ಶಿಕ್ಷಕಿಗೆ ವಂಚಿಸಿ ಅತ್ಯಾಚಾರ; ದಾವಣಗೆರೆ ಪಾದ್ರಿ ರಾಜಶೇಖರ ಬಂಧನ

By Ravi Janekal  |  First Published Apr 4, 2024, 10:51 PM IST

ಶಿಕ್ಷಕಿಯೊಬ್ಬರನ್ನು ವಂಚಿಸಿ ಅತ್ಯಾಚಾರವೆಸಗಿ ಮೋಸ ಮಾಡಿರುವ ಆರೋಪ ಸಂಬಂಧ ದಾವಣಗೆರೆಯ ಜಯನಗರದ ಡಿಎಚ್ಎಂ ಚರ್ಚ್ ಪಾದ್ರಿಯನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.


ದಾವಣಗೆರೆ (ಏ.4): ಶಿಕ್ಷಕಿಯೊಬ್ಬರನ್ನು ವಂಚಿಸಿ ಅತ್ಯಾಚಾರವೆಸಗಿ ಮೋಸ ಮಾಡಿರುವ ಆರೋಪ ಸಂಬಂಧ ದಾವಣಗೆರೆಯ ಜಯನಗರದ ಡಿಎಚ್ಎಂ ಚರ್ಚ್ ಪಾದ್ರಿಯನ್ನ ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಪಾದ್ರಿ ರಾಜಶೇಖರ್ ಬಂಧಿತ ಆರೋಪಿ. ಅತ್ಯಾಚಾರವೆಸಗಿ ಮೋಸ ಮಾಡಿದ್ದ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಸಂತ್ರಸ್ತ ಮಹಿಳೆ. ಆರೋಪಿ ವಿರುದ್ಧ ಸೆಕ್ಷನ್ 376,(2) (2), 354(2), 323,504,506,417,420  ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು.

Tap to resize

Latest Videos

undefined

Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ 

ಕೃತ್ಯವೆಸಗಿ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪಾದ್ರಿ ರಾಜಶೇಖರ. ಮೊಬೈಲ್‌ ಲೊಕೇಷನ್ ಆಧರಿಸಿ ಹೈದರಾಬಾದ್‌ನಲ್ಲಿ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗಬಂಧನಕ್ಕೊಪ್ಪಿಸಿದ ಪೊಲೀಸರು. 

 

58ರ ಇಳಿ ವಯಸ್ಸಿನ ಪಾದ್ರಿ ಪಿ ರಾಜಶೇಖರ್ ಹೆಣ್ಣುಬಾಕನಾಗಿದ್ದು, ಪಾದ್ರಿಯ ಕೃತ್ಯ ಇದೇ ಮೊದಲನೇ ಅಲ್ಲ, ಈ ಹಿಂದೆ ಚರ್ಚೆಗೆ ಬರುತ್ತಿದ್ದ ಹಲವು ಸ್ತ್ರೀಯರ ಮುಂದೆ ಅಸಭ್ಯವಾಗಿ ವರ್ತಿಸಿದ್ದ. ಪಾದ್ರಿಯ ವಿಕೃತ ಕಾಮುಕತನಕ್ಕೆ ಆತನ ಪುತ್ರಿಯೇ ಸುದ್ದಿಗೋಷ್ಠಿ ನಡೆಸಿ ಬಯಲು ಮಾಡಿದ್ದಳು.

ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ಯಾಂಗ್ ರೇಪ್ ಸಂತ್ರಸ್ತೆಗೆ ಬಟ್ಟೆ ಬಿಚ್ಚಲು ಹೇಳಿದ ಜಡ್ಜ್!

ಪಾದ್ರಿ ರಾಜಶೇಖರ್ ಹಿಂದಿನಿಂದ ಇಂಥ ಕೃತ್ಯಗಳನ್ನೇ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾರೂ ದೂರು ದಾಖಲು ಮಾಡಿರಲಿಲ್ಲ. ಇದೀಗ ದೂರು ದಾಖಲಾದ ಬಳಿಕ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಲಾಗಿದೆ.

click me!