ನಗರದಲ್ಲಿ ಜರುಗುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರ ಭಾರತ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಮೂಲಕ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಇವರು ಸಹ ಪ್ರಮುಖ ಕಾರಣರಾಗಿದ್ದಾರೆ.
• ಮೋಹನ ಹಂಡ್ರಂಗಿ
ಬೆಂಗಳೂರು (ಅ.30): ಜಗತ್ತಿನ ಪ್ರಮುಖ ನಗರದಲ್ಲಿ ಒಂದಾದರಾಜಧಾನಿ ಬೆಂಗಳೂರಿಗೆ ಉತ್ತರ ಭಾರತ ಮೂಲದವರು ಉದ್ಯೋಗದ ಕಾರಣಕ್ಕೆ ಭಾರೀ ಸಂಖ್ಯೆಯಲ್ಲಿ ವಲಸೆ ಬಂದಿದ್ದಾರೆ. ಇದರ ಜತೆಗೆ ನಗರದಲ್ಲಿ ಜರುಗುತ್ತಿರುವ ಅಪರಾಧ ಕೃತ್ಯಗಳಲ್ಲಿ ಉತ್ತರ ಭಾರತ ಮೂಲದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಈ ಮೂಲಕ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಇವರು ಸಹ ಪ್ರಮುಖ ಕಾರಣರಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ನಗರದ ಕಟ್ಟಡ ನಿರ್ಮಾಣ, ಫುಡ್ ಡೆಲಿವರಿ, ಕೈಗಾರಿಕೆಗಳು, ಗಾರ್ಮೆಂಟ್ಸ್, ಖಾಸಗಿ ಸೆಕ್ಯೂರಿಟಿ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಉದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಉತ್ತರ ಭಾರತ ಮೂಲದ ವಲಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ದ್ವೇಷ, ಸ್ವಾರ್ಥ, ದುಶ್ಚಟ, ಮೋಜು-ಮಸ್ತಿ, ಸುಲಭ ಸಂಪಾದನೆಗಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ಬೆಂಗಳೂರು ಅದರಲ್ಲೂ ಕನ್ನಡಿಗರ ಘನತೆಗೆ ಧಕ್ಕೆಯಾಗುತ್ತಿದೆ.
ಕೋವಿಡ್ ವರದಿ ನೋಡಿ ನನಗೇ ಕೊರೋನಾ ಬರುವಂತಿದೆ: ಡಿ.ಕೆ.ಶಿವಕುಮಾರ್
ಬೆಂಗಳೂರು ಮಹಾನಗರ ಐಟಿ-ಬಿಟಿ, ನವೋದ್ಯಮ, ಆಟೋಮೊಬೈಲ್ ಸೇರಿ ಹಲವು ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಆದರೆ, ಇಲ್ಲಿನ ಅಪರಾಧ ಚಟುವಟಿಕೆಗಳಿಂದ ಹಲವು ಬಾರಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರದ ಖ್ಯಾತಿಗೆ ಧಕ್ಕೆಯಾಗಿದೆ. ಅದರಲ್ಲೂ ಉತ್ತರ ಭಾರತ ಮೂಲದ ವಲಸಿಗರು ನಡೆಸುವ ದುಷ್ಕೃತ್ಯಗಳು ನಗರದ ಹೆಸರನ್ನು ಹೆಚ್ಚು ಕೆಡಿಸುತ್ತಿವೆ. ಈ ವಲಸಿಗರ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವುದು ಸವಾಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
ಫುಡ್ ಡೆಲಿವರಿ ಹೆಸರಿನಲ್ಲಿ ಡ್ರಗ್ಸ್ ಡೆಲಿವರಿ!: ಉತ್ತರ ಭಾರತ ಮೂಲದ ಬಿಹಾರ, ಒಡಿಶಾ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಯುವಕರು ನಗರದಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಕೆಲಸಮಾಡಿಕೊಂಡಿದ್ದಾರೆ. ಈ ಪೈಕಿ ಕೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸುವ ದುರಾಸೆಯಿಂದ ಡ್ರಗ್ಸ್ ಮಾರಾಟ ದಂಧೆಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಫುಡ್ ಡೆಲಿವರಿ ಬಾಯ್ ಸೋಗಿನಲ್ಲಿ ಗಿರಾಕಿಗಳಿಗೆ ಗಾಂಜಾ, ಎಂಡಿಎಂಎ, ಕೊಕೇನ್ ಸೇರಿ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ. ನಗರದಲ್ಲಿ ಒಂದು ತಿಂಗಳಲ್ಲಿ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ದಾಖಲಾಗುವ ಶೇ.50ರಷ್ಟು ಆರೋಪಿಗಳು ಉತ್ತರ ಭಾರತ ಮೂಲದ ಫುಡ್ ಡೆಲಿವರಿ ಬಾಯ್‌ಗಳೇ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.
ಪಬ್-ಬಾರ್‌ಗಳಲ್ಲಿ ಗಲಾಟೆ, ಅನುಚಿತ ವರ್ತನೆ: ಹೊರರಾಜ್ಯಗಳಸಾಕಷ್ಟುಐಟಿ-ಬಿಟಿ ಉದ್ಯೋಗಿಗಳು ನಗರದ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕರು ವಾರಾಂತ್ಯ ದಿನಗಳಲ್ಲಿ ಪಬ್, ಬಾರ್‌ಗಳಲ್ಲಿ ಪಾರ್ಟಿ ಮಾಡಿ ಕಂಠಮಟ್ಟ ಮದ್ಯ ಸೇವಿಸಿ, ರಸ್ತೆಗಳಲ್ಲಿ ಹುಚ್ಚಾಟ ಮೆರೆಯುವ ಘಟನೆಗಳು ವರದಿಯಾಗುತ್ತಿವೆ.
ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ 2 ಪ್ರಕರಣ
ಮಹಿಳೆ ಮೃತದೇಹ ತುಂಡು ಮಾಡಿ ಫ್ರಿಡ್ಜ್‌ಗೆ ತುಂಬಿದ್ದ: ಸೆಪ್ಟೆಂಬರ್ 8ರಂದು ನಗರದ ವೈಯಾಲಿ ಕಾವಲ್ ನಲ್ಲಿ ನಡೆದಿದ್ದ ಮಹಾಲಕ್ಷ್ಮೀ(29) ಭೀಕರ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ನಗರದ ಬಟ್ಟೆ ಶೋರೂಮ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದ ಒಡಿಶಾ ಮೂಲದ ಆರೋಪಿ ಮುಕ್ತಿ ರಂಜನ್ ಪ್ರತಾಪ್ ರಾಯ್, ಮದುವೆ ವಿಚಾರಕ್ಕೆ ತನ್ನ ಸಹೋದ್ಯೋಗಿ ಮಹಾಲಕ್ಷ್ಮಿ ಯನ್ನು ಆಕೆಯ ಮನೆಯಲ್ಲೇ ಕೊಲೆ ಮಾಡಿ ಬಳಿಕ ಮಾಂಸ ಕತ್ತರಿಸುವ ಚಾಕುಗಳಿಂದ ಮೃತದೇಹ ವನ್ನು 50ಕ್ಕೂ ಅಧಿಕ ತುಂಡು ಮಾಡಿ ಫ್ರಿಡ್ಜ್‌ಗೆ ತುಂಬಿ ಒಡಿಶಾಗೆ ಪರಾರಿಯಾಗಿದ್ದ. ಈ ಭಯಾ ನಕ ಸುದ್ದಿ ರಾಷ್ಟ್ರವ್ಯಾಪಿ ಚರ್ಚೆಯಾಗಿತ್ತು.
ಪಿಜಿಗೆ ನುಗ್ಗಿ ಯುವತಿಯ ಭೀಕರ ಕೊಲೆ: ಜುಲೈ 23ರಂದು ಬೆಂಗಳೂರಿನ ಕೋರಮಂಗಲದ ಮಹಿಳಾ ಪೇಯಿಂಗ್ ಗೆಸ್ಟ್ (ಪಿ.ಜಿ)ವೊಂದರಲ್ಲಿ ನಡೆದ ಬಿಹಾರ ಮೂಲದ ಕೃತಿ ಕುಮಾರಿ(24) ಭೀಕರ ಕೊಲೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಆರೋಪಿ ಮಧ್ಯಪ್ರದೇಶ ಮೂಲದ ಅಭಿಷೇಕ್, ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಪ್ರೇಯಸಿಯ ಸ್ನೇಹಿತೆ ಕೃತಿ ಕುಮಾರಿಯನ್ನು ಪಿ.ಜಿ.ಗೆ ನುಗ್ಗಿ ಕೊಲೆ ಪರಾರಿಯಾಗಿದ್ದ. ಈ ಘಟನೆ ನಗರದ ಪೇಯಿಂಗ್ ಗೆಸ್ಟ್‌ಗಳ ಸುರಕ್ಷತೆ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ವಕ್ಫ್ ವಿಚಾರವಾಗಿ ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು ನಗರಕ್ಕೆ ಈ ಹೊರರಾಜ್ಯದವರೇ ಅತಿದೊಡ್ಡ ಅಪಾಯ. ನಗರ ದಲ್ಲಿ ನಡೆಯುವ ಮನೆಗಳವು, ಸರ ಅಪಹರಣ, ದ್ವಿಚಕ್ರ ವಾಹನಗಳ ಕಳವು, ಎಟಿಎಂ ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಹೊರರಾಜ್ಯದವರೇ ಹೆಚ್ಚಿನ ಆರೋಪಿಗಳಾಗಿ ದ್ದಾರೆ. ಹಲವು ಪ್ರಕರಣಗಳಲ್ಲಿ ನಮ್ಮ ಪೊಲೀಸರು ಹೊರರಾಜ್ಯಗಳಿಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಂತಹ ಅಪರಾಧ ಕೃತ್ಯಗಳಿಂದ ಬೆಂಗಳೂರು ನಗರಕ್ಕೂ ಕೆಟ್ಟ ಹೆಸರು ಬರುತ್ತಿದೆ.
• ಡಾ.ರಾಜಪ್ಪ ನಿವೃತ್ತ ಡಿಐಜಿ