
ರಾಜಸ್ಥಾನದ ಬರ್ಮೆರ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಎಂಟು ಜನ ಸಾವಿಗೀಡಾಗಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮೆರ್‌ನ ಗುಡಮಲಾನಿ ಬ್ಲಾಕ್‌ನ ಆಲಪುರ ಗ್ರಾಮದ ಬಳಿ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. SUV ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಒಂಭತ್ತು ಜನರು ಮದುವೆ ದಿಬ್ಬಣದ ಭಾಗವಾಗಿದ್ದರು. ಇವರು ಪ್ರಯಾಣಿಸುತ್ತಿದ್ದ ವಾಹನ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಜಲೋರ್ ಜಿಲ್ಲೆಯ (Jalore district) ಸೇಡಿಯಾ ಗ್ರಾಮದಿಂದ (Sediya village) ಗುಡಮಲನಿಯ (Gudamalani) ಕಂಧಿ ಕಿ ಧನಿಗೆ (Kandhi Ki Dhani)ಮದುವೆ ದಿಬ್ಬಣ ತೆರಳುತ್ತಿತ್ತು. ಇನ್ನೇನು ಮದುವೆ ಮನೆ ತಲುಪಲು ಕೇವಲ ಎಂಟು ಕಿಲೋಮೀಟರ್ ದೂರವಿದ್ದಾಗ, ವೇಗವಾಗಿ ಸಾಗಿಸುತ್ತಿದ್ದ ಅವರ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಗುಡಮಲಾನಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮುಲಾರಾಮ್ ಚೌಧರಿ (Mularam Choudhary) ಹೇಳಿದರು.
Belagavi; ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!
ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಗಾಯಗೊಂಡು ಸಂಚೋರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಆಸ್ಪತ್ರೆಗೆ ಆಗಮಿಸುವ ವೇಳೆಯೇ ಅವರಿಬ್ಬರ ಸ್ಥಿತಿ ಗಂಭಿರವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಇತ್ತ ತೀವ್ರವಾಗಿ ಗಾಯಗೊಂಡಿರುವ ಪ್ರಕಾಶ್ ಬಿಷ್ಣೋಯ್ (20) ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರನ್ನು 45 ವರ್ಷದ ಪುನ್ಮಾ ರಾಮ್ (Punma Ram), 28 ವರ್ಷ ಪ್ರಾಯದ ಪ್ರಕಾಶ್ ಬಿಷ್ಣೋಯ್ (Prakash Bishnoi), 12 ವರ್ಷ ಪ್ರಾಯದ ಮನೀಶ್ ಬಿಷ್ಣೋಯ್ (Manish Bishnoi), 5 ವರ್ಷ ಪ್ರಾಯದ ಪ್ರಿನ್ಸ್ ಬಿಷ್ಣೋಯ್ ( Prince Bishnoi), 38 ವರ್ಷದ ಭಾಗೀರಥ್ ರಾಮ್ (Bhagirath Ram) ) ಮತ್ತು 48 ವರ್ಷದ ಪುನ್ಮಾ ರಾಮ್ (Punma Ram) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಜಲೋರ್ (Jalore)ನಿವಾಸಿಗಳಾಗಿದ್ದಾರೆ. ಇತ್ತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 38 ವರ್ಷ ಪ್ರಾಯದ ಮಂಗಿಲಾಲ್ ಬಿಷ್ಣೋಯ್ (Mangilal Bishnoi) ಮತ್ತು 40 ವರ್ಷ ಪ್ರಾಯದ ಬುಧರಾಮ್ ಬಿಷ್ಣೋಯ್ (Budharam Bishnoi) ಸಾವನ್ನಪ್ಪಿದ್ದಾರೆ.
Accident ಚಾರ್ ಧಾಮ್ ಯಾತ್ರಾರ್ಥಿಗಳ ಬಸ್ ಅಪಘಾತ, ಕಂದಕ್ಕೆ ಉರುಳಿ 22 ಮಂದಿ ಸಾವು!
ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ದುರಂತದ ಬಗ್ಗೆ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಬಾರ್ಮರ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವಾರು ಜನರು ಸಾವನ್ನಪ್ಪಿದ ಸುದ್ದಿ ದುಃಖಕರವಾಗಿದೆ. ಎಲ್ಲಾ ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಶೇಖಾವತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ