*ಸೈಬರ್ ಕೆಫೆಯಲ್ಲಿ ಬಾಲಕಿಯರ ಮೇಲೆ ಎರಗಿದ ಕಾಮಾಂಧರು
* ಒತ್ತೆಯಾಳಾಗಿರಿಸಿಕೊಂಡು ಸಾಮೂಹಿಕ ಅತ್ಯಾಚಾರ
* ರೇಪ್ ನಡೆಸಿದ್ದರ ವಿಡಿಯೋ ಮಾಡಿಕೊಂಡು ದುರುಳರಿಂದ ಹಣಕ್ಕೆ ಬೇಡಿಕೆ
ಲಕ್ನೋ(ಸೆ. 27) ಉತ್ತರ ಪ್ರದೇಶದಿಂದ ಘೋರ ಪ್ರಕರಣವೊಂದು ವರದಿಯಾಗಿದೆ. ಸೈಬರ್ ಕೆಫೆಯಲ್ಲಿ ಇಬ್ಬರು ಹುಡುಗಿಯರನ್ನು ಒತ್ತೆಯಾಳಾಗಿ ಇಟ್ಟುಕೊಂಡು ನಾಲ್ವರು ಕಾಮುಕರು ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ..
ಸೆಪ್ಟೆಂಬರ್ 13ರಂದು ಕೆಲವು ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಲು ಇಬ್ಬರು ವಿದ್ಯಾರ್ಥಿನಿಯರು ಕೆಫೆಗೆ ತೆರಳಿದ್ದು ಈ ವೇಳೆ ಅವರನ್ನು ನಾಲ್ವರು ಅವರ ಮೇಲೆ ದಾಳಿ ಮಾಡಿ ಅಲ್ಲಿಯೇ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ನಂತರ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಗೆ ಮುಂದಾಗಿದ್ದಾರೆ.
ವಿಡಿಯೋ ಹರಿಬಿಡುವ ಬೆದರಿಕೆಯೊಡ್ಡಿ ಸಂತ್ರಸ್ತೆಯರಿಂದ 10 ಸಾವಿರ ರೂಪಾಯಿ ಸುಲಿಗೆ ಮಾಡಿದ್ದು ಬಾಲಕಿಯೊಬ್ಬರ ದೂರಿನ ಆಧಾರದ ಮೇಲೆ ಮಹಿಳೆ ಸೇರಿದಂತೆ ಆರು ಜನರ ವಿರುದ್ಧ ಸದರ್ ಕೊತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.
ಪ್ಯಾಂಟ್ ಕಳಚಿ ಮಹಿಳೆಯ ಖಾಸಗಿ ಅಂಗ ಮುಟ್ಟಲು ಮುಂದಾದ ಪ್ರಸಿದ್ಧ ಡಾಕ್ಟರ್!
17 ವರ್ಷದ ವಿದ್ಯಾರ್ಥಿನಿ ತನ್ನ ದೂರಿನಲ್ಲಿ ತನ್ನ ಸ್ನೇಹಿತೆಯೊಂದಿಗೆ ಸೆಪ್ಟೆಂಬರ್ 13ರಂದು ಮಧ್ಯಾಹ್ನ ಸೈಬರ್ ಕೆಫೆಗೆ ಹೋಗಿದ್ದಾಗ ಅಲ್ಲಿ ಈಗಾಗಲೇ ಇದ್ದ ನಾಲ್ವರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಬಾಲಕಿಯರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಎಲ್ಲ ಸ್ಥಳಗಳನ್ನು ಪರಿಶೀಲಿಸಲಾಗಿದೆ.
ಬಾಲಕಿಯೊಬ್ಬಳ ಮೇಲೆ ಮೂವತ್ತಕ್ಕೂ ಅಧಿಕ ಕಾಮುಕರು ಕ್ರೌರ್ಯ ಮೆರೆದ ಪ್ರಕರಣ ಮಹಾರಾಷ್ಟ್ರದಿಂದ ವರದಿಯಾಗಿತ್ತು. ಬಾಲಕಿಯ ಗೆಳೆಯನೇ ವಿಡಿಯೋ ಮಾಡಿಕೊಂಡು ಎಲ್ಲರಿಗೂ ಶೇರ್ ಮಾಡಿದ್ದ. ಬ್ಲಾಕ್ ಮೇಲ್ ಗೆ ಒಳಗಾಗಿದ್ದ ಬಾಲಕಿ ಪಡಬಾರದ ಸಂಕಷ್ಟ ಪಟ್ಟಿದ್ದರು.