ಸಾಕಷ್ಟು ತನಿಖೆಯ ಬಳಿಕ ತಿಳಿದ ವಿಚಾರವೇನೆಂದರೆ, ವೈದ್ಯನಾಗಿದ್ದ ಬಾಯ್‌ಫ್ರೆಂಡ್‌ಗೆ ಮಹಿಳೆಯು ಮೊದಲು ತನ್ನ ಬೆತ್ತಲು ವಿಡಿಯೋ ಹಾಗೂ ಫೋಟೋಗಳನ್ನು ಕಳಿಸುತ್ತಿದ್ದಳು. ಬಳಿಕ ಬಾಯ್‌ಫ್ರೆಂಡ್‌ನ ಸೂಚನೆಯ ಮೇರೆಗೆ ಹಾಸ್ಟೆಲ್‌ನಲ್ಲಿದ್ದ ಉಳಿದ ಹುಡುಗಿಯರ ವಿಡಿಯೋ ಹಾಗೂ ಫೋಟೋಗಳನ್ನು ಆತನಿಗೆ ಕಳಿಹಿಸುತ್ತಿದ್ದಳು.
ಮಧುರೈ (ಸೆ.27): ಚಂಡೀಗಢದ ವಿವಿಯಲ್ಲಿ ಹಾಸ್ಟೆಲ್ ಹುಡುಗಿಯರ ಅಶ್ಲೀಲ ಎಂಎಂಎಸ್ ಲೀಕ್ ಆದ ಬೆನ್ನಲ್ಲಿಯೇ, ತಮಿಳುನಾಡಿನ ಮಧುರೈನಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ವೈದ್ಯ ಹಾಗೂ ಆತನ ಗರ್ಲ್‌ಫ್ರೆಂಡ್‌ಅನ್ನು ಬಂಧಿಸಲಾಗಿದೆ. ವೈದ್ಯನ ಗೆಳತಿ ಹಾಸ್ಟೆಲ್‌ನಲ್ಲಿ ವಾಸವಿದ್ದಳು. ಈ ವೇಳೆ, ಹಾಸ್ಟೆಲ್‌ನ ಇತರ ಹುಡುಗಿಯರ ಬೆತ್ತಲು ವಿಡಿಯೋ ಹಾಗೂ ಫೋಟೋಗಳನ್ನು ಶೂಟ್ ಮಾಡಿದ್ದಲ್ಲದೆ, ಇವುಗಳನ್ನು ಬಾಯ್‌ಫ್ರೆಂಡ್ ಆಗಿದ್ದ ವೈದ್ಯನಿಗೆ ವಾಟ್ಸಾಪ್ ಮೂಲಕ ಕಳಿಸುತ್ತಿದ್ದಳು. ಈ ಸಂಬಂಧ, ಕಾಮುದಿಯ ರಾಮನಾಥಪುರಂನ ನಿವಾಸಿಯಾಗಿರುವ ಆಶಿಖ್ ಹೆಸರಿನ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಗೆಳತಿ ಜನನಿ ಎನ್ನುವವಳನ್ನೂ ಐಪಿಸಿ ಮತ್ತು ಐಟಿ ಕಾಯ್ದೆಯ ಅನ್ವಯ ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಆಕೆ ತನ್ನ ಲವರ್ ಆಗಿದ್ದ ವೈದ್ಯನ ಸೂಚನೆಯ ಅನ್ವಯ ಈ ಕೆಲಸವನ್ನು ಮಾಡುತ್ತಿದ್ದಳು. ತನ್ನೊಂದಿಗೆ ಉಳಿದುಕೊಳ್ಳುತ್ತಿದ್ದ ವಿದ್ಯಾರ್ಥಿನಿಯರ ಚಿತ್ರಗಳು ಹಾಗೂ ವಿಡಿಯೋಗಳನ್ನು ಆಕೆ ತನ್ನ ಮೊಬೈಲ್‌ನಲ್ಲಿ ತೆಗೆದುಕೊಳ್ಳುತ್ತಿದ್ದಳು. ಇದರಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿರುವ ವಿಡಿಯೋಗಳು, ಸ್ನಾನದ ವಿಡಿಯೋಗಳು ಸೇರಿವೆ. ಕೊನೆಗೆ ಈ ವಿಡಿಯೋ ಹಾಗೂ ಫೋಟೋಗಳನ್ನು ತನ್ನ ಗೆಳೆಯನಿಗೆ ವಾಟ್ಸಾಪ್ ಮೂಲಕ ಕಳಿಸುತ್ತಿದ್ದಳು.
ಮಹಿಳೆ ತನ್ನ ಸ್ವಂತ ವೀಡಿಯೊಗಳನ್ನು ತನ್ನ ಪ್ರಿಯಕರನಿಗೆ ಮೊದಲು ಕಳುಹಿಸುತ್ತಿದ್ದಳು, ಆದರೆ ನಂತರ ತನ್ನ ಪ್ರಿಯಕರನ ಆಜ್ಞೆಯ ಮೇರೆಗೆ ಅವಳು ಇತರ ಹುಡುಗಿಯರ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದಳು ಎಂದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇದೇ ರೀತಿ ಒಮ್ಮೆ ಹಾಸ್ಟೆಲ್‌ನಲ್ಲಿ (Hostel Madurai) ವಿಡಿಯೋ ಮಾಡುತ್ತಿದರುವಾಗ ಇನ್ನೊಬ್ಬ ಹುಡುಗಿಗೆ ಅನುಮಾನ ಬಂದಿದೆ. ಸಾಕಷ್ಟು ಗಲಾಟೆ ನಡೆದ ಬಳಿಕ, ಆಕೆಯ ಮೊಬೈಲ್‌ಅನ್ನು ಕಸಿದುಕೊಂಡು, ವಿದ್ಯಾರ್ಥಿನಿಯರೇ ಪರಿಶೀಲನೆ ಮಾಡಿದಾಗ, ಹಾಸ್ಟೆಲ್‌ನ ಸಾಕಷ್ಟು ಹುಡುಗಿಯರ ನಗ್ನ ವಿಡಿಯೋ ಹಾಗೂ ಚಿತ್ರಗಳು ಪತ್ತೆಯಾಗಿವೆ. ಬಳಿಕ ಈ ಹುಡುಗಿಯರು ಹಾಸ್ಟೆಲ್‌ನ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ, ಮಧುರೈ ಅಣ್ಣಾ ನಗರ ಪೊಲೀಸ್ ಠಾಣೆಯಲ್ಲಿ (Anna Nagar Police Station) ವಾರ್ಡನ್ ಇತರ ವಿದ್ಯಾರ್ಥಿನಿಯರು ದೂರು ದಾಖಲಿಸಿದ್ದಾರೆ. ಆರೋಪಿ ಮಹಿಳೆ ಜನನಿ ಮಾರ್ಚ್‌ನಿಂದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಬ್ಬರ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಾ.ಆಶಿಕ್ ಈ ವಿಡಿಯೋಗಳನ್ನು ಬೇರೆಯವರಿಗೆ ಕಳುಹಿಸಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
Love Jihad: ಬುರ್ಖಾ ಧರಿಸಲು ನಿರಾಕರಿಸಿದ ರೂಪಾಲಿ, ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ!
ಸೆಪ್ಟೆಂಬರ್ 22 ರಂದು ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಘಟನೆಯ ಬಗ್ಗೆ ವಿಚಾರಣೆ ನಡೆಸಿದರು. ಆಕೆಯಿಂದ ಮೊಬೈಲ್‌ಅನ್ನು (doctor and girlfriend arrested) ವಶ ಪಡಿಸಿಕೊಂಡ ಪೊಲೀಸರು, ಇದರಲ್ಲಿ ವೈದ್ಯನೊಂದಿಗೆ ನಡೆದ ಮಾತುಕತೆಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ. ಬಳಿಕ ಪೊಲೀಸರು ಡೇಟಾ ರಿಕವರಿ ಮಾಡಿಕೊಳ್ಳುವ ಸಲುವಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೆಪ್ಟೆಂಬರ್ 22 ರಂದೇ ಹುಡುಗಿಯನ್ನು ಬಂಧಿಸಲಾಗಿದ್ದರೆ, ಮರುದಿನ ವೈದ್ಯನ ಬಂಧನವಾಗಿದೆ.
MURUGASHREEಗೆ ಮತ್ತೆ ಜೈಲೇ ಗತಿ: ನ್ಯಾಯಾಂಗ ಬಂಧನ ಅವಧಿ 14 ದಿನಗಳ ಕಾಲ ವಿಸ್ತರಣೆ
'ಹುಡುಗಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ; ವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾವು ಇನ್ನೂ (chandigarh hostel video) ವಿಚಾರಣೆ ನಡೆಸುತ್ತಿದ್ದೇವೆ, ಆರೋಪಿಗಳು ಚಿತ್ರಗಳು ಮತ್ತು ವೀಡಿಯೊಗಳನ್ನು ಇತರರಿಗೆ ಕಳುಹಿಸಿದ್ದಾರೆಯೇ ಅಥವಾ ಅವುಗಳನ್ನು ಸಾಮಾಜಿಕ ಮಾಧ್ಯಮ ಅಥವಾ ಅಶ್ಲೀಲ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಇಬ್ಬರ ವಿರುದ್ಧವೂ ಐಪಿಸಿ ಮತ್ತು ಐಟಿ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಅಧಿಕಾರಿ ತಿಳಿಸಿದ್ದಾರೆ.