ಚುನಾವಣೆ ಸಂದರ್ಭದಲ್ಲೇ ಮಾಜಿ‌ ಶಾಸಕನ ಮನೆ ಭರ್ಜರಿ ದರೋಡೆ, ಬಂದೂಕು ಮಚ್ಚು ಹಿಡಿದು ಬೆದರಿಕೆ!

By Gowthami K  |  First Published May 7, 2023, 4:43 PM IST

ಬಂದೂಕು, ಮಚ್ಚುನೊಂದಿಗೆ ಬಂದಿದ್ದ ದುಷ್ಕರ್ಮಿಗಳಿಂದ ಮಾಜಿ‌ ಶಾಸಕನ ಮನೆ ದರೋಡೆ ಮಾಡಿ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.


ಚಿಕ್ಕಮಗಳೂರು (ಮೇ.7): ಬಂದೂಕು, ಮಚ್ಚುನೊಂದಿಗೆ ಬಂದಿದ್ದ ದುಷ್ಕರ್ಮಿಗಳಿಂದ ಮಾಜಿ‌ ಶಾಸಕನ ಮನೆ ದರೋಡೆ ಮಾಡಿ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮಾಜಿ‌ ಶಾಸಕ ಎಸ್ ಎಂ ನಾಗರಾಜು ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, 15 ಕ್ಕೂ ಹೆಚ್ಚು ದುಷ್ಕರ್ಮಿಗಳು ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ತರೀಕೆರೆ ಮಾಜಿ ಶಾಸಕ ಎಸ್ ಎಂ ನಾಗರಾಜ್ ಅವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ದರೋಡೆಕೋರರು ಹಲ್ಲೆ ನಡೆಸಿ. 1ಕೆಜಿಗೂ ಅಧಿಕ ಚಿನ್ನಾಭರಣ, ಹಣ ದರೋಡೆ ಮಾಡಿದ್ದಾರೆ.

ಅಜ್ಜಂಪುರ ತಾಲೂಕಿನ ಗಡಿಹಳ್ಳಿಯ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಚುನಾವಣೆ ಸಮಯದಲ್ಲಿ ಈ ದರೋಡೆ ಪ್ರಕರಣ ಹಲವು ಅನುಮಾನ ಮೂಡಿಸಿದೆ. ಸ್ಥಳಕ್ಕೆ ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ  ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಚುನಾವಣೆಯ ದ್ವೇಷವೋ? ಅಥವಾ ಹಣಕ್ಕಾಗಿ  ದರೋಡೆ ಕೃತ್ಯವೋ ಎಂಬ ಶಂಕೆ ವ್ಯಕ್ತವಾಗಿದೆ.

Latest Videos

undefined

ಪ್ರಸಿದ್ಧ ಕಂಪನಿ ಚಪ್ಪಲಿ ಕೊಡಿಸುವುದಾಗಿ ಹೇಳಿ ವಂಚನೆ, ಐವರ ಬಂಧನ, 10ಲಕ್ಷ ಸ್ವತ್ತು ಜಪ್ತಿ! 
ದಾವಣಗೆರೆ: ಪ್ರಸಿದ್ಧ ಕಂಪನಿಗಳ ಚಪ್ಪಲಿಗಳ ಕಂಪನಿಯಿಂದ ನೇರ ಕೊಡಿಸುವುದಾಗಿ ನಂಬಿಸಿ, ಕೇರಳದ ಮೂವರನ್ನು ದಾವಣಗೆರೆಗೆ ಕರೆಸಿ,ಹಲ್ಲೆ ಮಾಡಿ, ಹಣ, ವಸ್ತುಗಳನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಲಕ್ಷ ರು. ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಯಲ್ಲಾಪುರದ ಪ್ರವೀಣ್‌ ಅಲಿಯಾಸ್‌ ಪಿಕೆ ಅಲಿಯಾಸ್‌ ರಫೀಕ್‌(23 ವರ್ಷ), ದೇವಣ್ಣ ಅಲಿಯಾಸ್‌ ಡುಮ್ಮ(39 ವರ್ಷ), ಸುಭಾಷ್‌ ಅಲಿಯಾಸ್‌ ಸುಬ್ಬು(24), ಹರಪನಹಳ್ಳಿ ವೀರೇಶ(23), ದಾವಣಗೆರೆ ಕೆಟಿಜೆ ನಗರದ ಎಲ್‌.ಸಂಜಯ್‌ ಬಂಧಿತ ಆರೋಪಿಗಳು. ಬಂಧಿತರು ದರೋಡೆ ಮಾಡಿದ್ದ 10 ಸಾವಿರ ರು. ನಗದು, 40 ಸಾವಿರ ಮೌಲ್ಯದ 2 ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ 8 ಲಕ್ಷ ಮೌಲ್ಯದ ಕಾರು, 1.5 ಲಕ್ಷ ಮೌಲ್ಯದ ಬುಲೆಟ್‌ ವಾಹನ ಸೇರಿ 10 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದು, ತಲೆ ಮರೆಸಿಕೊಂಡ ಇತರೆ ಆರೋಪಿಗಳಿಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

Vijayapur: ಚುನಾವಣೆ ದ್ವೇಷದ ಹಿನ್ನೆಲೆ ಹಾಡುಹಗಲೇ ಗುಂಡಿಟ್ಟು ಕಾರ್ಪೋರೇಟರ್ ಪತಿಯ ಹತ್ಯೆ!

ಕೇರಳದ ವಯನಾಡು ಜಿಲ್ಲೆಯ ಸಿ.ಆರ್‌.ರಾಶೀಕ್‌, ಆತನ ಸ್ನೇಹಿತರಾದ ಅಭಿನೋಶನ್‌, ನಿಜಾಮುದ್ದೀನ್‌ಗೆ ರಫೀಕ್‌ ಎಂಬ ಪರಿಚಯಸ್ಥನು ದಾವಣಗೆರೆಯ ಬಾಡಾ ಕ್ರಾಸ್‌ ಬಳಿ ಕಡಿಮೆ ಬೆಲೆಗೆ ಕಂಪನಿಯಿಂದ ನೇರವಾಗಿ ಚಪ್ಪಲಿಗಳನ್ನು ಕಡಿಮೆ ದರಕ್ಕೆ ಕೊಡಿಸುವುದಾಗಿ ಕಳೆದ ಏ.30ರಂದು ಇಲ್ಲಿನ ಬಾಡಾ ಕ್ರಾಸ್‌ನ ಆವರಗೆರೆ ಕೆರೆಯ ರಸ್ತೆಗೆ ಕರೆಸಿದ್ದರು. ನಂತರ ರಫೀಕ್‌ ಹಾಗೂ ಆತನ ಐವರು ಸಹಚರರು ಸೇರಿ, ಕೇರಳದಿಂದ ಬಂದಿದ್ದ ಮೂವರ ಮೇಲೂ ಹಲ್ಲೆ ಮಾಡಿ, ಕೇರಳಿಗರ ಬಳಿ ಇದ್ದ 57 ಸಾವಿರ ರು. ನಗದು, 3 ಮೊಬೈಲ್‌, ಪರ್ಸ್‌, ದಾಖಲಾತಿಗಳು ಇದ್ದ ಬ್ಯಾಗ್‌ ಕಿತ್ತು ಪರಾರಿಯಾಗಿದ್ದರು. ಈ ಬಗ್ಗೆ ಕೇರಳದ ಮೂವರೂ ಇಲ್ಲಿನ ವಿದ್ಯಾನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಪ್ಲಾಸ್ಟಿಕ್ ಗನ್ ಬಳಸಿ ಚಿನ್ನಾಭರಣಗಳನ್ನು ಲೂಟಿ ಮಾಡಿದ 16 ವರ್ಷದ ಬಾಲಕ!

ಎಎಸ್ಪಿ ರಾಮಗೊಂಡ ಬಿ.ಬಸರಗಿ ನಿರ್ದೇಶನದಲ್ಲಿ ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ವಿದ್ಯಾನಗರ ಠಾಣೆ ಇನ್ಸಪೆಕ್ಟರ್‌ ಪ್ರಭಾವತಿ ಸಿ.ಶೇತಸನದಿತ ಸಂಚಾರಿ ವೃತ್ತದ ಇನ್ಸಪೆಕ್ಟರ್‌ ಆರ್‌.ಪಿ.ಅನಿಲ್‌ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸಿದೆ

click me!