೊತೆಗೆ ಹಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ತೆರಳಿದ್ದಾರೆ. 

ಬೆಂಗಳೂರಿನ ಬಿಲ್ಡರ್‌ ಹರಿರೆಡ್ಡಿ ಮನೆ ಮೇಲೆ ಐಟಿ ದಾಳಿ:  ಬೆಂಗಳೂರಿನ ಬಿಲ್ಡರ್ ಹರಿರೆಡ್ಡಿ  ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ಮನೆ ಪರಿಶೀಲನೆ ನಡೆಸಿ ಹೊರಟ ಐಟಿ ಅಧಿಕಾರಿಗಳು. ಮನೆಯಿಂದ ಹಲವು ದಾಖಲೆಗಳನ್ನು ತೆಗೆದುಕೊಂಡು ಹೋದರು. ಪ್ರಿಂಟರ್ ಸಮೇತ ತೆಗೆದುಕೊಂಡು ಹೋದ ಅಧಿಕಾರಿಗಳು. ಮೂರು ಇನೋವಾದಲ್ಲಿ ಬಂದಿದ್ದ ಐಟಿ ಅಧಿಕಾರಿಗಳು, ಮಹತ್ವದ ದಾಖಲೆ ಸಮೇತ ಹೊರ ನಡೆದರು. ಇನ್ನು ಎಷ್ಟು ಹಣ ಲಭ್ಯವಾಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ನವಕರ್ನಾಟಕದ ಕಡೆ ಮೋದಿ ದೃಷ್ಟಿ, ಈ ಬಾರಿ ಬಿಜೆಪಿ ಗೆಲುವು ಖಚಿತ: ರಾಜೀವ್ ಚಂದ್ರಶೇಖರ್ 

ಪ್ರಿಯಾಂಕ ಖರ್ಗೆ ಆಪ್ತನ ಮನೆ ಮೇಲೆ ದಾಳಿ:  ಇನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮೇಲೆ ಐಟಿ ದಾಳಿ ಮಾಡಲಾಗಿದೆ. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅರವಿಂದ್ ಚೌಹಾನ್ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ, ಅರವಿಂದ್‌ ಚೌವ್ಹಾಣ್‌ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು.  ನಿನ್ನೆ ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ ಅಧಿಕಾರಿಗಳ ದಾಳಿ ಮಾಡಿ, ರಾತ್ರಿ ಹನ್ನೊಂದು ಗಂಟೆವರಗೆ ಪರಿಶೀಲನೆ ನಡೆಸಿ ನಂತರ ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. 

click me!