Amazon ಹೆಸರಲ್ಲಿ ಧೋಖಾ: ಮಾಜಿ ಉದ್ಯೋಗಿ ಬಂಧನ!

By Kannadaprabha NewsFirst Published Jan 23, 2022, 8:33 AM IST
Highlights

*ಅಮೆಜಾನ್‌ಗೆ ಗೋದಾಮು ಬಾಡಿಗೆ ಪಡೆಯುವ ನೆಪ
*ಕಟ್ಟಡ ಮಾಲೀಕರ ವಿಶ್ವಾಸ ಗಳಿಕೆ
*ಕರಾರು ಮಾಡುವ ನೆಪದಲ್ಲಿ ಮಾಲೀಕರ ದಾಖಲೆ ಬಳಕೆ
* ಬ್ಯಾಂಕ್‌ನಿಂದ ಸಾಲ ಪಡೆದು ವಂಚನೆ
 

ಬೆಂಗಳೂರು (ಜ. 23): ಅಮೆಜಾನ್‌ ಕಂಪನಿಗೆ (Amazon) ಅಂಗಡಿ ಬಾಡಿಗೆ ಪಡೆಯುವ ನೆಪದಲ್ಲಿ ಕಟ್ಟಡ ಮಾಲೀಕನಿಂದ ಪಡೆದ ದಾಖಲೆ ಬಳಸಿ ಅಕ್ರಮವಾಗಿ ಬ್ಯಾಂಕ್‌ನಿಂದ 49 ಸಾವಿರ ರು. ಸಾಲ ಪಡೆದು ವಂಚಿಸಿದ್ದ ಕಂಪನಿಯ ಮಾಜಿ ಉದ್ಯೋಗಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಡಿಗೇಹಳ್ಳಿ ಸಮೀಪದ ನಿವಾಸಿ ಪ್ರದೀಪ್‌ ಬಂಧಿತನಾಗಿದ್ದು, ಆರೋಪಿಯಿಂದ 30 ಸಾವಿರ ರು. ಹಣ ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ವಿದ್ಯಾರಣ್ಯಪುರ ಸಮೀಪ ಅಂಗಡಿ ಮಾಲೀಕನಿಗೆ ಆರೋಪಿ ವಂಚನೆ ಮಾಡಿದ್ದ. ಬಳಿಕ ಬ್ಯಾಂಕ್‌ ಖಾತೆ ಆಧರಿಸಿ ಆತನ ಬಂಧನವಾಗಿದೆ.

ಮೊಬೈಲ್‌ ಪಡೆದು ವಂಚನೆ: ಮೂರು ತಿಂಗಳ ಹಿಂದೆ ದೂರುದಾರರ ಬಳಿಗೆ ಬಂದ ಪ್ರದೀಪ್‌, ತನ್ನನ್ನು ಅಮೆಜಾನ್‌ ಕಂಪನಿ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಅಂಗಡಿಯ ಖಾಲಿ ಜಾಗವನ್ನು ಬಾಡಿಗೆ ನೀಡಿದರೆ ಅಮೆಜಾನ್‌ ಗ್ರಾಹಕರಿಗೆ ಪೂರೈಸಬೇಕಿದ್ದ ವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಾಗಿ ಹೇಳಿದ್ದಾನೆ. ಅಲ್ಲದೆ ಹೆಚ್ಚಿನ ಬಾಡಿಗೆ ಸಹ ಕೊಡಿಸುವುದಾಗಿ ಆರೋಪಿ ಆಮಿಷವೊಡ್ಡಿದ್ದಾನೆ. ಈ ಮಾತಿಗೆ ಒಪ್ಪಿದ ಅಂಗಡಿ ಮಾಲೀಕರಿಗೆ ನಿಮ್ಮ ಮೊಬೈಲ್‌ ಕೊಡಿ. ಈಗಲೇ ಆ್ಯಪ್‌ ಡೋನ್‌ ಲೋಡ್‌ ಮಾಡಿ ಬಾಡಿಗೆ ಕರಾರು ಮುಗಿಸುತ್ತೇನೆ ಎಂದಿದ್ದಾನೆ.

ಇದನ್ನೂ ಓದಿ: Bank Theft Case: ಸಾಲ ತೀರಿಸಲು ಬ್ಯಾಂಕಿಗೇ ಕನ್ನ ಹಾಕಿದ್ದ ಖದೀಮನ ಬಂಧನ

ಅಂತೆಯೇ ಅವರು ಮೊಬೈಲ್‌ ಕೊಟ್ಟಿದ್ದಾರೆ. ಆಗ ಪೋಸ್ಟ್‌ ಪೇ ಎಂಬ ಆ್ಯಪ್‌ ಡೋನ್‌ ಲೋಡ್‌ ಮಾಡಿದ ಆರೋಪಿ, ಬಳಿಕ ಅಂಗಡಿ ಮಾಲೀಕರ ಆಧಾರ್‌ ಕಾರ್ಡ್‌ ಸೇರಿದಂತೆ ಇತರೆ ದಾಖಲೆ ಬಳಸಿ 40 ಸಾವಿರ ರು. ಸಾಲ ಪಡೆದಿದ್ದಾನೆ. ಬಳಿಕ ಪೇಟಿಂನಲ್ಲಿ ಸಹ 9 ಸಾವಿರ ರು. ಸಾಲ ಪಡೆದಿದ್ದಾನೆ. ಆನಂತರ ಪೋಸ್ಟ್‌ ಪೇ ಆ್ಯಪ್‌ ಡಿಲೀಟ್‌ ಮಾಡಿ ಮೊಬೈಲ್‌ ಅನ್ನು ಅಂಗಡಿ ಮಾಲೀಕರಿಗೆ ಮರಳಿಸಿ ಹೊರಟು ಹೋಗಿದ್ದ. ಇದಾದ ಎರಡು ತಿಂಗಳ ಬಳಿಕ ಹಣ ಪಾವತಿಸುವಂತೆ ಪೇಟಿಎಂ ಹಾಗೂ ಪೋಸ್ಟ್‌ ಪೇ ಆ್ಯಪ್‌ ಕಡೆಯಿಂದ ದೂರುದಾರರಿಗೆ ನೋಟಿಸ್‌ ಬಂದಾಗಲೇ ವಂಚನೆ ನಡೆದಿರುವುದು ಗೊತ್ತಾಗಿದೆ.

ಬಳಿಕ ಸಾಲ ಪಡೆಯಲು ನೀಡಿದ್ದ ಬ್ಯಾಂಕ್‌ ಖಾತೆ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. ಅಮೆಜಾನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಆ ವೇಳೆ ಕಂಪನಿಗೆ ಗೋದಾಮು ಹಾಗೂ ಅಂಗಡಿಗಳ ಬಾಡಿಗೆ ಪಡೆಯುವ ಕೆಲಸ ಮಾಡುತ್ತಿದ್ದ. ಇದರಿಂದ ಆತನಿಗೆ ಅಂಗಡಿ ಮಾಲೀಕರ ಜತೆ ವ್ಯವಹರಿಸುವುದು ಗೊತ್ತಿತ್ತು. ಆದರೆ, ಅಮೆಜಾನ್‌ನಲ್ಲಿ ಕೆಲಸ ತೊರೆದ ಬಳಿಕ ಸುಲಭವಾಗಿ ಹಣ ಸಂಪಾದನೆಗೆ ವಂಚನೆ ಕೃತ್ಯಕ್ಕಿಳಿದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ಫೋಸಿಸ್‌ನಲ್ಲಿ ಉದ್ಯೋಗದ ಆಸೆ ತೋರಿಸಿ ರೂ. 4.32 ಲಕ್ಷ ವಂಚನೆ: ಇನ್ಫೋಸಿಸ್ ಕಂಪನಿ (Infosys) ಹೆಸರಿನಲ್ಲಿ ಕರೆ ಮಾಡಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯಯೊಬ್ಬರನ್ನು ನಂಬಿಸಿ ₹4.32 ಲಕ್ಷ ಪಡೆದು ವಂಚಿಸಲಾಗಿದೆ. ಗೊರಗುಂಟೆ ಪಾಳ್ಯದ ಎಂ.ವಿನಿತ್‌(24) ಎಂಬುವವರು ಸೈಬರ್‌ ಚೋರರಿಂದ (Cyber Crime) ವಂಚನೆಗೆ ಒಳಗಾಗಿದ್ದಾರೆ. ಇವರು ನೀಡಿದ ದೂರಿನ ಮೇರೆಗೆ ಉತ್ತರ ಸಿಇಎನ್‌ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಸೈಬರ್‌ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Match Fixing Fraud: ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗರಿಗೆ ಮ್ಯಾಚ್‌ ಫಿಕ್ಸಿಂಗ್‌ ಆಫರ್‌..!

ಇತ್ತೀಚೆಗೆ ವಿನೀತ್‌ ಅವರ ಮೊಬೈಲ್‌ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿಯೊಬ್ಬ, ತಾನು ಇಸ್ಫೋಸಿಸ್‌ ಕಂಪನಿಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ನಿಮಗೆ ಕೆಲಸ ನೀಡುವುದಾಗಿ ಹೇಳಿ ನಂಬಿಸಿದ್ದಾನೆ. ಈತನ ಮಾತು ನಂಬಿದ ವಿನೀತ್‌ ಕೆಲಸ ಮಾಡಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯು ಕೆಲಸ ಸೇರಲು ಕೆಲ ಶುಲ್ಕಗಳನ್ನು (Fee) ಪಾವತಿಸಬೇಕು ಎಂದು ವಿವಿಧ ಹಂತಗಳಲ್ಲಿ ವಿನೀತ್‌ ಅವರಿಂದ ಬರೋಬ್ಬರಿ .4.30 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.

click me!