ಉಡುಪಿ: ಗಂಡನ ಕೊಲೆಗೆ ಗೂಗಲ್‌ನಲ್ಲಿ ಸ್ಲೋ ಪಾಯ್ಸನ್ ಹುಡುಕಿದ್ದ ಹಂಡ್ತಿ ಪ್ರಿಯಕರ!

By Sathish Kumar KH  |  First Published Oct 29, 2024, 1:42 PM IST

ಉಡುಪಿಯಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ, ಪ್ರಿಯಕರನೊಂದಿಗೆ ಸೇರಿ ಸ್ಲೋ ಪಾಯ್ಸನ್ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕಿದ್ದಳು ಎಂಬುದು ಬೆಳಕಿಗೆ ಬಂದಿದೆ. ಲ್ಯಾಬ್‌ನಿಂದ ವಿಷ ತಂದುಕೊಟ್ಟಿದ್ದ ಪ್ರಿಯಕರನೊಂದಿಗೆ 5 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು.


ಉಡುಪಿ (ಅ.29): ರಾಜ್ಯದ ಕರಾವಳಿ ನಗರಿ ಉಡುಪಿಯ ಅಜೆಕಾರಿನಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ರೋಚಕ ಸಾಕ್ಷಿಯೊಂದು ಸಿಕ್ಕಿದೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊಲೆ ಮಾಡುವುದಕ್ಕೆ ಸ್ವತಃ ಹೆಂಡತಿಯೇ ಗೂಗಲ್‌ನಲ್ಲಿ ಸ್ಲೋ ಪಾಯ್ಸನ್ ಬಗ್ಗೆ ಮಾಹಿತಿಯನ್ನು ಹುಡುಕಿದ್ದಳು ಎಂಬುದು ಪತ್ತೆಯಾಗಿದೆ. ಜೊತೆಗೆ, ಆಕೆಯ ಪ್ರಿಯಕರನೇ ಮೆಡಿಕಲ್ ಲ್ಯಾಬ್‌ನಿಂದ ವಿಷವನ್ನು ತಂದು ಕೊಡುತ್ತಿದ್ದುದು ಕೂಡ ಬೆಳಕಿಗೆ ಬಂದಿದೆ.

ಉಡುಪಿಯ ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಡನ ಕೊಲೆಗೆ 5 ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು. ಇದಕ್ಕಾಗಿ ಹೆಂಡತಿ ಗೂಗಲ್ ಸರ್ಚ್ ನಲ್ಲಿ ಮನುಷ್ಯನನ್ನು ನಿಧಾನವಾಗಿ ಕೊಲ್ಲುವಂತಹ ವಿಷ ಆರ್ಸೆನಿಕ್ ಟ್ರೈಯಾಕ್ಸೈಡ್ ಬಗ್ಗೆ ಹುಡುಕಾಟ ನಡೆಸಿದ್ದರು. ಆರ್ಸೆನಿಕ್ ಸೇವಿಸಿದ ಮೇಲೆ ಎಷ್ಟು ದಿನದ ಬಳಿಕ ಮನುಷ್ಯ ಸಾಯುತ್ತಾನೆ? ಎಂಬೆಲ್ಲ‌ ವಿಚಾರದ ಬಗ್ಗೆ ರಿಸರ್ಚ್ ನಡೆಸಿದ್ದರು. ಈ ಬಗ್ಗೆ ಗೂಗಲ್‌ನಲ್ಲಿ ಹುಡುಕಿದ್ದ ದಿಲೀಪ್‌ ಹೆಗ್ಡೆ ಆತನ ಪ್ರೇಯಸಿಗೆ ಈ ಮಾಹಿತಿಯನ್ನು ತೋರಿಸಿದ್ದನು. ಈ ನಂತರ ಗಂಡನನ್ನು ಕೊಲೆ ಮಾಡುವುದಕ್ಕೆ ಸ್ವತಃ ಹೆಂಡತಿಯೇ ಸ್ಲೋ ಪಾಯ್ಸನ್‌ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ನೋಡಿದ್ದಳು. 

Tap to resize

Latest Videos

undefined

ಇದನ್ನೂ ಓದಿ: Video: ಉಡುಪಿ 28ರ ಹೋಟೆಲ್ ಉದ್ಯಮಿಯ ಅಕ್ರಮ ಸಂಬಂಧಕ್ಕೆ ಗಂಡನನ್ನೇ ಮಗಿಸಿದ 36ರ ಬ್ಯೂಟಿ ಆಂಟಿ!

ಉಡುಪಿಯಲ್ಲಿ ಕೊಲೆಯಾದ ಹೋಟೆಲ್ ಉದ್ಯಮಿ ಬಾಲಕೃಷ್ಣ ಪೂಜಾರಿಯನ್ನು ಮುಗಿಸಲು ಆತನ ಹೆಂಡತಿ ಪ್ರತಿಮಾಳ ಪ್ರಿಯಕರ ದಿಲೀಪ್ ಹೆಗ್ಡೆ ಐದು ತಿಂಗಳ ಮುಂಚಿತವಾಗಿ ಜೂನ್ ತಿಂಗಳಲ್ಲಿಯೇ ಉಡುಪಿಯ ರಮನ್ಸ್ ಲ್ಯಾಬ್ ನಲ್ಲಿ  ಆರ್ಸೆನಿಕ್ ಬಗ್ಗೆ ವಿಚಾರಿಸಿದ್ದನು. ಶಾಲಾ- ಕಾಲೇಜುಗಳ ಲ್ಯಾಬ್ ನಲ್ಲಿ ಪ್ರಯೋಗ ನಡೆಸಲು ಬಳಸಲಾಗುತ್ತದೆ ಎಂಬ ಮಾಹಿತಿ ತಿಳಿದುಕೊಂಡಿದ್ದನು. ಇದಾದ ನಂತರ ಪೌಡರ್ ಮಾದರಿಯ ಆರ್ಸೆನಿಕ್ ಟ್ರೈಯಾಕ್ಸೈಡ್ 500 ಎಂಜಿ ಪೌಡರ್ ಖರೀದಿ ಮಾಡಿದ್ದನು. ಈ ಪೌಡರ್ ಅನ್ನು ಶಾಲಾ ಕಾಲೇಜುಗಳಿಗಷ್ಟೇ ಈ ಲ್ಯಾಬ್ ನಿಂದ ಪೂರೈಕೆ ಮಾಡಲಾಗುತ್ತದೆ.

ಈ ಆರ್ಸೆನಿಕ್ ಟ್ರೈಯಾಕ್ಸೈಡ್ ಅನ್ನು ಒಂದು ವಾರದ ಮೊದಲು ಬುಕ್ ಮಾಡಿದರಷ್ಟೆ ಲಭ್ಯವಾಗುತ್ತದೆ. ಹೀಗಾಗಿ, ದಿಲೀಪ್ ಹೆಗ್ಡೆ ಉಡುಪಿಯ ರಮನ್ಸ್ ಲ್ಯಾಬ್‌ಗೆ ಕರೆ ಮಾಡಿ ಆರ್ಸೆನಿಕ್ ಟ್ರೈಆಕ್ಸೈಡ್ ಪೌಡರ್‌ ಅನ್ನು ಆರ್ಡರ್ ಮಾಡಿದ್ದನು. ಆರ್ಸೆನಿಕ್ ಟ್ರೈಯಾಕ್ಸೈಡ್ ಬಾಟಲಿಯ ಫೋಟೋ ತೋರಿಸಿ ಇದು ಬೇಕು ಎಂದು ಹೇಳಿದ್ದನಂತೆ. ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಲ್ಯಾಬ್ ಬಳಕೆಗಾಗಿ ಆರ್ಸೆನಿಕ್ ಬೇಕೆಂದು ಆರ್ಡರ್ ಮಾಡಿದ್ದನು. ಇನ್ನು ಆರ್ಡರ್ ಮಾಡಿ ನೇರ ರಮನ್ಸ್ ಲ್ಯಾಬ್ ಗೆ ಬಂದು ಹಣ ಪಾವತಿ ಮಾಡಿದ್ದನು.

ಒಂದು ವಾರದ ಬಳಿಕ ಲ್ಯಾಬ್ ಸಿಬ್ಬಂದಿ ಆರ್ಸೆನಿಕ್ ರಮನ್ಸ್ ಲ್ಯಾಬ್ ಬರುತ್ತಲೇ ದಿಲೀಪ್‌ ಹೆಗ್ಡೆಗೆ ಕರೆ ಮಾಡಿದ್ದನು. ಆ ಬಳಿಕ‌ ದಿಲೀಪ್ ವಿಳಾಸಕ್ಕೆ ಪಾರ್ಸೆಲ್ ಹಾಕಿದ್ದರು. ಆಗಸ್ಟ್‌ವರೆಗೆ ದಿಲೀಪ್ ಕಾದು ಸ್ಲೋ ಪಾಯಿಸನ್ ನೀಡಲು ಹೇಳಿದ್ದನು. ಇನ್ನು ಪ್ರತಿಮಾ ಮನೆಯಲ್ಲಿ ಗಂಡನಿಗೆ ಊಟ ಕೊಡುವಾಗ ಗಣೇಶೊತ್ಸವ ಸಮಯದಲ್ಲಿ ಈ  ಸ್ಲೋಪಾಯಿಸನ್ ಊಟಕ್ಕೆ ‌ಬೆರೆಸಿ ಕೊಡಲು ಆರಂಭಿಸಿದ್ದಾಳೆ. ಪ್ರತಿ ನಿತ್ಯ ಸ್ವಲ್ಪ ಸ್ವಲ್ಪ ಪೌಡರ್ ಊಟದಲ್ಲಿ ಬೆರೆಸಿ ಕೊಡುತ್ತಿದ್ದಳು. ಹೆಂಡತಿ ಕೊಟ್ಟ ವಿಷಾಹಾರ ಸೇವನೆ ಮಾಡುತ್ತಿದ್ದ ಉದ್ಯಮಿ ಬಾಲಕೃಷ್ಣ ಪೂಜಾರಿ ದಿನ ಕಳೆದಂತೆ ಮಾನಸಿಕ ಹಾಗೂ ದೈಹಿಕ ಕ್ಷಮತೆ ಕಳೆದುಕೊಳ್ಳುತ್ತಿದ್ದನು.

ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ಹೀಗೆ ದಿನೇ ದಿನೇ ಆರೋಗ್ಯ ಹದಗೆಡುತ್ತಲೇ ಆಸ್ಪತ್ರೆಗೆ ದಾಖಲಾಗಿದ್ದನು. ಕೊನೆಗೆ ಮನೆಯವರೆಲ್ಲರೂ ಸೇರಿ ರಾಜ್ಯದ ವಿವಿಧ ದೊಡ್ಡ ಆಸ್ಪತ್ರೆಗಳಲ್ಲಿ ಈತನಿಗೆ ಚಿಕಿತ್ಎ ಕೊಡಿಸಿ ಸಾವಿನಿಂದ ಪಾರು ಮಾಡಿಸಿದ್ದರು. ಆದರೆ, ಗಂಡ ಬದುಕಿದ್ದನ್ನು ಸಹಿಸಲಾಗದೇ ಪ್ರಿಯಕರನೊಂದಿಗೆ ಸೇರಿಕೊಂಡು ಸ್ವತಃ ಆತನ ಹೆಂಡತಿಯೇ ಎದೆ ಮೇಲೆ ಕುಳಿತು ಗಂಡನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ, ಅಂತ್ಯಕ್ರಿಯೆ ನಡೆಸಿ ಅಳುತ್ತಿದ್ದ ಹೆಂಡತಿ ನಾಟಕವನ್ನು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಟಾ ಬಯಲು ಮಾಡಿದೆ.

click me!