Illegal Relationship: ಬಲರಾಮನಿಗಾಗಿ ಕಟ್ಟಿಕೊಂಡ ಗಂಡನ ಮರ್ಮಾಂಗ ಹಿಸುಕಿ ಕೊಂದ ಪತ್ನಿ!

Published : Nov 12, 2025, 04:55 PM IST
Wife kills husband in Nanjangud

ಸಾರಾಂಶ

Wife kills husband in Nanjangud: ನಂಜನಗೂಡು ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಪತಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ.. ಕೊಲೆಯನ್ನು ಆತ್ಮ೧ಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತ್ನಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಮೈಸೂರು (ನ.12): ಪತ್ನಿಯ ಅಕ್ರಮ ಸಂಬಂಧ ವಿರೋಧಿಸಿದ ಪತಿಯನ್ನೇ ಪತ್ನಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪ್ರಿಯಕರನ ಹಿಂಸೆಗೆ ಎರಡು‌ ಮಕ್ಕಳ ತಾಯಿ ಗಂಡನನ್ನು ಕೊಂದು ಕೊಲೆ‌ ಎಂದು ನಂಬಿಸಲು ಹೊಗಿ ಸಿಕ್ಕಿ ಬಿದ್ದಿದ್ದಾಳೆ. ಗ್ರಾಮಸ್ಥರೇ ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಎರಡು ಮಕ್ಕಳೀಗ ಅನಾಥರಾಗಿದ್ದಾರೆ.

ಹೌದು, ಆತ ಊರಿಗೆ ನ್ಯಾಯ ಹೇಳುವ ಚಿಕ್ಕ ಯಜಮಾನ. ಆದರೆ ತನ್ನ ಪತ್ನಿಯನ್ನೇ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಹೆಣವಾಗಿದ್ದಾನೆ. ಪತ್ನಿಯ ಅಕ್ರಮ ಸಂಬಂಧ ಪ್ರಶ್ನಿಸಿ ಕೊಲೆಯಾಗಿದ್ದಾನೆ. ಕೂಲಿ ಮಾಡಿಬಂದು ರಾತ್ರಿ ಊಟ ಮಾಡಿದವನು ಹೆಂಡತಿಯ ಒಂದೇ ಏಟಿಕೆ ಪ್ರಾಣ ಬಿಟ್ಟಿದ್ದಾನೆ. ಗಂಡನನ್ನ‌ ಹೊಡೆದು ಕೊಂದವಳು ಆತ್ಮ೧ಹತ್ಯೆ ಅಂತ ಕಥೆ ಕಟ್ಟಲು ಹೋಗಿ ಸಿಕ್ಕಿಬಿದ್ದಿದ್ದಾಳೆ.

ಪತಿಯ ಮರ್ಮಾಂಗ ಹಿಸುಕಿ ಕೊಲೆ:

ಹೆಂಡತಿಯೇ ಗಂಡನನ್ನ ಕೊಲೆ ಮಾಡಿರೋ ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಇಂದಿರಾ ಗ್ರಾಮದಲ್ಲಿ. ದೊಣ್ಣಡಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಪತ್ನಿ‌ ಹೇಳುತ್ತಿದ್ದು, ಪತಿಯ ಮರ್ಮಾಂಗ ಹಿಸುಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಇಂದಿರಾ ಗ್ರಾಮದ ಚಿಕ್ಕ ಯಜಮಾನ ವೀರಣ್ಣ(41) ಮೃತ ದುರ್ದೈವಿಯಾಗಿದ್ದು, ಆರೋಪಿ ಶಿವಮ್ಮ(35) ಇದೀಗ ಹುಲ್ಲಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ. ಪರ‌ಪುರುಶನ‌ ಕಾಟಕ್ಕೆ ಗಂಡನನ್ನ ಕೊಲೆ ಮಾಡಿರುವುದಾಗಿ ಪತ್ನಿ ಹೇಳುತ್ತಿದ್ದಾಳೆ.

ಬಲರಾಮನ ಹಿಂದೆ ಬಿದ್ದಿದ್ದ ಶಿವಮ್ಮ:

ಇಬ್ಬರಿಗೂ 13 ವರ್ಷಗಳ ಹಿಂದೆ ಇಬ್ಬರ ವಿವಾಹ ನೆರವೇರಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಈಕೆ ಕಳೆದ ನಾಲ್ಕು ವರ್ಷದಿಂದ ಹೆಚ್.ಡಿ.ಕೋಟೆಯ ಬಲರಾಮ ಎಂಬಾತನ ಜೊತೆ ಶಿವಮ್ಮ ಪರಿಚಯ ಆಗಿತ್ತು. ಪರಿಚಯ ಅಕ್ರಮ ಸಂಬಂಧಕ್ಕೂ ದಾರಿ ಆಗಿತ್ತು. ಈ ವಿಚಾರ ಪತಿ ವೀರಣ್ಣಗೆ ತಿಳಿದು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಈ ವಿಚಾರದಲ್ಲಿ ನ್ಯಾಯ ಪಂಚಾಯ್ತಿ ಸಹ ನಡೆದಿತ್ತು. ಹಲವು ಬಾರಿ ಆತನ ಸಂಪರ್ಕ ಬಿಡುವಂತೆ ಬುದ್ದಿ ಹೇಳಲಾಗಿತ್ತು. ಹೀಗಿದ್ದೂ ಶಿವಮ್ಮ ಹಾಗೂ ಬಲರಾಮ್ ನಡುವೆ ಸಂಬಂಧ ಮುಂದುವರೆದಿತ್ತು. ನಿನ್ನೆ ರಾತ್ರಿ ಬಲರಾಮ ಫೋನ್ ಮಾಡಿದ್ದಾನೆ. ಈ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ಆಗಿದೆ. ರಾತ್ರಿ ಊಟ ಮಾಡಿ ಪತಿ ಮಲಗಿದ್ದಾರೆ. ಕೆಲವೇ ಸಮಯದಲ್ಲಿ ಶಿವಮ್ಮ ಬಾಯಿ ಬಡಿದುಕೊಂಡು ಮನೆಯಿಂದ ಹೊರಬಂದಿದ್ದಾಳೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿಸಿದ್ದಾಳೆ. ಕುತ್ತಿಗೆಯಲ್ಲಿ ಸೀರೆ ಕಂಡು ಬಂದಿದೆ. ಮಾಹಿತಿ ಅರಿತ ಹುಲ್ಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ಮಾಡಿದಾಗ ಬಲರಾಮನ ಜೊತೆ ಸಂಬಂಧ ಬಿಚ್ಚಿಟ್ಟಿದ್ದಾಳೆ.

ಹುಲ್ಲಹಳ್ಳಿ ಪೊಲೀಸರು ಶಿವಮ್ಮಳನ್ನ ವಿಚಾರಣೆಗೆ ಒಳಪಡಿಸಿ ಸಂಚು ಬಯಲಾಗೆಳೆದಿದ್ದಾರೆ. ಆದರೆ ಇದಕ್ಕೆ ಕಾರಣವಾದ ಪ್ರಿಯಕರನ‌ ಬಂಧನ ಮಾತ್ರ ಆಗಿಲ್ಲ. ಇತ್ತ ತಾಯಿಕ ದುಡುಕುತನಕ್ಕೆ ತಂದೆ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದು ವಿಪರ್ಯಾಸ.

  • ಕ್ಯಾಮೆರಾಮನ್ ನವೀನ್ ಜೊತೆಗೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ