ಇತ್ತೀಚಿಗಷ್ಟೇ ತಾಲೂಕಿನ ಕಮಲಾಪೂರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಮಾಸುವ ಮುನ್ನವೇ ನಗರದ ಹೊರವಲಯದಲ್ಲಿ ಶುಕ್ರವಾರ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಧಾರವಾಡ (ಜೂ.10) ಇತ್ತೀಚಿಗಷ್ಟೇ ತಾಲೂಕಿನ ಕಮಲಾಪೂರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಮಾಸುವ ಮುನ್ನವೇ ನಗರದ ಹೊರವಲಯದಲ್ಲಿ ಶುಕ್ರವಾರ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಹೆಬ್ಬಳ್ಳಿ ಅಗಸಿಯ ಮಣಿಕಂಠ ನಗರದಿಂದ ಗೋವನಕೊಪ್ಪ ಹೋಗುವ ಒಳ ರಸ್ತೆಯ ಹೊಲದ ಬದುವಿನಲ್ಲಿ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದ್ದು, ಮೃತ ಮಹಿಳೆಯನ್ನು ಕಿಲ್ಲಾ ಬಡಾವಣೆಯ ರೂಪಾ ಸವದತ್ತಿ (42) ಎಂದು ಗುರುತಿಸಲಾಗಿದೆ.
undefined
ಮೃತ ರೂಪಾ ಕಾಣೆಯಾದ ಬಗ್ಗೆ ಅವರ ಕುಟುಂಬದವರು ಗುರುವಾರವಷ್ಟೇ ಉಪ ನಗರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಕಾಣೆಯಾಗಿ ಒಂದೇ ದಿನದ ಅವಧಿಯಲ್ಲಿ ಮೃತಳಾಗಿದ್ದಾಳೆ. ರೂಪಾ ಮಾನಸಿಕ ನೆಮ್ಮದಿಗಾಗಿ ನಿತ್ಯ ನಗರದ ದರ್ಗಾವೊಂದಕ್ಕೆ ಹೋಗಿ ಬರುತ್ತಿದ್ದಳು. ಗುರುವಾರವೂ ದರ್ಗಾಕ್ಕೆ ಹೋಗಿ ಹೊರ ಬಂದಿರುವುದು ಸಿಸಿ ಟಿವಿಯಿಂದ ಗೊತ್ತಾಗಿದೆ. ಹೊರ ಬಂದ ಬಳಿಕ ನಾಪತ್ತೆಯಾಗಿದ್ದು, ಶುಕ್ರವಾರ ರೂಪಾ ಶವವಾಗಿ ಹೊಲದಲ್ಲಿ ಪತ್ತೆಯಾಗಿದ್ದಾಳೆ.
ಉದ್ಯಮಿ ಸೇರಿ ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಧಾರವಾಡ, ರೌಡಿ ಶೀಟರ್ ಪುತ್ರ ಸೇರಿ 4 ಮಂದಿ ಅರೆಸ್ಟ್
ವಿಷಯ ತಿಳಿದು ಗ್ರಾಮೀಣ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಪೊಲೀಸ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.
ಹಣದ ಆಸೆಗೆ ಬಾವಿಯೊಳಗೆ ಕೊಲೆ
ಕುಕನೂರು ಪಟ್ಟಣದ ಹೊರವಲಯದ ಬಾವಿಯಲ್ಲಿ ಈಜಲು ಹೋದ ಬಾಲಕನನ್ನು ಹಣದಾಸೆಗೆ ಇನ್ನೋರ್ವ ಕೊಲೆ ಮಾಡಿದ್ದಾನೆ ಎಂದು ಕೂಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜೂ. 4ರಂದು ಈ ಘಟನೆ ನಡೆದಿದೆ. ಪಟ್ಟಣದ ನಿವಾಸಿ ಗವಿಸಿದ್ದಪ್ಪ ಸಾಲಮನಿ ಅವರ ಪುತ್ರ ಪ್ರಜ್ವಲ್ (15) ಮೃತ ಬಾಲಕ. ಈತ ಈಜಲು ಹೋಗಿ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದೇ ಬಿಂಬಿಸಲಾಗಿತ್ತು. ಆದರೆ ಎರಡು ದಿನಗಳ ಬಳಿಕ ಅಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ. ಬಾಲಕ ಮುಳುಗಿ ಮೃತಪಟ್ಟಿಲ್ಲ, ಇನ್ನೊಬ್ಬ ಮುಳುಗಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿದೆ.
ಸ್ನೇಹಿತರೆಲ್ಲರೂ ಕೂಡಿ ಈಜಾಡಲು ಬಾವಿ ಹತ್ತಿರ ತೆರಳಿದ್ದಾರೆ. ಪ್ರಜ್ವಲಗೆ ಮೊದಲಿನಿಂದಲೂ ಪರಿಚಯ ಇದ್ದ, ಕುಕನೂರಿನ ಶಂಕ್ರಪ್ಪ ಈರಪ್ಪ ಈಬೇರಿ (28) ಎಂಬ ಯುವಕ ಪ್ರಜ್ವಲ ಹತ್ತಿರ ಮೊದಲಿನಿಂದಲೂ ಹಣ ಕೇಳುತ್ತಿದ್ದನ್ನು. ಪ್ರಜ್ವಲ ಸಹ ನನ್ನ ಹತ್ತಿರ ಇದ್ದಷ್ಟುಹಣವನ್ನು ಶಂಕ್ರಪ್ಪನಿಗೆ ನೀಡುತ್ತಿದ್ದ. ಕೆಲವು ದಿನಗಳ ಹಿಂದೆ ಶಂಕ್ರಪ್ಪ ಸ್ವಲ ಹಣ ನೀಡುವಂತೆ ಪ್ರಜ್ವಲ ಹತ್ತಿರ ಕೇಳಿದ್ದಾನೆ. ಪ್ರಜ್ವಲ ಈ ಸಲ ನನ್ನ ಬಳಿ ಹಣವಿಲ್ಲ, ನಮ್ಮ ಮನೆಯಲ್ಲಿ ಸಹ ಕೇಳಿದ್ದೇನೆ. ಇಲ್ಲ ಎಂದಿದ್ದಾರೆ ಅಂದಿದ್ದಾನೆ.
ಹೆಣ್ಣೆಂಬ ಕಾರಣಕ್ಕೆ ಹುಟ್ಟಿದ ಮಗುವನ್ನೇ ಮುಳ್ಳಲ್ಲಿ ಬೀಸಾಡಿ ಹೋದ ಪೋಷಕರು
ಇದಾದ ಬಳಿಕ ಈಜಾಡಲು ಸ್ನೇಹಿತರೊಡನೆ ಶಂಕ್ರಪ್ಪ, ಪ್ರಜ್ವಲ ಹಾಗೂ ಇತರ ನಾಲ್ಕೈದು ಸ್ನೇಹಿತರು ಬಾವಿಗೆ ತೆರಳಿದ್ದಾರೆ. ಈಜು ಬಾರದ ಪ್ರಜ್ವಲನನ್ನು ಸಹ ನೀರಿಗಿಳಿಯುವಂತೆ ಒತ್ತಾಯಿಸಿದ್ದಾರೆ. ನೀರಿಗಿಳಿದ ಪ್ರಜ್ವಲನನ್ನು ಶಂಕ್ರಪ್ಪ ಕಾಲಿನಿಂದ ತುಳಿದು ಮುಳುಗಿಸುವ ಪ್ರಯತ್ನ ಮಾಡಿದ್ದಾನೆ. ಕೆಲಹೊತ್ತು ಪ್ರಜ್ವಲ ಮೇಲಕ್ಕೆ ಬಾರದ ಹಿನ್ನೆಲೆ ಅಲ್ಲಿದ್ದವರೆಲ್ಲ ಪ್ರಜ್ವಲ ನೀರಿನಲ್ಲಿ ಮುಳುಗಿದ್ದಾನೆ ಎಂದು ಬಿಂಬಿಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಈಗ ಎರಡು ದಿನಗಳ ಆನಂತರ ನೈಜ ಘಟನೆ ಬೆಳಕಿಗೆ ಬಂದಿದೆ. ಶಂಕ್ರಪ್ಪನ ವಿರುದ್ಧ ಪ್ರಕರಣ ದಾಖಲಾಗಿದೆ. ಶಂಕ್ರಪ್ಪನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.