ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ; ಗುಮ್ಮಟನಗರಿಯ ಓರ್ವ ಶಿಕ್ಷಕ ಬಂಧನ!

Published : Sep 21, 2022, 01:45 PM IST
ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ; ಗುಮ್ಮಟನಗರಿಯ ಓರ್ವ ಶಿಕ್ಷಕ ಬಂಧನ!

ಸಾರಾಂಶ

ಜಿಲ್ಲೆಗಳಿಗು ಬೆಸೆದುಕೊಂಡ ಶಿಕ್ಷಕರ ನೇಮಕಾತಿ ಅಕ್ರಮದ ನಂಟು..! ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ ಗುಮ್ಮಟನಗರಿಯ ಓರ್ವ ಶಿಕ್ಷಕ ಬಂಧನ.!  ಭೈರವಾಡಗಿ ಶಿಕ್ಷಕನನ್ನ ವಶಕ್ಕೆ ಪಡೆದು ಸಿಓಡಿಯಿಂದ ತೀವ್ರ ವಿಚಾರಣೆ..!

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ. 21) : ಅಕ್ರಮ ಶಿಕ್ಷಕರ ನೇಮಕಾತಿ ಹಗರಣದ ನಂಟು ಈಗ ಜಿಲ್ಲೆಗೂ ಬೆಸೆದಿದೆ.  ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಜಿಲ್ಲೆಯ ಓರ್ವ ಸರ್ಕಾರಿ ಪ್ರೌಢಶಾಲಾ ಶಿಕ್ಷಕರನ್ನು  ಬೆಂಗಳೂರಿನ ಸಿಓಡಿ ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಕರ ನೇಮಕಾತಿ ಅಕ್ರಮ ಆರೋಪ; ಶಿಕ್ಷಣ ಸಚಿವರ ತವರು ಜಿಲ್ಲೆಯ 10 ಶಿಕ್ಷಕರು ಸಿಐಡಿ ವಶಕ್ಕೆ

2012- 14ರಲ್ಲಿ ನಡೆದಿದ್ದ ನೇಮಕಾತಿ ಅಕ್ರಮ:

2012-14ರ ನಡುವೆ ಶಿಕ್ಷಕರ ನೇಮಕಾತಿ(Recruitment of teachers) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಐಡಿ(CID)ಅಧಿಕಾರಿಗಳು ಕಳೆದ ತಿಂಗಳು ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಳಂಕಿತ ಶಿಕ್ಷಕರು ಕೆಲಸ ಮಾಡುತ್ತಿದ್ದ ಶಾಲೆಗಳಿಗೆ ಭೇಟಿ ನೀಡಿ ಅವರಿಂದ ಮಾಹಿತಿ ಪಡೆದಿದ್ದರು. ಆ ನಿಟ್ಟಿನಲ್ಲಿ ಜಿಲ್ಲೆಯ ಬಸವನ ಬಾಗೇವಾಡಿ(Basavan bagevadi) ತಾಲೂಕಿನ ಭೈರವಾಡಗಿ(Bhyrasavadagi)ಯಲ್ಲಿ ಶಿಕ್ಷಕನಾಗಿರುವ ಅಶೋಕ ಚವ್ಹಾಣ್(Ashok Chauhan) ಎಂಬುವವರನ್ನು  ಪಡೆದಿದ್ದಾರೆ.

ಜಗಳೂರಿನಲ್ಲಿ ಶಿಕ್ಷಕನಾಗಿದ್ದ ಚೌಹಾಣ್:

ಈ ಹಿಂದೆ ಚಿತ್ರದುರ್ಗ(Chitradurga) ಜಿಲ್ಲೆಯ ಜಗಳೂರಿ(Jagaluru)ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ಯಿದ್ದ ಅವರು, ವಿಜಯಪುರಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಇವರನ್ನು ಬಂದಿಸುವಂತೆ ಸೂಚನೆ ಪಡೆದ ಕಲಬುರಗಿ(Kalaburagi) ಸಿಓಡಿ ಅಧಿಕಾರಿಗಳು ಅಶೋಕ್ ಚವ್ಹಾಣ್ ಅವರನ್ನು ವಶಕ್ಕೆ ಪಡೆದು ಬೆಂಗಳೂರು ಸಿಓಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.

ನ್ಯಾಯಾಧೀಶರ ಎದುರು ಹಾಜರು:

ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್(Magistrate)ಮುಂದೆ ಹಾಜರುಪಡಿಸಲಾಯಿತು. ಬಳಿಕ ಸಿಓಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. ಅಕ್ರಮ ನೇಮಕಾತಿಯಲ್ಲಿ ಚೌಹಾಣ್ ಪಾತ್ರ ಏನು ಎನ್ನುವ ಬಗ್ಗೆ ತನಿಖೆ ಚುರುಕುಗೊಂಡಿದೆ. 

ಶಿಕ್ಷಕರ ನೇಮಕಾತಿ ಅಕ್ರಮ: ಬಿಜೆಪಿ ಮಾಡಿದ ಆರೋಪ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದ ಮಾಜಿ ಶಿಕ್ಷಣ ಸಚಿವ

 ಇನ್ನಷ್ಟು ಕುಳಗಳು ಬೆಳಕಿಗೆ:

ಶಿಕ್ಷಕ ಅಶೋಕ ಚೌಹಾಣ್ ಬಂಧನದ ಬಳಿಕ ಮತ್ತಷ್ಟು ಕುಳಗಳು ಬಲೆಗೆ ಬೀಳುವ ಸಾಧ್ಯತೆಗಳಿವೆ. ಚೌಹಾಣ್ ಬಂಧನದ ಬಳಿಕ ಹಲವರಲ್ಲಿ ನಡುಕ ಶುರುವಾಗಿದೆ. ಸಿಓಡಿ ವಿಚಾರಣೆಯಲ್ಲಿ ಶಿಕ್ಷಕ ಅಶೋಕ್ ಚೌಹಾಣ್ ಏನೆಲ್ಲ ಮಾಹಿತಿ ಬಾಯ್ಬಿಡಲಿದ್ದಾನೆ ಎನ್ನುವ ಬಗ್ಗೆ ಕುತೂಹಲ ಕಾಡುತ್ತಿದೆ. ಆತ ನೀಡುವ ಮಾಹಿತಿ ಮತ್ಯಾರ ಬುಡಕ್ಕೆ ಬಿಸಿನೀರು ತರಲಿದೆಯೋ ಅನ್ನೋದನ್ನ ಕಾದುನೋಡಬೇಕಿದೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ