ಗಂಡು ಮಗುವಿಲ್ಲದ ಕೋಪ: ಹೆಣ್ಮಗಳನ್ನು ಗೋಡೆಗೆ ಜಜ್ಜಿ ಕೊಂದ ತಂದೆ

By Suvarna News  |  First Published Jul 12, 2021, 10:39 AM IST
  • ಗಂಡು ಮಕ್ಕಳಾಗದ್ದಕ್ಕೆ ಹೆಂಡತಿ ಮೇಲೆ ಕೋಪ
  • ಇಬ್ಬರು ಹೆಣ್ಮಕ್ಕಳನ್ನು ಹಿಡಿದು ಗೋಡೆಗೆ ಜಜ್ಜಿದ್ದ ತಂದೆ

ವಿಶಾಖಪಟ್ಟಣಂ(ಜು.12): ಗಂಡು ಮಗುವಾಗದ್ದಕ್ಕೆ ವ್ಯಕ್ತಿಯು ತನ್ನ ಇಬ್ಬರು ಹೆಣ್ಣುಮಕ್ಕಳ ತಲೆಯನ್ನು ಗೋಡೆಗೆ ಜಜ್ಜಿದ ಘಟನೆ ನಡೆದಿದೆ. ನಾಲ್ಕು ಮತ್ತು ಎರಡು ವರ್ಷ ವಯಸ್ಸಿನ ಹೆಣ್ಮಕ್ಕಳ ಮೇಲೆ ತಂದೆ ಕ್ರೌರ್ಯ ತೋರಿಸಿದ್ದಾನೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಜೋಡಿಮಾಮಿಡಿವಲಾಸ ಪ್ರದೇಶದಲ್ಲಿ ಘಟನೆ ನಡೆದಿದ್ದು ಕಿರಿಯ ಮಗಳು ಸಾವನ್ನಪ್ಪಿದರೆ ಹಿರಿಯ ಮಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Tap to resize

Latest Videos

ಆರೋಪಿಯನ್ನು ಕೆ ಪ್ರಸಾದ್ ಎಂದು ಗುರುತಿಸಿಸಲಾಗಿದ್ದು ಸುಮಾರು ಆರು ವರ್ಷಗಳ ಹಿಂದೆ, ಅವರು ಲಕ್ಷ್ಮಿಯನ್ನು ಮದುವೆಯಾಗಿದ್ದರು. ದಂಪತಿಗೆ ಕೆ ಸಿರಿ (4) ಮತ್ತು ಕೆ ಪ್ರವಾಣಿ (2) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಗಂಡು ಮಗುವನ್ನು ಬಯಸಿದ ಪ್ರಸಾದ್ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕಾರಣಕ್ಕಾಗಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ: SSLC ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ

ತನ್ನ ಹೆಣ್ಣುಮಕ್ಕಳ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ನೆರೆಹೊರೆಯವರು ಲಕ್ಷ್ಮಿ ಅವರ ಗಾಯಗೊಂಡ ಹೆಣ್ಣುಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದರು, ಅಲ್ಲಿ ವೈದ್ಯರು ಪ್ರವಾಣಿ ಸತ್ತರು ಎಂದು ದೃಢಪಡಿಸಿದ್ದಾರೆ. ಸಿರಿ ಈಗ ಸ್ಥಿರ ಸ್ಥಿತಿಯಲ್ಲಿದ್ದಾಳೆ ಎನ್ನಲಾಗಿದೆ.

ಲಕ್ಷ್ಮಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸುವ ಪ್ರಯತ್ನದಲ್ಲಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

click me!