ಅಕೌಂಟೆನ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಕುಸಿದು ಬಿದ್ದು ಸಾವು

Published : Mar 29, 2022, 07:19 PM ISTUpdated : Mar 29, 2022, 07:21 PM IST
ಅಕೌಂಟೆನ್ಸಿ ಪರೀಕ್ಷೆ ಬರೆಯಲು  ಬಂದ ವಿದ್ಯಾರ್ಥಿ ಕುಸಿದು ಬಿದ್ದು ಸಾವು

ಸಾರಾಂಶ

*  ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿ * ಅಕೌಂಟಿಂಗ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ * ಮಧ್ಯಾಹ್ನದ ಪರೀಕ್ಷೆ ಬರೆಯಲು  ಬಂದಿದ್ದ  * ಒಂದೆ ಕಿಡ್ನಿ ಇದ್ದ ವಿದ್ಯಾರ್ಥಿ

ಅಹಮದಾಬಾದ್(ಮಾ.  29)  ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಪ್ರಕರಣ ಮೈಸೂರು (Mysuru) ಜಿಲ್ಲೆಯ ಟಿ.ನರಸೀಪುರ (T narasipura) ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಿಂದ ವರದಿಯಾಗಿತ್ತು. ಈಗ ಅಂತಹುದೆ  ಪ್ರಕರಣ ದೂರದ ಅಹಮದಾಮಾಬ್ (Ahmedabad) ನಿಂದ ವರದಿಯಾಗಿದೆ.

Mandya: ಕೊಂಡೋತ್ಸವ ವೇಳೆ ಮನೆ ಛಾವಣಿ ಕುಸಿತ: ಓರ್ವ ಮಹಿಳೆ ಸಾವು: ತಪ್ಪಿದ ಭಾರೀ ದುರಂತ

ಕ್ಲಾಸ್ 12ರ ಪರೀಕ್ಷೆಗೆ ಹಾಜರಾಗಿದ್ದ ಗೋಮ್ಟಿಪುರ ನಿವಾಸಿ ಮೊಹಮದ್ ಅಮಾನ್ ಆರೀಫ್ ಶೇಕ್ (18) ಅಲ್ಲಿಯೇ ಕುಸಿದು (Death)ಬಿದ್ದಿದ್ದಾನೆ.  ತಕ್ಷಣವೇ ಆತನನ್ನು ಶಾರಾದಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಗುಜರಾತ್ ಸೆಕೆಂಡರಿ ಎಜುಕೇಶನ್ ಬೋರ್ಡ್ ಹೇಳುವಂತೆ ಇದು ತುಂಬಾ ಅಪರೂಫದ ಘಟನೆ. ಹಿಂದೆ ಇಂತಹ ಪ್ರಕರಣ ವರದಿಯಾಗಿರಲಿಲ್ಲ ಎಂದಿದೆ.  ಗುಜರಾತ್ ನಲ್ಲಿ ಹದಿನೈದು  ಲಕ್ಷ ಜನ ಪರೀಕ್ಷೆ ಬರೆಯುತ್ತಿದ್ದಾರೆ.

ಸಾವಿಗೀಡಾದ ವಿದ್ಯಾರ್ಥಿ ಅಕೌಂಟಿಂಗ್ ಪರೀಕ್ಷೆ ಬರೆಯಲು ಆಗಮಿಸಿದ್ದ ಮಧ್ಯಾಹ್ನ  3-6  ಪರೀಕ್ಷೆ ಇತ್ತು.   ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಮಧ್ಯಾಹ್ನ 4.30  ಸಮಯಕ್ಕೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾನೆ.  ಕೊನೆಗೆ ಡೆಸ್ಕ್ ಮೇಲೆ ತಲೆ ಇಟ್ಟು ಅಲ್ಲಿಯೇ ಕುಸಿದಿದ್ದಾನೆ.  ತಕ್ಷಣ ಎಚ್ಚೆತ್ತ ಮೇಲ್ವಿಚಾರಕ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಮಧ್ಯಾಹ್ನ 4.45  ರ ವೇಳೆಗೆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ನಾಡಿ ಬಡಿತ ತುಂಬಾ ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.  ಎಲ್ಲ ಬಗೆಯ ಚಿಕಿತ್ಸೆ  ನೀಡಿದರೂ ಆತ ಚೇತರಿಸಿಕೊಳ್ಳಲೇ  ಇಲ್ಲ ಎಂದು ವೈದ್ಯರು  ಮಾಹಿತಿ ನೀಡಿದ್ದಾರೆ.  ಮರಣೋತ್ತರ ಪರೀಕ್ಷೆ ನಂತರ ಸ್ಪಷ್ಟ ಕಾರಣ ತಿಳಿದು ಬರಬೇಕಿದೆ. 

 ಎಎಂಸಿ ಕೌನ್ಸಿಲರ್ ಇಕ್ಬಾಲ್ ಅಮಾನ್ ಹೇಳುವಂತೆ, ಸಾವಿಗೀಡಾದ ವಿದ್ಯಾರ್ಥಿ  ಒಂದೇ ಕಿಡ್ನಿ ಹೊಂದಿದ್ದ.  ಬಾಲಕನ ತಂದೆ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ.  ನಿರಂತರವಾಗಿ  ವಿದ್ಯಾರ್ಥಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಈತನ ಸಹೋದರಿ  ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು.  ವಿದ್ಯಾರ್ಥಿಗೆ ಹತ್ತು ವರ್ಷದ ಸಹೋದರ ಇದ್ದಾನೆ. 

ಕೊನೆ ಉಸಿರು ಎಳೆದಿದ್ದ ವಿದ್ಯಾರ್ಥಿನಿ: ಮೈಸೂರಿನ ವಿದ್ಯಾರ್ಥಿನಿ ಅನುಶ್ರೀ   ತಾನು ಪರೀಕ್ಷೆ ಬರೆಯಬೇಕಾಗಿದ್ದ ಕೇಂದ್ರಕ್ಕೆ ಹಾಜರಾಗಬೇಕಾದ ವಿಷಯದಲ್ಲು ಗೊಂದಲ ಮಾಡಿಕೊಂಡು ಪಕ್ಕದಲ್ಲೇ ಇದ್ದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಮುಂದಾಗಿದ್ದಳು .  ಅಲ್ಲಿಯೇ ಸುಮಾರು ಹದಿನೈದು ನಿಮಿಷಗಳ ಕಾಲ ಪರೀಕ್ಷೆ ಬರೆದಿದ್ದಳು ಎನ್ನಲಾಗಿದೆ. ಆದರೆ ಆಕೆ ಪರೀಕ್ಷೆ ಬರೆಯುತ್ತಿದ್ದ ಹಾಲ್ ಟಿಕೆಟ್ ನಂಬರ್ ವಿದ್ಯಾರ್ಥಿಯೊಬ್ಬನದ್ದಾಗಿದ್ದು, ಇದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರು ಆಕೆಗೆ ಮನವರಿಕೆ ಮಾಡಿ ಪಕ್ಕದ ಸೆಂಟರ್‌ಗೆ ಕರೆದೊಯ್ಯುತ್ತಿದ್ದ ಸಂಧರ್ಭ ಶಾಲೆಯ ಮೆಟ್ಟಿಲನ್ನು ಹತ್ತುವ ವೇಳೆ ಕುಸಿದು ಬಿದ್ದಿದ್ದಳು.

ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ಕೂಡಲೇ ಆಕೆಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಆಕೆ ಅಷ್ಟರಲ್ಲಾಗಲೇ ಮೃತ ಪಟ್ಟಿದ್ದಳು.  ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಡಿಡಿಪಿಐ ರಾಮಚಂದ್ರ ರಾಜೇ ಅರಸ್,ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮತ್ತಿತರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು