ವಿಜಯಪುರ: ಮನೆಯ ಹೊಸ್ತಿಲು ಬಳಿ ನವಜಾತ ಶಿಶು ಇಟ್ಟು ದುರುಳರು ಪರಾರಿ..!

By Girish Goudar  |  First Published Jun 22, 2024, 10:35 AM IST

ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ.ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ ದುರುಳರು ನವಜಾತ ಶಿಶು ಇಟ್ಟು ಹೋಗಿದ್ದಾರೆ. ನಸುಕಿನ ಜಾವ ನವಜಾತ ಶಿಶು ಇಟ್ಟು ಪರಾರಿಯಾಗಿದ್ದಾರೆ. 
 


ವಿಜಯಪುರ(ಜೂ.22):  ನವಜಾತ ಶಿಶುವನ್ನು ಮನೆಯ ಹೊಸ್ತಿಲು ಬಳಿ ಎಸೆದು ದುಷ್ಟರು ಪರಾರಿಯಾದ ಹೃದಯವಿದ್ರಾವಕ  ಘಟನೆ ವಿಜಯಪುರ ನಗರದ ಚಾಲುಕ್ಯ ನಗರ ವೆಸ್ಟ್‌ನಲ್ಲಿ ಇಂದು(ಶನಿವಾರ) ನಡೆದಿದೆ.  ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ.ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ ದುರುಳರು ನವಜಾತ ಶಿಶು ಇಟ್ಟು ಹೋಗಿದ್ದಾರೆ. ನಸುಕಿನ ಜಾವ ನವಜಾತ ಶಿಶು ಇಟ್ಟು ಪರಾರಿಯಾಗಿದ್ದಾರೆ. 

ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಕ್ಲಿಪ್ ಜೊತೆಯಲ್ಲಿ ಮಗು ಬಿಟ್ಟು ಹೋಗಿದ್ದಾರೆ. ಗಂಡು ಮಗು ಮೃತಪಟ್ಟಿದೆ.   ಮಗುವಿನ ದೇಹದ ಮೇಲೆ ಕಪ್ಪು ಕಪ್ಪು ಕಲೆಗಳು ಇವೆ. ಮನೆಯಲ್ಲಿ ಬಾಡಿಗೆ ಇರುವ ವೇಳೆ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. 

Tap to resize

Latest Videos

undefined

ಭದ್ರಾ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಶಿವಮೊಗ್ಗ ಮೂಲದ ಮೂವರು ಯುವಕರು ದುರಂತ ಸಾವು!

ಮೃತ ಮಗುವನ್ನು ಕಂಡು ವಿದ್ಯಾರ್ಥಿನಿಯರು ಹೌಹಾರಿದ್ದಾರೆ. ಅನಾರೋಗ್ಯದ ಕಾರಣದಿಂದ ಮಗುವನ್ನ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.  ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!