ಇಂದು ರಾಮೇಶ್ವರಂ ಕೆಫೆ ಕ್ಯೂನಲ್ಲಿ ನಿಲ್ಲುವಾಗ, ಅಂದು ದಾರಿಯಲ್ಲಿ ನಡದು ಹೋಗುತ್ತಿರುವಾಗ? ಬೆಂಗಳೂರು ದ್ವೇಷಿಸುವ ನಗರವಾಗಿ ಮಾರ್ಪಟ್ಟಿದೆ ಎಂದು ಪುಣೆ ಯುವತಿ ತನಗಾದ ಕರಾಳ ಘಟನೆ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು(ನ.11) ಬೆಂಗಳೂರಿಗೆ ಪ್ರತಿ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಕೆಲಸ ಅರಸುತ್ತಾ, ಬೇರೆ ನಗರಗಳಿಂದ ಬೆಂಗಳೂರು ವರ್ಗಾವಣೆ ಬಯಸಿ, ಶಾಲೆ, ಕಾಲೇಜು, ಉದ್ಯಮ, ಕೈಗಾರಿಕೆ ಹೀಗೆ ಹಲವು ಕಾರಣಗಳಿಂದ ಪ್ರತಿ ನಿತ್ಯ ಬೆಂಗಳೂರಿಗೆ ಜನ ಬರುತ್ತಾರೆ. ಬೆಂಗಳೂರು ಊಹಿಸಲೂ ಸಾಧ್ಯವಾಗದ ರೀತಿ ಬೆಳೆಯುತ್ತಿದೆ. ಹೀಗೆ ಬಂದವರ ಪೈಕಿ ಪುಣೆಯ ಯುವತಿಗೆ ಕೆಟ್ಟ ಘಟನೆಗಳೇ ನಡೆದಿದೆ. ಇದೀಗ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಕ್ಯೂನಲ್ಲಿ ನಿಲ್ಲುವಾಗ ನಡೆದ ಕಿರುಕುಳ ಘಟನೆಯಿಂದ ಯುವತಿಯ ಸಹನೆ ಕಟ್ಟೆ ಒಡೆದಿದೆ. ಬೆಂಗಳೂರಿನಲ್ಲಿ ತನಗಾಗುತ್ತಿರುವ ಅನುಭವವನ್ನು ಹೇಳಿಕೊಂಡು ಐ ಹೇಟ್ ಬೆಂಗಳೂರು ಎಂದಿದ್ದಾಳೆ.
ರೆಡ್ಡಿಟ್‌ನಲ್ಲಿ ಪುಣೆ ಯುವತಿ ಕಿರುಕಳ ಘಟನೆಗಳನ್ನು ಬಿಚ್ಚಿಟ್ಟಿದ್ದಾಳೆ. ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯ ಕ್ಯೂನಲ್ಲಿ ನಿಂತಿರುವಾಗ ಹಿಂಬದಿಯಿಂದ ವ್ಯಕ್ತಿ ಕಿರುಕುಳ ನೀಡಿದ್ದಾನೆ.ತಕ್ಷಣವೆ ಕಿರುಚಾಡಿ ಕಿರುಕುಳ ನೀಡಿದವನ ವಿರುದ್ಧ ಎಗರಾಡಿದಾಗ, ತನ್ನದೇನು ತಪ್ಪೇ ಇಲ್ಲ ಎಂದು ನಟಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ರೀತಿಯ ಘಟನೆ ಬೆಂಗಳೂರಿನಲ್ಲಿ ಮೊದಲಲ್ಲ. ಪುಣೆಯಿಂದ ಬೆಂಗಳೂರಿಗೆ ಬಂದಾಗಿನಿಂದ ಪ್ರತಿ ಬಾರಿ ಇಂತಹ ಘಟನೆಗಳು ಎದುರಾಗುತ್ತಿದೆ ಎಂದು ಯುವತಿ ಹೇಳಿಕೊಂಡಿದ್ದಾಳೆ.
ಮಹಿಳಾ ಲೈಂಗಿಕ ಕಿರುಕುಳ ಅಂತ್ಯಗೊಳಿಸಲು ಕೇಂದ್ರದ ಮಹತ್ವದ ಹೆಜ್ಜೆ, She Box ಆರಂಭ!
ಬೆಂಗಳೂರಿನ ಹೆಚ್ಎಸ್‌ಆರ್ ರಸ್ತೆಯಲ್ಲಿ ನಡೆದುಕೊಂಡು ಹೋಗುುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಶ್ಲೀಲ ಪದ ಬಳಸಿ ಕೂಗಿದ್ದಾರೆ. ಇದಕ್ಕೂ ಮೊದಲು ಕಚೇರಿಯಲ್ಲಿ ಕೆಲವರ ನಡೆದುಕೊಂಡ ರೀತಿ, ಮೆಸೇಜ್ ಸೇರಿದಂತೆ ಹಲವು ಘಟನೆಗಳು ಪದೇ ಪದೆ ನಡೆಯುತ್ತಿದೆ.ಬೆಂಗಳೂರು ಮಹಿಳೆಯರಿಗೆ ಸುರಕ್ಷಿತ ತಾಣವಾಗಿ ಕಾಣುತ್ತಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದೀಗ ನನಗೆ ಬೆಂಗಳೂರು ಎಂದರೆ ಭಯವಾಗುತ್ತಿದೆ. ಯಾವಾಗ ನನ್ನ ಮೇಲೆ ದಾಳಿಯಾಗುತ್ತೇ ಅನ್ನೋ ಭಯ ಕಾಡುತ್ತಿದೆ. ಈ ರೀತಿ ಘಟನೆ ಎಲ್ಲೆಡೆ ನಡೆಯುತ್ತಿದೆ. ಇದೀಗ ನನಗೆ ಬೇರೆಡೆ ಕೆಲಸ ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಾದರೆ ಇಂದಿರಾನಗರ ಅಥವಾ ಮಹಿಳೆಯ ಸುರಕ್ಷತೆ ಇರುವ ಕಡೆ ನೋಡಬೇಕು. ಪುಣೆ ಅಥವಾ ಮುಂಬೈ ಆದರೆ ಉತ್ತಮ ಎಂದು ಮಹಿಳೆ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
Posts from the bangalore
community on Reddit
ಈ ಘಟನೆಗಳ ಬಳಿಕ ನಾನು ಬೆಂಗಳೂರನ್ನು ದ್ವೇಷಿಸುತ್ತಿದ್ದೇನೆ. ನಾನು ಸ್ವತಂತ್ರವಾಗಿ ಇರಲು ಬಯಸುತ್ತೇನೆ. ಪುಣೆಯಲ್ಲಿ ಹುಟ್ಟಿ ಬೆಳೆದ ನನಗೆ ಬೆಂಗಳೂರು ಆತಂಕದ ಗೂಡಾಗುತ್ತಿದೆ. ಕಚೇರಿ, ಮನೆ, ಶಾಪಿಂಗ್, ಹೀಗೆ ಒಬ್ಬಂಟಿಯಾಗಿ ತಿರುಗಾಡಲು ಬಯಸುತ್ತೇನೆ. ನನ್ನ ಸ್ವಾತಂತ್ರ್ಯವನ್ನು ಆನಂದಿಸುತ್ತೇನೆ. ಆದರೆ ಇಲ್ಲಿ ತಿರುಗಾಡಲು ಆಗುತ್ತಿಲ್ಲ, ಕಚೇರಿಗೆ ತೆರಳಿದರೂ ಸಮಸ್ಯೆ, ರಸ್ತೆಯಲ್ಲಿ ನನ್ನ ಪಾಡಿಗೆ ತೆರಳಿದರೂ ಸಂಕಷ್ಟ ತಪ್ಪುತ್ತಿಲ್ಲ ಎಂದು ಪುಣೆ ಯುವತಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಮಹಿಳೆಯೊಬ್ಬರು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್ ಹತ್ತಿ ಸಂಕಷ್ಟ ಅನುಭವಿಸಿದ ಘಟನೆ ಬೆಳಕಿಗೆ ಬಂದಿತ್ತು. ಓಲಾ ಕ್ಯಾಬ್ ಡ್ರೈವರ್ ಹೆಸರಿನಲ್ಲಿ ನಕಲಿ ಡ್ರೈವರ್ ಮಹಿಳೆ ಹತ್ತಿಸಿಕೊಂಡು ಹೊರಟು ಹಣ ವಸೂಲಿ ಮಾಡಲು ಮುಂದಾಗಿದ್ದ. ಆದರೆ ಪೊಲೀಸರು ನೆರವು ಕೇಳಿದ ಯುವತಿ ಅಪಾಯದಿಂದ ಪಾರಾಗಿದ್ದಳು.