ವಿವಾಹಿತೆಗಾಗಿ ಗೆಳೆಯನ ಬರ್ಬರ ಹತ್ಯೆ; ಮೊಬೈಲ್‌ನಲ್ಲಿ ಲೈವ್ ಮಾಡಿ ವಿಕೃತಿ!

By Suvarna News  |  First Published Nov 11, 2024, 8:04 PM IST

ಅನೈತಿಕ ಸಂಬಂಧಕ್ಕಾಗಿ ಸುನೀಲ್ ಭಜಂತ್ರಿ ಎಂಬಾತನ ಕೊಲೆ ಭಯಾನಕ‌ ವಿಡಿಯೋ ವೈರಲ್ ಆಗಿವೆ.  ಆತನ ಖಾಸಾ ಗೆಳೆಯರೆ ಹತ್ಯೆ ಮಾಡಿದ್ದು, ಹತ್ಯೆಗು ಮೊದಲು ಮೊಬೈಲ್ ನಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡುವ ದೃಶ್ಯಗಳನ್ನ ಸೆರೆ ಹಿಡಿದಿದ್ದಾರೆ. 


-ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ನ.11) : ಅವರಿಬ್ರು ಕುಚುಕು ಗೆಳೆಯರು, ದಿನಾ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು‌. ಆದರೆ ಮದುವೆಯಾಗಿ ಮಕ್ಕಳಿರುವ ಮಹಿಳೆ ಹಿಂದೆ ಬಿದ್ದು, ಓರ್ವ ಭೀಕರವಾಗಿ ಕೊಲೆಯಾದ್ರೆ ಮತ್ತೋರ್ವ ಜೈಲು ಪಾಲಾಗಿದ್ದಾನೆ. ಕಂಠಪೂರ್ತಿ ಕುಡಿಸಿ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ ವಿಡಿಯೋ ವೈರಲ್ ಆಗಿವೆ.

Tap to resize

Latest Videos

undefined

ಬೆಚ್ಚಿ ಬೀಳಿಸಿದ ಲೈವ್ ಮರ್ಡರ್ ದೃಶ್ಯ

ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಎಂಪಿಎಂಸಿ ಹೊರ ಭಾಗದಲ್ಲಿ ನಿನ್ನೆ ನಡೆದಿದ್ದ ಸುನೀಲ್ ಭಜಂತ್ರಿ ಕೊಲೆ ಭಯಾನಕ‌ ವಿಡಿಯೋ ವೈರಲ್ ಆಗಿವೆ. ಸುನೀಲ್ ಭಜಂತ್ರಿಯನ್ನ ಆತನ ಖಾಸಾ ಗೆಳೆಯರೆ ಹತ್ಯೆ ಮಾಡಿದ್ದು, ಹತ್ಯೆಗು ಮೊದಲು ಮೊಬೈಲ್ ನಲ್ಲಿ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡುವ ದೃಶ್ಯಗಳನ್ನ ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.

ಅನೈತಿಕ ಸಂಬಂಧಕ್ಕೆ ಕೊಲೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ದೃಶ್ಯಗಳನ್ನ ಪರಿಶೀಲಿಸಿದಾಗ ಪೊಲೀಸರಿಗೆ ಇದೊಂದು ಅನೈತಿಕ ಸಂಬಂಧಕ್ಕಾಗಿ ನಡೆದ ಕೊಲೆ ಎಂದು ಗೊತ್ತಾಗಿದೆ. ಅನೈತಿಕ ಸಂಬಂಧಕ್ಕೆ ಸ್ನೇಹಿತರೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶನಿವಾರ ತಡರಾತ್ರಿ ಕೊಲೆಯಾದ ಸುನೀಲ್ ಹಾಗೂ ಆತನ ಸ್ನೇಹಿತ ಸಂತೋಷ ಹಾಗೂ ಮುದುಕಪ್ಪ ಎನ್ನುವವರು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮಾಜಕ್ಕೆ ಏನು ಮಾಡಿದ್ದಾರೆ? ಸಿಎಂ ಇಬ್ರಾಹಿಂ ಪ್ರಶ್ನೆ

ಬಾರ್ ನಲ್ಲಿ ಕುಡಿದ ನಶೆಯಲ್ಲಿ ಹತ್ಯೆ

ಸುನೀಲ್‌ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದ ಸಂತೋಷ ಹಾಗೂ ಮುದುಕಪ್ಪ ಮೊದಲು ಬಸವನ ಬಾಗೇವಾಡಿ ಪಟ್ಟಣದ ಬಾರ್ ನಲ್ಲಿ ಕುಡಿದಿದ್ದಾರೆ. ಇತ್ತ ಸುನೀಲ್‌ಗು ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ಬಳಿಕ ಅಲ್ಲೇ ದೂರದಲ್ಲಿರುವ ಹೊಲದಲ್ಲಿ ಮೇವು ತರೋಣ ಬಾ ಎಂದು ಸುನೀಲ್ ನನ್ನ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿಯೂ ಮತ್ತೆ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಅನೈತಿಕ ಸಂಬಂಧದ‌ ವಿಚಾರ ಪ್ರಸ್ತಾಪವಾಗಿದೆ. ಇದೆ ವಿಚಾರವಾಗಿ ಮಾತುಕತೆ ನಡೆದು ಬಳಿಕ ಇಬ್ಬರು ಸೇರಿ ಸುನೀಲ್ ಹತ್ಯೆ ಮಾಡಿದ್ದಾರೆ.

ವಿವಾಹಿತೆ ಜೊತೆಗೆ ಇಬ್ಬರ ಅಕ್ರಮ ಸಂಬಂಧ

ಸುನಿಲ್ ಹಾಗೂ ಸಂತೋಷ ಇಬ್ಬರು ಕೂಡಾ ಒಬ್ಬಳ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.. ಮೊನ್ನೆಯೂ ಕೂಡಾ ನೀನು ಅವಳನ್ನು ಬಿಡು ಎಂದು ಸುನೀಲ್ ಗೆ ಸಂತೋಷ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದರೆ ಸಂತೋಷ ನೀಡಿದ ಎಚ್ಚರಿಕೆಗೆ ಸುನೀಲ್ ಡೋಂಟ್ ಕೇರ್ ಎಂದಿದ್ದಾರೆ.‌ ಇದರಿಂದ ಆಕ್ರೋಶಗೊಂಡ ಸಂತೋಷ ಹಗ್ಗದಿಂದ ಸುನೀಲ್ ಕುತ್ತಿಗೆ ಬಿಗಿದು ಬಳಿಕ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ್ದಾರೆ.

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ವಿಡಿಯೋ ದೃಶ್ಯ ಸೆರೆಹಿಡಿದು ವಿಕೃತಿ

ಕೊಲೆ ಮಾಡುವ ವೇಳೆ ಹಂತಕರಿಬ್ಬರು ವಿಕೃತಿ ಮೆರೆದಿದ್ದಾರೆ‌. ಕೊಲೆ ಮಾಡುವ ಸಮಯದ ದೃಶ್ಯಗಳನ್ನ ತಮ್ಮ ಮೊಬೈಲ್‌ನಲ್ಲಿ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ಸಂತೋಷ ಹಾಗೂ ಮುದುಕಪ್ಪನ್ನನ್ನು ವಶಕ್ಕೆ ಪಡೆದಿದ್ದಾರೆ.

click me!