ಹದಿನೈದು ದಿನಗಳ ಹಿಂದೆ ಅರವಿಂದ್, ತನ್ನ ಪ್ರಿಯತಮೆಯನ್ನು ಕೊಂದು ಆಕೆಯ ಶವವನ್ನು ತನ್ನ ಮನೆಯ ವಾಟರ್ ಟ್ಯಾಂಕ್‌ನಲ್ಲಿ ಬಚ್ಚಿಟ್ಟಿದ್ದಾನೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ವಿಶ್ವಜೀತ್ ಸಿಂಗ್ ಹೇಳಿದ್ದಾರೆ.
ಲಕ್ನೋ (ಜೂ.10): ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ನಿರ್ಮಾಣ ಹಂತದ ಮನೆಯಲ್ಲಿದ್ದ ವಾಟರ್ ಟ್ಯಾಂಕ್‌ನಲ್ಲಿ ಬಚ್ಚಿಟ್ಟಿದ್ದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶುಕ್ರವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿನ ಯಮುನಾಪರ್ ಕರ್ಚನಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾಹೇವಾ ಪ್ರದೇಶದ ಆರೋಪಿ ಅರವಿಂದ್ ಅವರ ಮನೆಯಿಂದ ರಾಜ್ ಕೇಸರ್ (35) ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಅಂದಾಜು 15 ದಿನಗಳ ಹಿಂದೆ ಅರವಿಂದ್, ರಾಜ್ ಕೇಸರ್‌ಳನ್ನು ಕೊಂದು ಆಕೆಯ ದೇಹವನ್ನು ಮನೆಯ ವಾಟರ್ ಟ್ಯಾಂಕ್‌ನಲ್ಲಿ ಅಡಗಿಸಿ ಇಟ್ಟಿದ್ದ ಎಂದು ಸ್ಟೇಷನ್ ಹೌಸ್ ಆಫೀಸರ್ ವಿಶ್ವಜೀತ್ ಸಿಂಗ್ ಹೇಳಿದ್ದಾರೆ. ಮೇ 30 ರಂದು ಕೇಸರ್ ಅವರ ಕುಟುಂಬ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆಕೆಯ ದೂರವಾಣಿ ಕರೆಯ ಮಾಹಿತಿಯನ್ನು ಪಡೆದ ಪೊಲೀಸರು, ಅರವಿಂದ್‌ನನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆ ಬಳಿಕ ಅರವಿಂದ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಆಕೆಯ ದೇಹವನ್ನು ವಾಟರ್ ಟ್ಯಾಂಕ್‌ನಿಂದ ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಅರವಿಂದ್, ತಾನು ರಾಜ್ ಕೇಸರ್‌ಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಂದಾಜು 15 ದಿನಗಳ ಹಿಂದೆ ಆಕೆಯನ್ನು ಕೊಲೆ ಮಾಡಿದ್ದು, ಮೃತದೇಹವನ್ನು ಮನೆಯಲ್ಲಿಯೇ ಇಟ್ಟಿರುವುದಾಗಿ ತಿಳಿಸಿದ್ದ. ಆಶಿಶ್ ಅಲಿಯಾಸ್ ಅರವಿಂದ್ ಏಳು ವರ್ಷಗಳಿಂದ ರಾಜ್ ಕೇಸರ್‌ಳನ್ನು ಪ್ರೀತಿ ಮಾಡುತ್ತಿದ್ದ. ಈ ನಡುವೆ ಅರವಿಂದ್‌ನ ವಿವಾಹವನ್ನು ಆತನ ಮನೆಯವರು ಫಿಕ್ಸ್ ಮಾಡಿದ್ದರು. ಈ ಮದುವೆ ಮೇ 28 ರಂದು ನಡೆದಿದೆ.
Horrific Murder: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆ ಕೊಲೆ!
ಆದರೆ, ಅರವಿಂದ್‌ನ ವಿವಾಹಕ್ಕೆ ರಾಜ್ ಕೇಸರ್ ಒಪ್ಪಿರಲಿಲ್ಲ. ಹೇಗಾದರೂ ಮಾಡಿ ಮದುವೆ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಳು. ಆದರೆ, ಇದಕ್ಕೆ ಒಪ್ಪಂದ ಅರವಿಂದ್ ಮೇ 24 ರಂದು ತನ್ನ ಮನೆಯಲ್ಲಿಯೇ ಆಕೆಯ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಎಲ್ಲಿಗೆ ಸಾಗಿಸೋದು ಎನ್ನುವುದು ಗೊತ್ತಾಗದೆ ಮನೆಯ ವಾಟರ್ ಟ್ಯಾಂಕ್‌ನಲ್ಲಿ ಬಚ್ಚಿಟ್ಟಿದ್ದಾನೆ. ಮೇ 24 ರಂದು ಮಾತನಾಡುವ ನೆಪದಲ್ಲಿ ಗೆಳತಿಯನ್ನು ಮನೆಗೆ ಕರೆದಿದ್ದ ಅರವಿಂದ್ ಆಕೆಯನ್ನು ನಿರ್ಮಾಣ ಹಂತದ ಮನೆಯಲ್ಲಿ ಕೊಲೆ ಮಾಡಿದ್ದಾನೆ. ಆದರೆ, ಪೊಲೀಸರ ತನಿಖೆಯ ದಾರಿ ತಪ್ಪಿಸುವ ಉದ್ದೇಶ ಹೊಂದಿದ್ದ ಅರವಿಂದ್, ಕೇಸರ್ ಅವರ ಕುಟುಂಬದ ಜೊತೆ ಸೇರಿ ಆಕೆಯನ್ನು ಹುಡುಕಲು ಪ್ರಯತ್ನ ಮಾಡಿದ್ದ.
ತುಮಕೂರು: ಬ್ಲೇಡಿನಿಂದ ಕುತ್ತಿಗೆ ಕುಯ್ದು ಹಸುಗೂಸನ್ನು ಕೊಂದ ತಾಯಿ!