Hyderabad gang-rape case: ಸಂತ್ರಸ್ತೆಯ ವಿಡಿಯೋ ಸೋರಿಕೆ, ಬಿಜೆಪಿ MLA ಮೇಲೆ ಎಫ್‌ಐಆರ್‌

By Sharath SharmaFirst Published Jun 7, 2022, 5:04 PM IST
Highlights

BJP MLA booked in Hyderabad gang-rape case: ಹೈದರಾಬಾದ್‌ ಪೊಲೀಸರು ಬಿಜೆಪಿ ಶಾಸಕನ ಮೇಲೆ ಪ್ರಕರಣ ದಾಖಲಿಸಿದ್ಧಾರೆ. ಸಂತ್ರಸ್ತೆಯ ಗುರುತು ಸೋರಿಕೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. 

ಹೈದರಾಬಾದ್‌: ಹೈದರಾಬಾದಿನಲ್ಲಿ ಕಳೆದ ತಿಂಗಳ ಅಂತ್ಯದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ (Hyderabad gang-rape case) ಸಂಬಂಧಿಸಿದಂತೆ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಹಿನ್ನೆಲೆ ಬಿಜೆಪಿ ಶಾಸಕನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್‌ (Supreme Court Order) ಆದೇಶದ ಅನ್ವಯ ಸಂತ್ರಸ್ತೆಯ ಹೆಸರು, ಭಾವಚಿತ್ರ, ವಿಡಿಯೋ, ವಿಳಾಸ ಸೇರಿದಂತೆ ಸಂತ್ರಸ್ತೆಗೆ ಸಂಬಂಧಿಸಿದ ಯಾವ ವಿಚಾರವನ್ನೂ ಬಹಿರಂಗ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧವಾಗಿ ಸಂತ್ರಸ್ತೆಯ ಗುರುತು ಬಹಿರಂಗ ಮಾಡಿದ ಆರೋಪದ ಮೇಲೆ ಇದೀಗ ಅಬಿಡ್‌ ಠಾಣೆಯ ಪೊಲೀಸರು ಬಿಜೆಪಿ ಶಾಸಕನ ಮೇಲೆ ಎಫ್‌ಐಆರ್‌ ದಾಖಲಿಸಿದ್ಧಾರೆ. 

ಬಿಜೆಪಿ ಶಾಸಕನ ಮೇಲೆ ಸೆಕ್ಷನ್‌ 228A (ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ (Sexual offence victim) ಗುರುತನ್ನು/ಖಾಸಗಿತನವನ್ನು ಸಾರ್ವಜನಿಕ ವಲಯದಲ್ಲಿ ಹರಿ ಬಿಡುವುದನ್ನು ತಡೆಯುವ ಕಾಯ್ದೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಹೈದರಾಬಾದಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆ, ಸಂತ್ರಸ್ತೆಯ ಘನತೆಗೆ ಧಕ್ಕೆ ತರುವಂತೆ ಸಂತ್ರಸ್ತೆಯ ಗುರುತನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿರುವುದು ಮತ್ತು ನ್ಯಾಯಾಂಗ ವ್ಯವಸ್ಥೆಯ ಆದೇಶದ ವಿರುದ್ಧ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಿಂದ ಸಂತ್ರಸ್ತೆಯ ಚಾರಿತ್ರ್ಯವಧೆಯಾಗಿದ್ದು, ಬಿಜೆಪಿ ಶಾಸಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ," ಎಂದು ಎಫ್‌ಐಆರ್‌ನಲ್ಲಿ (First Information Report) ನಮೂದಿಸಲಾಗಿದೆ.

ಇದನ್ನೂ ಓದಿ: ಮರ್ಸಿಡಿಸ್‌ ಕಾರಲ್ಲಿ ಅಪ್ರಾಪ್ತೆಯ ಗ್ಯಾಂಗ್‌ ರೇಪ್‌: ಶಾಸಕನ ಮಗನಿಗಾಗಿ ಹುಡುಕಾಟ

ಜೂನ್‌ 4ರಂದು ಬಿಜೆಪಿ ಶಾಸಕ ಮಾಧ್ಯಮಕ್ಕೆ ವಿಡಿಯೋ ಒಂದನ್ನು ನೀಡಿದ್ದ. ವಿಡಿಯೋದಲ್ಲಿ ಎಐಎಂಐಎಂ ಪಕ್ಷದ ಶಾಸಕನ ಮಗ ಇನ್ನುಳಿದ ಆರೋಪಿಗಳೊಂದಿಗೆ ಕಾರೊಳಗೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇದರಲ್ಲಿ ಸಂತ್ರಸ್ತೆಯ ಮುಖ ಪರಿಚಯ ಮತ್ತು ಗುರುತು ಕಾಣಿಸುತ್ತಿದೆ. 

ಆದರೆ ಬಿಜೆಪಿ ಶಾಸಕ ಹೇಳುವ ಪ್ರಕಾರ, ಅಪರಾಧ ಕೃತ್ಯದ ಸಾಕ್ಷಿಯನ್ನು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಯುವತಿಯ ಮುಖ ಕಾಣದಂತೆ ಮಾಡಿ ಬಿಡುಗಡೆ ಮಾಡಲಾಗಿದೆ. ಸಂತ್ರಸ್ತೆಯ ಮುಖವಾಗಲಿ ಅಥವಾ ಗುರುತಾಗಲೀ ಅದರಲ್ಲಿ ಕಾಣಿಸುವುದಿಲ್ಲ ಎಂದಿದ್ದಾರೆ. ಆದರೆ ಆರೋಪಿಗಳ ಮುಖ ಮತ್ತು ಫೋಟೊ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಜತೆಗೆ ಎಐಎಂಐಎಂ ಶಾಸಕನ ಮಗನ ಹೆಸರನ್ನು ಪ್ರಕರಣದಲ್ಲಿ ಯಾಕೆ ಹೆಸರಿಸಿಲ್ಲ ಎಂದು ಬಿಜೆಪಿ ಶಾಸಕ ಪೊಲೀಸರನ್ನು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಗಂಡನ ಜೊತೆ ಪ್ರವಾಸಕ್ಕೆ ಬಂದಿದ್ದ ಬ್ರಿಟೀಷ್‌ ಮಹಿಳೆಯ ಮೇಲೆ ಗೋವಾ ಬೀಚಿನಲ್ಲಿ ಅತ್ಯಾಚಾರ

ತನಿಖಾಧಿಕಾರಿಗಳು ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಸೆಕ್ಷನ್‌ 164 CrPC ಅಡಿ ದಾಖಲಿಸಲು ಮುಂದಾಗಿದ್ದಾರೆ. ಯುವತಿ ಹೇಳಿಕೆಯಲ್ಲಿ ಎಐಎಂಐಎಂ ಶಾಸನಕ ಮಗನ ಬಗ್ಗೆ ಹೇಳಿಕೆ ನೀಡಿದರೆ ಆತನ ಹೆಸರನ್ನು ಪ್ರಕರಣದಲ್ಲಿ ದಾಖಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಆರೋಪಿಗಳೆಲ್ಲಾ ಪ್ರಭಾವಿ ರಾಜಕೀಯ ನಾಯಕರ ಮಕ್ಕಳಾಗಿರುವ ಹಿನ್ನೆಲೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂದೂ ವಿರೋಧ ಪಕ್ಷಗಳು ಆರೋಪಿಸಿವೆ. 

ಮೇ 28ರಂದು ಸಂತ್ರಸ್ತೆ ಹೈದರಾಬಾದಿನ ಪಬ್‌ ಒಂದಕ್ಕೆ ತೆರಳಿದ್ದಳು. ಅದಾದ ನಂತರ ಅಲ್ಲಿ ಹುಡುಗನೊಬ್ಬನ ಪರಿಚಯವಾಗಿದೆ. ಆತ ಮತ್ತು ಆತನ ಸ್ನೇಹಿತರ ಜೊತೆ ಆಕೆ ಪಬ್‌ನಿಂದ ಹೊರನಡೆದಿದ್ದಾಳೆ. ಯುವಕ ಸಂತ್ರಸ್ತೆಯನ್ನು ಮನೆಗೆ ಡ್ರಾಪ್‌ ಮಾಡುವುದಾಗಿ ಹೇಳಿದ್ದ. 

ಇದನ್ನೂ ಓದಿ: ಹಾವೇರಿ: ವಿದ್ಯಾರ್ಥಿನಿ ಮೇಲೆ ಒಂದೂವರೆ ವರ್ಷದಿಂದ ಪ್ರಾಧ್ಯಾಪಕನಿಂದ ರೇಪ್‌

ಅದಾದ ನಂತರ ಮರ್ಸಿಡಿಸ್‌ ಕಾರಿನಿಂದ ಇಳಿದು ಹತ್ತಿರದ ಕೆಫೆ ಬಳಿ ಇನ್ನೊಂದು ಇನೋವಾ ಕಾರನ್ನು ಏರಿದ್ದಾರೆ. ಆಗ ಸುಮಾರು ಸಂಜೆ 6.30. ಅದಾದ ನಂತರ ಯುವತಿಯನ್ನು ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಅದಾದ ನಂತರ ಮತ್ತೆ ಪಬ್‌ ಬಳಿ ಸಂಜೆ 7.32ಕ್ಕೆ ಆಕೆಯನ್ನು ಪಬ್‌ ಬಳಿ ಡ್ರಾಪ್‌ ಮಾಡಿ ಆರೋಪಿಗಳು ತೆರಳಿದ್ದಾರೆ.

click me!