
ಹೈದರಾಬಾದ್(ಸೆ. 28) ಬೆಂಗಳೂರಿನದ್ದೇ(Bengaluru) ರೀತಿಯ ಪ್ರಕರಣ ಹೈದರಾಬಾದ್(Hyderabad) ನಿಂದ ವರದಿಯಾಗಿದೆ. ಬುರ್ಖಾ ಧರಿಸಿದ್ದ ಮಹಿಳೆಗೆ ಡ್ರಾಪ್ ಕೊಡುತ್ತಿದ್ದ ಹಿಂದು ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ(Social Media) ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ರೀತಿಯದ್ದೇ ಪ್ರಕರಣ. ಬುರ್ಖಾ ಧರಿಸಿದ್ದ ಮಹಿಳೆಗೆ ಬೈಕ್ ನಲ್ಲಿ ಡ್ರಾಪ್ ಕೊಡುತ್ತಿದ್ದ ಯುವಕನನ್ನು ತಡೆದ ತಂಡ ಪ್ರಶ್ನೆ ಮಾಡಿದೆ. ನಾವಿಬ್ಬರು ಗೆಳೆಯರು ಎಂದು ಬೈಕ್ ನಲ್ಲಿ ಇದ್ದವರು ಹೇಳಿದರು ದುಷ್ಕರ್ಮಿಗಳು ಅವರನ್ನು ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ..
ನಾವಿಬ್ಬರೂ ಆಂಧ್ರ ಪ್ರದೇಶದವರು ಈ ನಗಗರದಲ್ಲಿ ವಾಸವಿಲ್ಲ ಎಂದು ಹೇಳಿದರೂ ತಂಡ ಮಾತ್ರ ಕೇಳಿಲ್ಲ. ನಾಂಪಲ್ಲಿ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷ ಮತ್ತು ಮಹಿಳೆ ನಗರದ ಕಾಲೇಜಿಗೆ ಕೆಲಸವೊಂದರ ನಿಮಿತ್ತ ತೆರಳಿದ್ದರು. ಮಹಿಳೆಯ ಎಂಬಿಎ ಪ್ರವೇಶಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಸುಮಾರು 22 ವರ್ಷ ವಯಸ್ಸಿನ ಇಬ್ಬರೂ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಖಲೀಲ್ ಪಾಷಾ ತಿಳಿಸಿದ್ದಾರೆ.
ಬೈಕ್ ನಲ್ಲಿ ಇದ್ದ ಯುವಕ ಕೇಸರಿ ಬಣ್ಣದ ರಿಬ್ಬನ್ ಹಾಕಿಕೊಂಡಿದ್ದ ಕಾರಣ ದುಷ್ಕರ್ಮಿಗಳ ತಂಡ ಏಕಾಏಕಿ ನುಗ್ಗಿರಬಹುದು. ಒಬ್ಬರಿಗೊಬ್ಬರು ತಾಗಿಕೊಳ್ಳುವಂತೆ ಯಾವ ಕಾರಣಕ್ಕೆ ಕುಳಿತುಕೊಂಡಿದ್ದೀರಿ ಎಂದು ದುಷ್ಕರ್ಮಿಗಳುದ ದಾಳಿ ಮಾಡಿ ಪ್ರಶ್ನೆ ಮಾಡಿದ್ದಾರೆ.
ಭಾನುವಾರ ಈ ಘಟನೆ ನಡೆದಿದೆ. ನಾವು ವೀಡಿಯೊದಿಂದ ವಿವರಗಳನ್ನು ಸಂಗ್ರಹಿಸಿದ್ದೇವೆ. ಇದು ಸೂಕ್ಷ್ಮ ವಿಚಾರವಾದ್ದರಿಂದ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಸಾಧ್ಯವಿಲ್ಲ. ನಾವು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ