ಬೆಂಗಳೂರು: ASI ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ

Published : Jun 27, 2022, 10:58 PM IST
ಬೆಂಗಳೂರು: ASI ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸಾರಾಂಶ

* ASI ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ * ಅಂತಿಮ‌ ವರ್ಷದ ಬಿಕಾಂ ಓದುತ್ತಿದ್ದ ಪ್ರಶಾಂತ್ ಸುಸೈಡ್ * ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಬೆಂಗಳೂರು, (ಜೂನ್.27) : ಅಂತಿಮ‌ ವರ್ಷದ ಬಿಕಾಂ ಓದುತ್ತಿದ್ದ ವಿದ್ಯಾರ್ಥಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ  ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಂತಿಮ‌ ವರ್ಷದ ಬಿಕಾಂ ಓದುತ್ತಿದ್ದ ಪ್ರಶಾಂತ್ ಮೃದು ಸ್ವಭಾವದವನು ಯಾರಾ ಬಳಿಯು ಹೆಚ್ಚು ಮಾತಾನಾಡುತ್ತಿರಲಿಲ್ಲ, ಇವರ ತಂದೆ  ಹೆಚ್.ಎಸ್.ಆರ್. ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಎಎಸ್ ಐ ನಾಗರಾಜ್ ರವರ ಜೇಷ್ಠ ಪುತ್ರನಾಗಿದ್ದ ಓದಿನಲ್ಲೂ ಮುಂದಿದ್ದ,  ಇವನು ಬೆಂಗಳೂರಿನ‌ ಜಯನಗರ 4ನೇ ಬ್ಲಾಕ್ ಬಿಹೆಚ್ ಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸದಾ ಲವಲವಿಕೆಯಲ್ಲಿರುತ್ತಿದ್ದ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಯೆಂಬುದು ಹಲವು ಅನುಮಾನಗಳನ್ನ ಮೂಡಿಸುತ್ತಿದೆ.

ಪ್ರೇಯಸಿ ಊರಿಗೆ ತೆರಳಿ ಯುವಕ ಆತ್ಮಹತ್ಯೆ: ಬೆಂಗ್ಳೂರಿನ ಪ್ರೀತಿ ಸೊರಬದಲ್ಲಿ ಅಂತ್ಯ

ಇನ್ನೂ ನಿನ್ನೆ(ಭಾನುವಾರ)  ಬೆಳ್ಳಗ್ಗೆ ಎಲ್ಲರು ಒಟ್ಟಿಗೆ ಕುಳಿತು  ಟಿಫನ್ ಮಾಡಿದ್ದರಂತೆ, ಮದ್ಯಾಹ್ನ  ಅವರವರ ಕೆಲಸಗಳಲ್ಲಿ ಮಗ್ನರಾಗಿದ್ದರು, ‌ಪ್ರಶಾಂತ ತನ್ನ ಕೊಠಡಿಯಲ್ಲಿದ್ದ ಸಂಜೆ 4 ಗಂಟೆ ಸಮಯಕ್ಕೆ ಪ್ರಶಾಂತ್ ತಮ್ಮನಿಗೆ ಗೂಗಲ್ ಪೇ ಮೂಲಕ‌ 4000ರೂಗಳನ್ನ ಕಳುಹಿಸಿದ್ದಾನೆ, ಮನೆಯಲ್ಲೇ ಇದ್ದರೂ ಅಣ್ಣ ಯಾಕೆ ಗೂಗಲ್ ಪೇ ಮಾಡ್ದಾ ಎಂಬ ಪ್ರಶ್ನೆ ತಮ್ಮನಿಗೆ ಕಾಡಿದೆ, ಸ್ವಲ್ಪ‌ ಸಮಯದ ನಂತರ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಪ್ ಆಗಿತ್ತು, ಆಗ ತಮ್ಮ ಅಣ್ಣ ಪ್ರಶಾಂತ್ ಇದ್ದ ಕೊಠಡಿಯ ಬಾಗಿಲು ಬಡಿದ್ದಾನೆ ಆದರೆ ಬಾಗಿಲು ತೆಗೆಯಲಿಲ್ಲ ಗಾಬರಿಗೊಂಡ ಮನೆಯವರು ಬಾಗಿಲು ಮುರಿದು ಒಳಗೆ ನೋಡುವಷ್ಟರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಕೆಳಗಿಳಿಸಿ ಆಸ್ಪತ್ರೆಗೆ ಕರೆದ್ಯೋಯ್ದರೆ ಯಾವುದೇ ಪ್ರಯೋಜನವಾಗಲಿಲ್ಲ ಆಗಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು,

ಇದೇಲ್ಲದರ ನಡುವೆ ಪ್ರಶಾಂತ್ ಬುದ್ದಿವಂತ ಹುಡುಗ ಯಾಕೆ ಆತ್ಮಹತ್ಯೆ ಮಾಡಿಕೊ‌ಂಡಯೆಂಬ ಪ್ರಶ್ನೆ ಮೂಡುತ್ತಿದೆ, ಆದರೆ ಇತ್ತೀಚೆಗೆ ಕಾಲೇಜಿನಲ್ಲಿ ಕ್ಷುಲಕ‌ ಕಾರಣಕ್ಕೆ ಸ್ನೇಹಿತರ ನಡುವೆ ಸಣ್ಣ ಗಲಾಟೆಯಾಗಿತ್ತು ಎಂದು ಹೇಳಲಾಗುತ್ತಿದೆ, ಆದರೆ ಈ ವಯಸ್ಸಿನಲ್ಲಿ ಸಣ್ಣಪುಟ್ಟ ಗಲಾಟೆಗಳು ಸಹಜ ಇನ್ನೂ ಪ್ರಶಾಂತನ ತಂದೆ ಎಎಸ್ ಐ ಗಲಾಟೆಗೆ ತಲೆ ಕೆಡಿಸಿಕೊಂಡಿಲವಾದರೆ ಯಾಕಾಗಿ ಆತ್ಮಹತ್ಯೆಗೆ ಮುಂದಾದ ಎಂಬ ಪ್ರಶ್ನೆ ಪೊಲೀಸರನ್ನ ಕಾಡುತ್ತಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿ, ಯಾವ ಕಾರಣಕ್ಕೆ ಪ್ರಶಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು