
ಕಾರವಾರ(ಜು.12): ದುಡಿಯುವಂತೆ ಬುದ್ಧಿವಾದ ಹೇಳಿದ್ದಕ್ಕೆ ತಮ್ಮನನ್ನೇ ಅಣ್ಣ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿನ್ನೆ(ಭಾನುವಾರ) ನಡೆದಿದೆ. ಹೊನ್ನಾವರ ಪಟ್ಟಣದ ಚರ್ಚ್‌ರೋಡ್ ನಿವಾಸಿ ಅರ್ಜುನ್ (23) ಕೊಲೆಯಾದ ಯುವಕನಾಗಿದ್ದು, ಕೃಷ್ಣ (25) ಎಂಬಾತನೇ ತನ್ನ ತಮ್ಮನನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಕುಡಿದು ಮನೆಯಲ್ಲೇ ತಿಂದುಂಡು ಮಲಗೋ ಬದಲು ಕೆಲಸಕ್ಕೆ ಹೋಗು ಎಂದು ಅಣ್ಣ ಕೃಷ್ಣನಿಗೆ ತಮ್ಮ ಅರ್ಜುನ್ ಬುದ್ಧಿವಾದ ಹೇಳುತ್ತಿದ್ದ. ಈ ವಿಷಯವಾಗಿ ಅಣ್ಣ- ತಮ್ಮಂದಿರ ಮಧ್ಯೆ ಅಗಾಗ್ಗೆ ನಡುವೆ ಗಲಾಟೆಯುತ್ತಿತ್ತು ಎಂದು ತಿಳಿದು ಬಂದಿದೆ. ನನಗೆ ಬುದ್ಧಿವಾದ ಹೇಳಿದ್ರೆ ಸಾಯ್ಸಿ ಬಿಡ್ತೇನೆ ಎಂದು ಅಣ್ಣ ಕೃಷ್ಣ ತಮ್ಮನಿಗೆ ಬೆದಿರಿಸುತ್ತಿದ್ದನಂತೆ.
47ರ ಮಂಡ್ಯದ ಆಂಟಿ, ದಾವಣಗೆರೆ ಯುವಕ.. ತಲೆದಿಂಬಿನಿಂದ ಗಂಡನನ್ನೇ ಕೊಂದಳು!
ನಿನ್ನೆ ಕೂಡ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ಕೈಗೆ ಸಿಕ್ಕ ಯಾವುದೋ ಆಯುಧದಿಂದ ತಮ್ಮನ ತಲೆಗೆ ಹೊಡೆದು ಕೊಲೆ ಮಾಡಿದ್ದ ಕೃಷ್ಣ. ಬಳಿಕ ಮನೆಗೆ ಬೀಗ ಹಾಕಿ ತಮ್ಮ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾಗಿ ಮನೆ ಮಾಲಕಿ ಜತೆ ಸುಳ್ಳು ಹೇಳಿದ್ದ ಎಂದು ತಿಳಿದು ಬಂದಿದೆ. ಸಂಶಯದ ಮೇರೆಗೆ ರಾತ್ರಿ 9 ಗಂಟೆಗೆ ಮನೆ ಬಾಗಿಲು ಒಡೆದಾಗ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಆರೋಪಿ ಕೃಷ್ಣನನ್ನು ಬಂಧಿಸಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ