Suicide Cases: ಸಾಲ ಕೊಟ್ಟವರ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ

Kannadaprabha News   | Asianet News
Published : Jan 23, 2022, 08:46 AM IST
Suicide Cases: ಸಾಲ ಕೊಟ್ಟವರ ಕಿರುಕುಳ: ಆಟೋ ಚಾಲಕ ಆತ್ಮಹತ್ಯೆ

ಸಾರಾಂಶ

*  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಪೂಜಗೇರಿಯಲ್ಲಿ ನಡೆದ ಘಟನೆ *  ಅಶೋಕಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಮಂಜುಳಾ ರಾಮ ನಾಯಕ *  ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು   

ಅಂಕೋಲಾ(ಜ.23): ಮೀಟರ್‌ಬಡ್ಡಿ ಸಾಲ(Loan) ಮರು ಪಾವತಿ ಮಾಡದೇ ಇರುವ ಕಾರಣಕ್ಕಾಗಿ, ಮನೆ ಹತ್ತಿರ ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಟೋ ಚಾಲಕ ಮನ ನೊಂದು ಆತ್ಮಹತ್ಯೆಗೆ(Suicide) ಶರಣಾದ ಘಟನೆ ಅಂಕೋಲಾದ(Ankola) ಪೂಜಗೇರಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಆಟೋ ಚಾಲಕನಾಗಿರುವ(Auto Driver) ಅಶೋಕ ಡೊಂಗಾ ಗಾಂವಕರ (44) ಆತ್ಮಹತ್ಯೆ ಮಾಡಿಕೊಂಡವ. ಆತ್ಮಹತ್ಯೆ ಪ್ರಚೋದನೆ ನೀಡಿದ ಆರೋಪದ ಮೇಲೆ ಲಕ್ಷ್ಮೇಶ್ವರ ಮಂಜುಳಾ ರಾಮ ನಾಯಕ ಹಾಗೂ ನಾಗು ಅಂಕೋಲೆಕರ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಆತ್ಮಹತ್ಯೆಗೆ ಶರಣಾಗಿರುವ ಅಶೋಕ ಗಾಂವಕರ ಆರೋಪಿಯ ಪತಿ ರಾಜು ನಾಯಕ ಅವರಿಂದ ಮೀಟರ್‌ ಬಡ್ಡಿಗೆ ಸಾಲವನ್ನು(Meter Interest Loan) ಪಡೆದುಕೊಂಡಿದ್ದನು. ಇತ್ತೀಚಿಗೆ ರಾಜು ನಾಯಕ ಮರಣ ಪಟ್ಟಿದ್ದರಿಂದ ನಂತರ ಪ್ರತಿ ತಿಂಗಳು ಸಾಲದ ಬಡ್ಡಿ ನೀಡು ಎಂದು ಮಂಜುಳಾ ರಾಮ ನಾಯಕ ಅವರು ಅಶೋಕ ಡೊಂಗಾ ಗಾಂವಕರ ಅವರಿಗೆ ಮಾನಸಿಕ ಕಿರುಕುಳ(Mental Harassment) ನೀಡುತ್ತ ಬಂದಿದ್ದರು. 

Suicide Case: ಫೈನಾನ್ಸಿಯರ್‌ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕಾರಣ ನಿಗೂಢ?

ಶುಕ್ರವಾರ ಸಂಜೆ ಪೂಜಗೇರಿಯ ಅಶೋಕ ಗಾಂವಕರ ಅವರ ಮನೆ ಎದುರು ಬಂದು ಬಡ್ಡಿ ಹಣ ನೀಡದಿದ್ದರೆ ನಿನ್ನನ್ನು ಅಂಕೋಲಾದಲ್ಲಿ ಓಡಾಡಲು ಬಿಡುವದಿಲ್ಲ. ಒಂದು ಗತಿಕಾಣಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿ, ನಿನಗೆ ಸಾಲ ಮರು ಪಾವತಿ ಮಾಡಲು ಆಗದೇಇದ್ದಲ್ಲಿ ವಿಷ ಕುಡಿದು ಆದರೂ ಸಾಯು ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿ ಹೋಗಿದ್ದರು. ಇದರಿಂದ ಮನನೊಂದು ಪತಿ ಅಶೋಕ ಗಾಂವಕರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತಳ ಪತ್ನಿ ಉಷಾ ಅಶೋಕ ಗಾಂವಕರ ಪೊಲೀಸ್‌ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪಿಎಸೈ ಪ್ರೇಮನಗೌಡ ಪಾಟೀಲ ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮಾನಸಿಕ ಅಸ್ವಸ್ಥ ಆತ್ಮಹತ್ಯೆಗೆ ಶರಣು

ಲಕ್ಷ್ಮೇಶ್ವರ(Lakshmeshwara): ಸಮೀಪದ ಬಾಲೆಹೊಸೂರ ಗ್ರಾಮದ ಮೈಲಾರೆಪ್ಪ ಪುಟ್ಟಪ್ಪ ಸುಣಗಾರ (26) ಎಂಬ ಮಾನಸಿಕ ಅಸ್ವಸ್ಥ ಮತ್ತು ಕುಡಿತದ ಚಟಕ್ಕೆ ಬಿದ್ದಿದ್ದರಿಂದ ಶನಿವಾರ ದೊಡ್ಡೂರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಿಎಸ್‌ಐ ಪ್ರಕಾಶ ಡಿ. ಅವರು ತಿಳಿಸಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ವನ್ಯಜೀವಿ ವಿಭಾಗದ ಅರೆಕಾಲಿಕ ನೌಕರ ಆತ್ಮಹತ್ಯೆ

ಕಾರ್ಕಳ(Karkala): ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅರೆಕಾಲಿಕ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಲಿಯಲ್ಲಿ ನಡೆದಿದೆ. ವನ್ಯಜೀವಿ ವಿಭಾಗದಲ್ಲಿ ಅರೆಕಾಲಿಕ ನೌಕರರಾಗಿದ್ದ ಕಲ್ಲೊಟ್ಟೆ ಪರಿಸರದ ನಿವಾಸಿ ಸತೀಶ್‌(45) ಎಂಬುವವರು ಆತ್ಮಹತ್ಯೆ ಮಾಡಿಕೊಂಡವರು. ಅವರು ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ

ಹೊಟ್ಟೆನೋವು ತಾಳಲಾರದೆ ಯುವಕ ಆತ್ಮಹತ್ಯೆ

ಕೆಜಿಎಫ್‌(KGF): ಯುವಕನೊಬ್ಬ ಹೊಟ್ಟೆನೋವು ತಾಳಲಾರದೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಉರಿಗಾಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಾಚ್‌ ಮ್ಯಾನ್‌ ಬಡಾವಣೆಯ ನಿವಾಸಿಯಾದ ವಾಣಿ ಎಂಬುವವರ ಮಗನಾದ ವಿಜಯನ್‌(20) ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಯುವಕ, ಈತ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹೊಟ್ಟೆನೋವು ತಳಾಲಾರದೆ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್‌ರು ದೂರು ದಾಖಲಿಸಿಕೊಂಡಿದ್ದಾರೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಅಂಕೋಲಾ: ವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಗೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ಇತ್ತೀಚೆಗೆ ನಡೆದಿದೆ. ಕೃಷಿಕನಾಗಿರುವ ಮಂಜುನಾಥ ರಾಮಚಂದ್ರ ನಾಯಕ (38) ಮೃತಪಟ್ಟವ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ