ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್‌‌ ರೋಲರ್

By Suvarna News  |  First Published Jun 27, 2022, 11:24 PM IST

ಹಾಫ್‌ ಹೆಲ್ಮೇಟ್ ಹಾಗೂ ಜೋರು ಶಬ್ಧ ಮಾಡುವ ಶೋಕಿ ಸೈಲೆನ್ಸರ್‌ನೊಂದಿಗೆ ಬೈಕ್ ವೀಲಿಂಗ್ ಮಾಡಿದ್ದವರಿಗೆ ಚಿಕ್ಕಮಗಳೂರು ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. 


ಚಿಕ್ಕಮಗಳೂರು, (ಜೂನ್.27) : ಹಾಫ್‌ ಹೆಲ್ಮೇಟ್, ಶೋಕಿ ಸೈಲೆನ್ಸರ್ ಮೂಲಕ ವೀಲಿಂಗ್ ಮಾಡಿ ಪುಂಡಾಟಿಕೆ ತೋರಿದ ಯುವಕರಿಗೆ ಚಿಕ್ಕಮಗಳೂರು ಪೊಲೀಸರು ಚಳಿ ಬಿಡಿಸಿದ್ದಾರೆ.ವೀಲಿಂಗ್ ಶೋಕಿ ಮಾಡಿದವರಿಗೆ ಬಿಸಿ ಮುಟ್ಟಿಸಲು ಬೈಕಿನ ಸೈಲೆನ್ಸರ್ ಗಳನ್ನು  ರೋಡ್ ರೋಲರ್‌ ಮೂಲಕ ಪೊಲೀಸರು ಪುಡಿಗಟ್ಟಿದ್ದಾರೆ.

ರೋಡ್ ರೋಲರ್‌ : ಸೈಲೆನ್ಸರ್ ಪುಡಿಪುಡಿ
ವಶಪಡಿಸಿಕೊಂಡಿದ್ದ ಶೋಕಿ ಸೈಲೆನ್ಸರ್ ಹಾಗೂ ಹಾಫ್‌ ಹೆಲ್ಮೇಟ್‌ಳನ್ನ ಚಿಕ್ಕಮಗಳೂರು ಪೊಲೀಸರು ರೋಡ್ ರೋಲರ್‌ ಮೂಲಕ ನಾಶ ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಹಲವು ಯುವಕರು ಬೈಕಿನ ಸೈಲೆನ್ಸರ್ ಗಳನ್ನ ಮಾಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ಧದೊಂದಿಗೆ ಓಡಾಡುತ್ತಿದ್ದರು. ಇದರಿಂದ  ಸ್ಥಳಿಯರಿಗೂ ಕೂಡ ತೊಂದರೆಯಾಗುತ್ತಿದ್ದು. ಜೊತೆಗೆ ಮತ್ತಲವು ಯುವಕರು ಬೈಕ್ ಗಳಲ್ಲಿ ನಗರದೊಳಗೆ ವೀಲ್ಹಿಂಗ್ ಮಾಡುತ್ತಿದ್ದರು. 

Tap to resize

Latest Videos

ಚಿಕ್ಕಮಗಳೂರು : ಬೈಕ್‌ ವೀಲಿಂಗ್ ಮಾಡುತ್ತಿದ್ದವರ ಬಂಧನ

ನಿನ್ನೆ(ಭಾನುವಾರ) ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವೀಲ್ಹಿಂಗ್  ಮಾಡುತ್ತಿದ್ದರು. ನಡು ರಸ್ತೆ ರೇಸಿಗೆ ಬಿದ್ದ ಯುವಕರು ವೀಲ್ಹಿಂಗ್ ಮಾಡುಕೊಂಡು ಇತರ ಪ್ರಯಾಣಿಕರ ಮೈಮೇಲೆ ಹೋಗುತ್ತಿದ್ದರು. ಇದರಿಂದ ಸ್ಥಳಿಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವಿಡಿಯೋವನ್ನ ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. 

ಎಸ್ಪಿ ಸೂಚನೆ ಮೇರೆಗೆ ನಿನ್ನೆ ಐದು ಬೈಕ್ ಗಳನ್ನ ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ 5 ಬೈಕ್ ಗಳನ್ನು ವಶಕ್ಕೆ ಪಡೆದಿದ್ದರು. ಆ ಬೈಕ್ ಗಳಿಗೆ ಇನ್ಸೂರೆನ್ಸ್ ಡಾಕ್ಯುಮೆಂಟ್ ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು  ದಾಖಲೆಗಳಿಲ್ಲ, ಮತ್ತೊಂದು ಸೈಲೆನ್ಸರ್ ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್ ಗಳು ಹಾಗೂ ಹಾಲ್ಫ್ ಹೆಲ್ಮೇಟ್ ಗಳ ಮೇಲೆ ರೋಡ್ ರೂಲರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ.

click me!