ಪುಣೆ ಸ್ಫೋಟ ಆರೋಪಿಗೆ ಭಟ್ಕಳದಲ್ಲಿ ಎಟಿಎಸ್ ತಲಾಶ್..!

By Kannadaprabha NewsFirst Published Jun 22, 2024, 10:03 AM IST
Highlights

2008ರಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಕಬೀರ್‌ಖಾದೀರ್‌ ಸುಲ್ತಾನ್ ಅಬ್ದುಲ್ ಅಲಿಯಾಸ್ ಮೌಲಾನಾ ಸುಲ್ತಾನ್ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತ ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಭಟ್ಕಳ(ಜೂ.22):  ಪುಣೆಯಲ್ಲಿ ನಡೆದ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಭಟ್ಕಳ ನಿವಾಸಿ ಮನೆಗೆ ಮುಂಬೈ ಎಟಿಎಸ್ (ಭಯೋತ್ಪಾದನಾ ವಿರೋಧಿ ದಳ) ತಂಡವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಅಂಟಿಸಿ ಹೋಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

2008ರಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಕಬೀರ್‌ಖಾದೀರ್‌ ಸುಲ್ತಾನ್ ಅಬ್ದುಲ್ ಅಲಿಯಾಸ್ ಮೌಲಾನಾ ಸುಲ್ತಾನ್ ಕಳೆದ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತ ಆಗಾಗ ಭಟ್ಕಳಕ್ಕೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

Latest Videos

ಈ ನಾಲ್ವರು ಐಸಿಸ್‌ ಶಂಕಿತರ ಸುಳಿವು ನೀಡಿದರೆ ತಲಾ 3 ಲಕ್ಷ ಬಹುಮಾನ: ಎನ್‌ಐಎ ಘೋಷಣೆ

ಈತನಿಗಾಗಿ ಜೂ.10ರಂದು ಭಟ್ಕ ಳಕ್ಕೆ ಆಗಮಿಸಿದ್ದ ಮುಂಬೈ ಎಟಿಎಸ್ ತಂಡ ಮನೆ, ಭಟ್ಕಳ ತಹಸೀಲ್ದಾ‌ರ್ ಕಚೇರಿ ಹಾಗೂ ಪುರಸಭೆಯ ನೋಟಿಸ್ ಬೋರ್ಡಿಗೆ ಜೂ.21ರಂದು ಪುಣೆ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಇರುವ ನೋಟಿಸ್‌ ಅಂಟಿಸಿ ತೆರಳಿದೆ.

click me!