* ಬೆಂಗಳೂರಿನ ಹೊರವಲಯದಲ್ಲಿ ಗಾಂಜಾ ತೋಟ
* ಬಿಡದಿ ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದರು
* ಇರಾನ್ ಪ್ರಜೆಗಳುನ ಸೇರಿ ನಾಲ್ವರ ಬಂಧನ
* ಗಾಂಜಾ ಬೆಳೆಯಲು ಬೇಕಾದ ಕೃತಕ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದರು
ಬೆಂಗಳೂರು(ಸೆ. 28) ಬೆಂಗಳೂರಿನ ಸಿಸಿಬಿ(CCB) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮನೆಯಲ್ಲೇ ಗಾಂಜಾ (Drugs) ಬೆಳೆದವರರನ್ನು ಅರೆಸ್ಟ್ ಮಾಡಲಾಗಿದೆ. ಬಿಡದಿಯ(Bidadi) ವಿಲ್ಲಾ ಮೇಲೆ ದಾಳಿ ಮಾಡಿದಾಗ ಗಾಂಜಾ ತೋಟ ಬೆಳಕಿಗೆ ಬಂದಿದೆ.ಆರೋಪಿಗಳಲ್ಲಿ ಒಬ್ಬಾತ ಈ ಹಿಂದೆಯೂ ಡ್ರಗ್ಸ್ ಕೇಸ್ ನಲ್ಲಿ ಬಂಧಿತನಾಗಿದ್ದ. ಇಬ್ಬರು ವಿದೇಶಿಗರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.
ಶಾಂಪೇನ್ ಬಾಟಲಿಯಲ್ಲಿ ಕೋಟಿ ಕೋಟಿ ಮೌಲ್ಯದ ಡ್ರಗ್ಸ್
undefined
ಮನೆಯಲ್ಲೇ ಹೈಡ್ರೋ ಗಾಂಜಾ ಬೆಳೆದು ನಶೆ ಲೋಕಕ್ಕೆ ನೀಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ತಂಡವನ್ನು ಬಂಧಿಸಲಾಗಿದೆ. ಇಬ್ಬರು ಇರಾನ್ ಪ್ರಜೆಗಳು ಇದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಇಲ್ಲಿಯೇ ವಾಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ರಾಕೆಟ್ ದೊಡ್ಡ ಸುದ್ದಿ ಮಾಡಿತ್ತು. ಸಿಸಿಬಿ ಪ್ರಕರಣಕ್ಕೆ ಸಂಬಂಧಿಸಿ ಅನೇಕ ಸೆಲೆಬ್ರಿಟಿಗಳನ್ನು ವಿಚಾರಣೆ ಮಾಡಿತ್ತು. ನಟಿ ರಾಗಿಣಿ ಮತ್ತು ಸಂಜನಾ ಜೈಲು ವಾಸವನ್ನು ಅನುಭವಿಸಿದ್ದರು. ತಿಂಗಳುಗಳ ಕಾಲ ಜೈಲಿನಲ್ಲಿದ್ದು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.