* ಹುಬ್ಬಳ್ಳಿ ನಗರದ ಕಿಲ್ಲಾ ಓಣಿಯಲ್ಲಿ ನಡೆದ ಘಟನೆ
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
* ಹೆಂಡತಿ ಹತ್ಯೆಗೈದ ಗಂಡನ ಬಂಧನ
ಹುಬ್ಬಳ್ಳಿ(ಜು.12): ಪತ್ನಿಯ ಶೀಲ ಶಂಕಿಸಿದ ಆಕೆ ತಲೆ ಮೇಲೆ ಕಲ್ಲೆಸೆದು ಕೊಲೆ ಮಾಡಿದ ಘಟನೆ ಇಲ್ಲಿನ ಕುಸುಗಲ್‌ಗ್ರಾಮದ ಕಿಲ್ಲಾ ಓಣಿಯಲ್ಲಿ ನಡೆದಿದ್ದು, ಪತಿಯನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಮೆಹರುನ್ನೀಸಾ ಈಟಿ ಕೊಲೆಯಾದ ಮಹಿಳೆ. ಆರೋಪಿ ಪತಿ ಸೈಫ್‌ಅಲಿ ಆಕೆಯ ಮೇಲೆ ಕಲ್ಲೆತ್ತಿಹಾಕಿ ಕೊಲೆ ಮಾಡಿದ್ದಾನೆ.
ಸರ್ಕಾರಿ ಶಾಲಾ ಶಿಕ್ಷಕನ ಪ್ರಾಣ ತೆಗೆದ ಸಲಿಂಗಕಾಮ ಆ್ಯಪ್!
ಮೂಲತಃ ಗದಗ ಜಿಲ್ಲೆಯ ಇವರು ಈಚೆಗೆ ಕುಸುಗಲ್‌ಗೆ ಬಂದು ನೆಲೆಸಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.