* ಮೇಸ್ತ್ರಿ ಜೊತೆ ಪತ್ನಿ ಲವ್ವಿ-ಡವ್ವಿ
* ಪತ್ನಿಯನ್ನು ಕೊಂದು ಪೊಲೀಸ್ ಠಾಣೆಗೆ ಹೋದ ಪತಿ
* ಪತ್ನಿಯನ್ನು ಕೊಂದು ಠಾಣೆಗೆ ತೆರಳಿದ ಪತಿ ಶರಣಾಗುವ ಮುನ್ನ ಪೊಲೀಸರ ಮುಂದೆ ಹೇಳಿದ್ದಿಷ್ಟು
ಬೆಂಗಳೂರು, (ಜ.23): ಅನೈತಿಕ ಸಂಬಂಧ (Illicit Relationship ) ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ ಭಾರತಿ(32) ಕೊಲೆಯಾದ ಮಹಿಳೆ. ಪತಿ ರಘು(38) ಬಂಧಿತ. ರಘು ಬನ್ನೇರುಘಟ್ಟದಲ್ಲಿ ಆಟೋ ಚಾಲಕನಾಗಿದ್ದ. ಪತ್ನಿ ಮೇಸ್ತ್ರಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಮನೆಯಲ್ಲಿ ದಂಪತಿ ನಡುವೆ ಜಗಳ ನಡೆದಿತ್ತು.
ಜಗಳ ತಾರಕಕ್ಕೇರಿದಾಗ ರಘು, ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಬನ್ನೇರುಘಟ್ಟ ಠಾಣೆಗೆ ಆಗಮಿಸಿದ ಆರೋಪಿ ನಡೆದ ಎಲ್ಲ ಘಟನೆಯನ್ನು ಪೊಲೀಸರ ಮುಂದೆ ಹೇಳಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kidnap Case: ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್: ಪಾಗಲ್ ಪ್ರೇಮಿ ಅಂದರ್
ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದಲ್ಲಿ 6 ವರ್ಷದ ಮಗುವನ್ನು ಕೊಂದು ವ್ಯಕ್ತಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ತಿರುವು ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಜ.13 ರಂದು ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರ್ ತನ್ನ ಮಗ ಜಶ್ವಿತ್ (6) ಜೊತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನ ಪತ್ನಿ ಸಿಂಧು, ನಂಜುಂಡೇಗೌಡ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಂಜುಂಡೇಗೌಡನಿಗೆ ಸಿಂಧು ಅಕ್ಕನ ಮಗಳಾಗಬೇಕು. ಈ ವಿಷಯವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗಂಗಾಧರ್ ಎಳೆ ಎಳೆಯಾಗಿ ತಿಳಿಸಿದ್ದಾನೆ.
ಗಂಗಾಧರ್ ವೀಡಿಯೋದಲ್ಲಿ ತನ್ನ ಹೆಂಡತಿ ಸಿಂಧುವಿನ ಅಕ್ರಮ ಸಂಬಂಧ ಹಾಗೂ ಆಕೆ ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಾನೆ. 8 ವರ್ಷಗಳ ದಾಂಪತ್ಯ ಜೀವನದಲ್ಲಿ ಕಳೆದೆರಡು ವರ್ಷದಿಂದ ಬಿರುಕು ಮೂಡಿತ್ತು ಎಂದು ಗಂಗಾಧರ್ ಹೇಳಿದ್ದಾನೆ. ನಂಜುಂಡೇಗೌಡನ ಮೋಹಕ್ಕೆ ಬಿದ್ದು ಪತಿ, ಮಗು ಬಗೆಗಿನ ಕಾಳಜಿಯನ್ನು ಸಿಂಧು ಮರೆತಿದ್ದಳು. ಪ್ರತಿನಿತ್ಯ ನಂಜುಂಡೇಗೌಡನ ಜೊತೆ ಮಾತುಕತೆಯಲ್ಲೇ ಸಿಂಧು ತೊಡಗಿದ್ದಳು.
ಯಾರೂ ಇಲ್ಲದ ವೇಳೆ ಗಂಗಾಧರ್ ಮನೆಗೆ ನಂಜುಂಡೇಗೌಡ ಬಂದು ಸಿಂಧು ಜೊತೆ ಕಾಲ ಕಳೆದು ಹೋಗುತ್ತಿದ್ದ. ಸಿಂಧು ಸದಾ ಫೋನ್ನಲ್ಲಿ ಬ್ಯುಸಿಯಾಗಿ ಇರುತ್ತಿದ್ದಳು. ನಂಜುಂಡೇಗೌಡ ಜೊತೆ ಸಿಂಧು ವೀಡಿಯೋ ಕಾಲ್ ಮಾಡುತ್ತಿದ್ದಳು. ಇದನ್ನು ಕಂಡ ಪತಿ ಗಂಗಾಧರ್ ಪತ್ನಿ ಸಿಂಧು ವರ್ತನೆಯನ್ನು ಪ್ರಶ್ನಿಸಿದ ವೇಳೆ ಸಿಂಧು ಮತ್ತು ನಂಜುಂಡೇಗೌಡ ಬೆದರಿಕೆ ಹಾಕಿದ್ದರು.