ಪದ್ಮನಾಭ ಕೊಟ್ಯಾನ್ ಸಿವಿಲ್ ಕಾಂಟ್ರಾಕ್ಟ್ ಆಗಿದ್ದಾರೆ. 8 ದುಷ್ಕರ್ಮಿಗಳ ತಂಡ ಮಾಸ್ಕ್ ಇನ್ನೊವಾ ಕಾರಿನಲ್ಲಿ ಬಂದಿದ್ದರು. ಮನೆಗೆ ನುಗ್ಗಿ ಮನೆ ಮಂದಿಗೆ ಚೂರಿ ತೋರಿಸಿ ಬೆದರಿಸಿ ಮನೆಯಲ್ಲಿದ್ದ ಉದ್ಯಮಿ ಪದ್ಮನಾಭ ಅವರ ಭುಜಕ್ಕೆ ಚೂರಿಯಿಂದ ಇರಿದು ದರೋಡೆ ಮಾಡಿ ಪರಾರಿಯಾದ ದುಷ್ಕರ್ಮಿಗಳು.
ಮಂಗಳೂರು(ಜೂ.22): ದುಷ್ಕರ್ಮಿಗಳು ಉದ್ಯಮಿಗೆ ಚೂರಿಯಿಂದ ಇರಿದು ಮನೆ ದರೋಡೆ ಮಾಡಿದ ಘಟನೆ ಮಂಗಳೂರು ಹೊರವಲಯದ ಪೆರ್ಮಂಕಿ ಎಂಬಲ್ಲಿ ನಡೆದ ನಡೆದಿದೆ. ಉದ್ಯಮಿ ಪದ್ಮನಾಭ ಕೊಟ್ಯಾನ್ ಮನೆಯಲ್ಲಿ ದರೋಡೆ ನಡೆದಿದೆ.
ಪದ್ಮನಾಭ ಕೊಟ್ಯಾನ್ ಸಿವಿಲ್ ಕಾಂಟ್ರಾಕ್ಟ್ ಆಗಿದ್ದಾರೆ. 8 ದುಷ್ಕರ್ಮಿಗಳ ತಂಡ ಮಾಸ್ಕ್ ಇನ್ನೊವಾ ಕಾರಿನಲ್ಲಿ ಬಂದಿದ್ದರು. ಮನೆಗೆ ನುಗ್ಗಿ ಮನೆ ಮಂದಿಗೆ ಚೂರಿ ತೋರಿಸಿ ಬೆದರಿಸಿ ಮನೆಯಲ್ಲಿದ್ದ ಉದ್ಯಮಿ ಪದ್ಮನಾಭ ಅವರ ಭುಜಕ್ಕೆ ಚೂರಿಯಿಂದ ಇರಿದಿದ್ದಾರೆ. ಪದ್ಮನಾಭ ಅವರ ಪತ್ನಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ನಗದು ಸೇರಿದಂತೆ ಚಿನ್ನಾಭರಣ, ದೋಚಿ ಪರಾರಿಯಾಗಿದ್ದಾರೆ.
ಹೊಸಕೋಟೆ: ರಸ್ತೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಕ್ಕೆ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ದುಷ್ಕರ್ಮಿಗಳು..!
ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ತೆರಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಪದ್ಮನಾಭ ಕೊಟ್ಯಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರು ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ.