ಸೊರಬ: 16 ವರ್ಷಗಳಿಂದ ಪಾಳುಬಿದ್ದಿರೋ ಶೌಚಾಲಯ ಅಕ್ರಮ ಚಟುವಟಿಕೆಗಳ ತಾಣ!

By Kannadaprabha News  |  First Published May 30, 2023, 8:18 PM IST

ಪಟ್ಟಣದ ಕಾನಕೇರಿ ಬಡಾವಣೆಯ ಸಾರ್ವಜನಿಕ ಶೌಚಾಲಯ 16 ವರ್ಷಗಳಿಂದ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪ​ಟ್ಟಿದೆ. ಅಲ್ಲದೇ ಶೌಚಾಲಯ ನಿರ್ವ​ಹಣೆ ಇಲ್ಲದೇ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.


ಸೊರಬ (ಮೇ.30) ಪಟ್ಟಣದ ಕಾನಕೇರಿ ಬಡಾವಣೆಯ ಸಾರ್ವಜನಿಕ ಶೌಚಾಲಯ 16 ವರ್ಷಗಳಿಂದ ಪಾಳುಬಿದ್ದಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪ​ಟ್ಟಿದೆ. ಅಲ್ಲದೇ ಶೌಚಾಲಯ ನಿರ್ವ​ಹಣೆ ಇಲ್ಲದೇ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.

2007ರಲ್ಲಿ ಕುಮಾರ್‌ ಬಂಗಾರಪ್ಪ(Kumara bangarappa) ಪೌರಾಡಳಿ ಸಚಿವರಾಗಿದ್ದ ಸಂದರ್ಭ ಪಟ್ಟಣ ಪಂಚಾಯಿತಿ ವತಿಯಿಂದ .5 ಲಕ್ಷ ವೆಚ್ಚದಲ್ಲಿ ನಿರ್ಮಲ ನಗರ ಯೋಜನೆಯಡಿ ಈ ಹೈಟೆಕ್‌ ಸುಲಭ ಶೌಚಾಲಯ ನಿರ್ಮಾಣವಾಗಿದೆ. ಸಾರ್ವಜನಿಕ ಕೋರಿಕೆ ಮೇರೆಗೆ ಮತ್ತು ಅಂದಿನ ದಿನಗಳಲ್ಲಿದ್ದ ಸರ್ಕಾರಿ ಗ್ರಂಥಾಲಯಕ್ಕೆ ಅನುಕೂಲವಾಗಲಿ ಎಂದೇ ಈ ಜಾಗದಲ್ಲಿ ಟಾಯ್ಲೆಟ್‌ ನಿರ್ಮಿಸಿ ಉದ್ಘಾಟಿಸಲಾಗಿತ್ತು. ಉದ್ಘಾಟನೆಯಾದ ಕೆಲವು ದಿನಗಳು ಸಾರ್ವಜನಿಕರು ಇದನ್ನು ಉಪಯೋಗಿಸಿದರು. ಆನಂತರದ ದಿನಗಳಲ್ಲಿ ಶೌಚಾಲಯ ಸಾರ್ವಜನಿಕ ಸೇವೆಗೆ ಲಭ್ಯವಾಗದ ಕಾರಣ ಬೀಗ ಜಡಿಯಲಾಗಿದೆ. ಆದರೆ ಕೆಲವರು ಹೈಟೆಕ್‌ ಶೌಚಾಲಯ ಕಟ್ಟಡದ ಬೀಗವನ್ನೇ ಮುರಿದು ಅಕ್ರಮ ಚಟು​ವ​ಟಿ​ಕೆ​ಗ​ಳಿ​ಗೆ ಬಳಸಿಕೊಂಡಿದ್ದಾರೆ ಎಂಬುದು ಸ್ಥಳೀ​ಯರ ದೂರು.

Latest Videos

undefined

ಅಕ್ರಮ ಚಟುವಟಿಕೆಗಳ ತಾಣವಾದ ಹೈಟೆಕ್‌ ಮೀನು ಮಾರುಕಟ್ಟೆ

ಈ ಶೌಚಾಲಯ ಕಟ್ಟಡದ ಒಳಹೊಕ್ಕರೆ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಕಸ-ಕಡ್ಡಿ, ಮಳೆನೀರಿನ ಕೊಳ​ಚೆ​ಯಲ್ಲಿ ಹುಳುಗಳು ಆಡುತ್ತಿವೆ. ದುರ್ವಾಸನೆಯಿಂದಾಗಿ ಸಾರ್ವಜನಿರು ಪಕ್ಕದಲ್ಲೂ ನಿಲ್ಲಲಾಗದೇ ಮೂಗು ವåುಚ್ಚಿಕೊಳ್ಳುವಂತಾಗಿದೆ. ಖಾಸಗಿ ಬಸ್‌ ನಿಲ್ದಾಣ ಹೊರತುಪಡಿಸಿ ಪಟ್ಟಣದಲ್ಲಿರುವ ಮೂರು ಸಾರ್ವಜನಿಕ ಶೌಚಾಲಯಗಳಲ್ಲಿ ಇದೂ ಕೂಡ ಒಂದಾಗಿದೆ. ಆದ​ರೆ, ಕತ್ತಲಾಗುತ್ತಿದ್ದಂತೆ ಇಲ್ಲಿ ​ಅಕ್ರಮಗಳು ನಡೆ​ಯು​ತ್ತವೆ. ಅನೈತಿಕ ಚಟುವಟಿಕೆಗಳಿಗೂ ಬಳ​ಕೆ​ಯಾ​ಗು​ತ್ತಿವೆ. ಇಷ್ಟಾ​ದರೂ ಈ ಬಗ್ಗೆ ಯಾವ ಇಲಾ​ಖೆ​ಗಳೂ ಎಚ್ಚೆತ್ತು ಸೂಕ್ತ ಕ್ರಮ ಜರು​ಗಿ​ಸಲು ಮುಂದಾ​ಗಿಲ್ಲ.

ಶೌಚಾಲಯ ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪುರಸಭೆಯದ್ದಾಗಿದೆ. ಪ್ರತಿ ವರ್ಷ ಪಟ್ಟಣದ ನೈರ್ಮಲ್ಯಕ್ಕಾಗಿ ಲಕ್ಷಾಂತರ ರು. ಹಣ ಬಿಡುಗಡೆಯಾಗುತ್ತಿದೆ. ಶೌಚಾಲಯದ ಬಲ ಭಾಗದಲ್ಲಿ ಶ್ರೀ ಸ್ವಾಮಿವಿವೇಕಾನಂದ ಶಾಲೆ ಇದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಶೌಚಾಲಯದ ಆಜುಬಾಜು ಆಟವಾಡುತ್ತಾರೆ. ಇದರಿಂದ ಡೆಂಘೀಜ್ವ​ರ​ದಂಥ ರೋಗಗಳೂ ತಗಲುವ ಭೀತಿ ಇದೆ.

ಈ ಹಿನ್ನೆ​ಲೆ ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಮತ್ತು ನಿರುಪಯುಕ್ತ ಕಟ್ಟಡಕ್ಕೆ ಮುಕ್ತಿ ಕಾಣಿಸಬೇ​ಕಿದೆ. ಈ ಹಾಳು​ ಕ​ಟ್ಟ​ಡ​ವ​ನ್ನು ನೆಲಸಮ ಮಾಡಿ, ಯಾವುದಾದರೂ ಸರ್ಕಾರಿ ಕಚೇರಿಯನ್ನು ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆ​ಸ​ಬೇ​ಕಿ​ದೆ.

 

ಶಹಾಪುರದ ರೈತ ಭವನ ಈಗ ಪಾಳು ಬಂಗಲೆ; ಅನೈತಿಕ ಚಟುವಟಿಕೆ ತಾಣ!

.5 ಲಕ್ಷ ವೆಚ್ಚದ ಹೈಟೆಕ್‌ ಶೌಚಾ​ಲ​ಯ

ಮಂಡಲ ಪಂಚಾ​ಯಿತಿ ಮಾಜಿ ಉಪಾ​ಧ್ಯಕ್ಷ ಇ.ಎ​ಚ್‌.​ಮಂಜು​ನಾಥ ಈ ಕುರಿತು ಪ್ರತಿ​ಕ್ರಿಯೆ ನೀಡಿದ್ದು, ಸೊರಬ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ತಮ್ಮ ಅನುದಾನದಲ್ಲಿ 5 ಲಕ್ಷ ರೂ. ಬಿಡುಗಡೆ ಮಾಡಿ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಿದ್ದರೂ ಸಹ ಅಂದಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಶುಚಿತ್ವವಿಲ್ಲದೇ ಸಾರ್ವಜನಿಕರು ಶೌಚಾಲಯದ ಕಡೆ ಸುಳಿಯದಂತಾಗಿದೆ. ಚರಂಡಿ, ಗಿಡಗಂಟೆಗಳ ಪೊದೆಗಳ ಮರೆ​ಯಲ್ಲಿ ಬಹಿರ್ದೆಸೆಯನ್ನು ಪೂರೈಸಿಕೊಳ್ಳಬೇಕಾಗಿದೆ. 16 ವರ್ಷ ಕಳೆದರೂ ಸಾರ್ವಜನಿಕ ಉಪಯೋಗಕ್ಕೆ ಬಾರದ ಶೌಚಾಲಯವನ್ನು ಇನ್ನಾದರೂ ಶುಚಿತ್ವಗೊಳಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎನ್ನು​ತ್ತಾರೆ.

click me!