ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ

By Anusha Kb  |  First Published Dec 7, 2022, 11:58 AM IST

ಅಂತಾರಾಜ್ಯ ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ 18 ಜನರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ 39ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಹೈರಾಬಾದ್‌ನ ಹೈಟೆಕ್ ಸಿಟಿಯಲ್ಲಿ ಇರುವ ಖ್ಯಾತ ಹೊಟೇಲ್ ರಾಡಿಸನ್‌ನ ಮ್ಯಾನೇಜರ್ ಹಾಗೂ ಪ್ರಮುಖ ಸಂಘಟಕರು ಕೂಡ ಸೇರಿದ್ದಾರೆ


ಹೈದರಾಬಾದ್: ಅಂತಾರಾಜ್ಯ ಮಾನವ ಕಳ್ಳಸಾಗಣೆ ಹಾಗೂ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ 18 ಜನರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ 39ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಹೈರಾಬಾದ್‌ನ ಹೈಟೆಕ್ ಸಿಟಿಯಲ್ಲಿ ಇರುವ ಖ್ಯಾತ ಹೊಟೇಲ್ ರಾಡಿಸನ್‌ನ ಮ್ಯಾನೇಜರ್ ಹಾಗೂ ಪ್ರಮುಖ ಸಂಘಟಕರು ಕೂಡ ಸೇರಿದ್ದಾರೆ. ಪೊಲೀಸರ ಪ್ರಕಾರ, ಈ ಆರೋಪಿಗಳು ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಮಹಿಳೆಯರನ್ನು ವೇಶ್ಯಾವಾಟಿಕೆ ದಂಧೆಗೆಳೆಯುತ್ತಿದ್ದರು. ದೇಶದ ವಿವಿಧ ನಗರಗಳ ಮಹಿಳೆಯರಲ್ಲದೇ ವಿದೇಶದ ಮಹಿಳೆಯರು ಕೂಡ ಈ ಮಾಂಸದಂಧೆಯಲ್ಲಿ ತೊಡಗಿದ್ದರು. ತೆಲಂಗಾಣದ ಹೈದರಾಬಾದ್ ಹಾಗೂ ಸೈಬರಾಬಾದ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಶೇಕಡಾ 70 ರಷ್ಟು ವೇಶ್ಯಾವಾಟಿಕೆ ದಂಧೆಯಲ್ಲಿ (human trafficking) ಈ ದೊಡ್ಡ ಜಾಲ ಸಕ್ರಿಯವಾಗಿತ್ತು. 

ಈ ಮಾನವ ಕಳ್ಳಸಾಗಣೆ ಜಾಲವೂ ಒಟ್ಟು 14,190 ಜನ ಸಂತ್ರಸ್ತರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಾಂಸದಂಧೆ ಪ್ರಾಥಮಿಕವಾಗಿ ಹೈದರಾಬಾದ್‌, ದೆಹಲಿ, ಮುಂಬೈನಲ್ಲಿ ಕಾಲ್ ಸೆಂಟರ್ ಹಾಗೂ ವಾಟ್ಸಾಪ್ ಗ್ರೂಪ್‌ಗಳ ಮೂಲಕ ನಡೆಯುತ್ತಿತ್ತು. ಇದರೊಂದಿಗೆ ಮುಂಬೈ, ದೆಹಲಿ (Delhi), ಕೋಲ್ಕತ್ತಾ (Kolkata), ಚಂಡೀಗಢ (Chandigarh), ಅಹಮದಾಬಾದ್ (Ahmedabad) ಮತ್ತು ರಷ್ಯಾ, ಉಜ್ಬೇಕಿಸ್ತಾನ್ (Uzbekistan) ಮತ್ತು ಥೈಲ್ಯಾಂಡ್ ಸೇರಿದಂತೆ ಇತರ ದೇಶಗಳಲ್ಲಿ 300 ಸಂಘಟಕರನ್ನು ಈ ದಂಧೆ ಹೊಂದಿದೆ. ಸೈಬರಾಬಾದ್ ಪೊಲೀಸ್ ಕಮೀಷನರ್ ಸ್ಟೀಫನ್ ರವೀಂದ್ರ ಅವರು ಹೇಳುವಂತೆ ಈ ಮಾಂಸದಂಧೆಯ ಮಹಾಜಾಲವನ್ನು ಬೇಧಿಸಲು ಎರಡು ತಿಂಗಳ ಕಾಲ  ಸೈಬರಾಬಾದ್ ಪೊಲೀಸ್ ಇಲಾಖೆಯ ಮಾನವ ಕಳ್ಳ ಸಾಗಣೆ ವಿರೋಧಿ ಘಟಕ ಹಾಗೂ ಸ್ಥಳೀಯ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ತಂಡ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿತ್ತು. 

Tap to resize

Latest Videos

ಕಿಮ್‌ ಜಾಂಗ್‌ ಉನ್‌ 'ಪ್ಲೆಶರ್‌ ಸ್ಕ್ವಾಡ್‌', ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಬಾಲಕಿಯರು!

ಮೊಹಮ್ಮದ್ ಅದೀಮ್ ಅಲಿಯಾಸ್ ಅರ್ನವ್, ಅರೋರಾ, ನಿಖಿಲ್ ಮುಂತಾದ ಹೆಸರುಗಳಿಂದ ಈ ದಂಧೆ ನಡೆಸುತ್ತಿದ್ದ ಈ ಜಾಲದ ಪ್ರಮುಖ ಆರೋಪಿಯೂ ಹಲವು ಹೆಸರುಗಳನ್ನು ಇರಿಸಿಕೊಂಡಿದ್ದು, ಸೈಬರಾಬಾದ್‌ನ (Cyberabad) ಹೊರಗೆ ರಾಚಕೊಂಡ (Rachakonda), ಹಾಗೂ ಹೈದರಾಬಾದ್‌ನಲ್ಲಿ ತನ್ನದೇ ಸರ್ಕಲೊಂದನ್ನು ನಿರ್ಮಿಸಿಕೊಂಡಿದ್ದ ಈತ  ಮುಂಬೈ, ಕೋಲ್ಕತ್ತಾ (Kolkata), ದೆಹಲಿಯಿಂದ 950ಕ್ಕೂ ಹೆಚ್ಚು ಹೆಣ್ಣು ಮಕ್ಕಳನ್ನು ಈ ದಂಧೆಗೆ ಪೂರೈಕೆ ಮಾಡುತ್ತಿದ್ದ. ಇದರ ಜೊತೆ ಮಾದಕ ದ್ರವ್ಯಗಳನ್ನು ಕೂಡ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸ್ ಕಮೀಷನರ್ ರವೀಂದ್ರ ಹೇಳಿದ್ದಾರೆ.

ಅದೇ ರೀತಿ ರಿಷಿ ಅಲಿಯಾಸ್ ಮೊಹ್ಮದ್ ಅಬ್ದುಲ್ ಸಲ್ಮಾನ್ ಎಂಬಾತ ಸತತ ಆರು ವರ್ಷಗಳಿಗೂ ಹೆಚ್ಚು ಕಾಲ ಅಂದಾಜು 900ಕ್ಕೂ ಹೆಚ್ಚು ಸಂತ್ರಸ್ತರನ್ನು ಈ ಮಾಂಸದಂಧೆಗೆ ದೂಡಿದ್ದಾನೆ. ಈತ ಹೈದರಾಬಾದ್‌ನ ಮಾದಪುರ ಪೊಲೀಸ್ ಠಾಣೆಯ ಲಿಸ್ಟ್‌ನಲ್ಲಿ ನಾಪತ್ತೆಯಾಗಿರುವ ಕ್ರಿಮಿನಲ್ ಆಗಿದ್ದಾನೆ. ಈತನ ವಿರುದ್ಧ ಭಾರತದ ಪ್ರಮುಖ ನಗರಗಳು ಸೇರಿದಂತೆ ರಷ್ಯಾ(Russia), ಉಜೆಕಿಸ್ತಾನ (Uzbekistan), ಥೈಲ್ಯಾಂಡ್‌ನಂತಹ (Thailand) ದೇಶಗಳಲ್ಲಿ ವಿದೇಶಿಯರನ್ನು (foreigners) ವೇಶ್ಯಾವಾಟಿಕೆ ದಂಧೆಗೆ ದೂಡಿದ ಆರೋಪವಿದೆ.

ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಮಕ್ಕಳು: ಇದು ಕಿಮ್​ ಹಕೀಕತ್ತು

ಇತರ ಆರೋಪಿಗಳನ್ನು ಮೊಹಮ್ಮದ್ ಸಮೀರ್(27) ಹರ್ಬಿಂದರ್ ಕೌರ್ ಅಲಿಯಾಸ್ ಸಿಮ್ರಾನ್ ಅಲಿಯಾಸ್ ಅನಿಕಾ (29) ಮೊಹಮ್ಮದ್ ಸಲೀಂ ಖಾನ್ (23), ಮೊಹಮ್ಮದ್ ಅಬ್ದುಲ್ ಕರೀಂ(36) ರಾಡಿಸ್ಸನ್ ಹೊಟೇಲ್ ಮಾಲೀಕ ರಾಕೇಶ್ ಚಂದ್ರ ಶರ್ಮಾ, ಯೆರಸಾನಿ ಯೋಗೇಶ್ವರ್ ರಾವ್, ನದೀಂಪಲ್ಲ ಸಾಯಿಬಾಬು ಗೌಡ್ ಅಲಿಯಾಸ್ ಲಕ್ಕಿ, ಶೈಲೇಂದ್ರ ಪ್ರಸಾದ್ ಅಲಿಯಾಸ್ ಸಲೀಂ (44) ಮೊಹಮ್ಮದ್ ಅಪ್ಸರ್  ಅಲಿಯಾಸ್ ಸಾಹಿಲ್(42),ಪಶುಪುಲೇಟಿ ಗಂಗಾಧರ್, ಮೊಹಮ್ಮದ್ ಫಯಾಜ್ ಅಲಿಯಾಸ್ ವಿನೋದ್ ಕುಮಾರ್, ವಿಷ್ಣು ಅಲಿಯಾಸ್ ಶರಣಪ್ಪ, ಸಾಯಿ ಸುಧೀರ್ ಅಲಿಯಾಸ್ ಸೈ, ಕೊಡಿ ಶ್ರೀನಿವಾಸ್ ಅಲಿಯಾಸ್ ರಾಮ್ ಕುಮಾರ್, ಅಲಿಸಂ ಅಲಿಯಾಸ್ ಅಬ್ದುಲ್ ರಫಿಕ್, ಸರಬೇಶ್ವರ್ ರಾವತ್ ಬಂಧಿತ ಆರೋಪಿಗಳಾಗಿದ್ದಾರೆ. ಇವರೆಲ್ಲರ ವಿರುದ್ಧ ಸೈಬರಾಬಾದ್ (Cyberabad) ಹಾಗೂ ಹೈದರಬಾದ್ ಕಮೀಷನರೇಟ್ (commissionerates) ವ್ಯಾಪ್ತಿಯಲ್ಲಿ 40 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಪೊಲೀಸರು 34 ಸ್ಮಾರ್ಟ್‌ಫೋನ್‌ಗಳು, ಒಂದು ಕೀಪ್ಯಾಡ್ ಫೋನ್, ಮೂರು ಕಾರು ಒಂದು ಲ್ಯಾಪ್‌ಟಾಪ್, 2.5 ಗ್ರಾಂ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
 

click me!