Chamarajanagar: ಜಮೀನು ಮಾರಾಟ ಮಾಡುವ ವಿಚಾರಕ್ಕೆ ಜಗಳ: ಪತ್ನಿ ಕೊಂದು ಠಾಣೆಗೆ ಶರಣಾದ ಪತಿ

By Govindaraj S  |  First Published May 29, 2022, 12:09 AM IST

ಅವರಿಬ್ಬರದ್ದೂ ಬರೋಬ್ಬರಿ 30 ವರ್ಷಗಳ ದಾಂಪತ್ಯ ಜೀವನ. ಅಷ್ಟು ವರ್ಷಗಳಿಂದ ಸಣ್ಣಪುಟ್ಟ ಮನಸ್ತಾಪಗಳು ಇದ್ರೂ ಸುಂದರ ಜೀವನ ನಡೆಸುತ್ತಿದ್ರು. ಆದರೆ ಕೆಲವೊಂದು ವಿಚಾರಗಳಲ್ಲಿ ಜಗಳಗಳು ವಿಕೋಪಕ್ಕೆ ತಿರುಗುತ್ತಿತ್ತು.


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಮೇ.29): ಅವರಿಬ್ಬರದ್ದೂ ಬರೋಬ್ಬರಿ 30 ವರ್ಷಗಳ ದಾಂಪತ್ಯ ಜೀವನ. ಅಷ್ಟು ವರ್ಷಗಳಿಂದ ಸಣ್ಣಪುಟ್ಟ ಮನಸ್ತಾಪಗಳು ಇದ್ರೂ ಸುಂದರ ಜೀವನ ನಡೆಸುತ್ತಿದ್ರು. ಆದರೆ ಕೆಲವೊಂದು ವಿಚಾರಗಳಲ್ಲಿ ಜಗಳಗಳು ವಿಕೋಪಕ್ಕೆ ತಿರುಗುತ್ತಿತ್ತು ಹಾಗು ಹೆಂಡತಿಯನ್ನು ಅನುಮಾನದಿಂದಲೆ ನೋಡುತ್ತಿದ್ದ. ಆದ್ರೆ ಜಮೀನು ಮಾರಾಟ ಮಾಡುವ ವಿಚಾರಕ್ಕೆ ಪತಿ ಪತ್ನಿಯ ನಡುವೆ ಪ್ರಾರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ..

Tap to resize

Latest Videos

undefined

ಹೀಗೆ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ಈಕೆ ಮಹದೇವಮ್ಮ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೀಲಗೆರೆ ಗ್ರಾಮದ ನಿವಾಸಿ. ಈಕೆಯ ಪತಿ ಮಹಾದೇವಪ್ಪ ಈಕೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಕಳೆದ 30 ವರ್ಷಗಳ ಹಿಂದೆ ಮಹದೇವಪ್ಪ ಮತ್ತು ಮಹದೇವಮ್ಮ ನಡುವೆ ವಿವಾಹವಾಗಿತ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರಿಗೂ ಮದುವೆಯಾಗಿದೆ. ಸದ್ಯ ಇವರಿಬ್ಬರು ತಮ್ಮ ಜಮೀನಿನಲ್ಲಿಯೇ ಮನೆ ಮಾಡಿಕೊಂಡು ಗಂಡ ಹೆಂಡತಿ ವಾಸವಾಗಿದ್ರು. ಇವರ ನಡುವೆ ಕಳೆದ ಕೆಲ ದಿನಗಳಿಂದ ಜಮೀನು ಮಾರಾಟ ವಿಚಾರವಾಗಿ ಜಗಳ ನಡೆಯುತ್ತಿತ್ತಂತೆ. 

ಮೃತ್ಯುಕೂಪವಾಯ್ತು ಗುಂಡ್ಲುಪೇಟೆ ಹೆದ್ದಾರಿ: ಸಂಚಾರ ದಟ್ಟಣೆಯಿಂದ ಹೆಚ್ಚಾಯ್ತು ಅಪಘಾತ ಸಂಖ್ಯೆ!

ಈ ಜಗಳ ತಾರಕಕ್ಕೇರಿ ಇಂದು ಬೆಳಗ್ಗೆ ಪತ್ನಿ ಮಹದೇವಮ್ಮ ಪಾತ್ರೆ ತೋಳೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಮಹದೇವಪ್ಪ ತನ್ನ ಪತ್ನಿಯನ್ನೇ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತನ್ನ ದಿನನಿತ್ಯದ ಕಾಯಕ ಹಾಲು ಕರೆದು ಡೈರಿಗೆ ಹಾಕಿ ಆನಂತರ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾನೆ. ಈ ದಂಪತಿಗಳ ಬಗ್ಗೆ ಊರಲ್ಲಿ ಯಾರನ್ನೆ ಕೇಳಿದರು ಅನ್ನೂನ್ಯ ದಂಪತಿಗಳು ಎಂದೆ ಹೇಳುತ್ತಾರೆ. ಅದರಲ್ಲು ಮಹದೇವಪ್ಪನಿಗೆ ಯಾವುದೆ ದುಶ್ಚಟಗಳು ಇಲ್ಲವೆ ಇಲ್ಲ. ಆದರು ತುಂಬಾ ಕೋಪಿಷ್ಟ ಇವರಿಬ್ಬರ ನಡುವೆ ಏನು ನಡೆಯಿತು ಅನ್ನೋದೆ ಯಾರಿಗು ಗೊತ್ತಾಗ್ತಾ ಇಲ್ಲ ಅಂತಿದ್ದಾರೆ ಹತ್ತಿರದ ಸಂಬಂಧಿಕರು.

ಮಹದೇವಪ್ಪಗೆ 5 ಎಕರೆ ಜಮೀನು ಇತ್ತು. ಇರೊ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು  ದಂಪತಿಗಳು ಸುಂದರ ಜೀವನ ಸಾಗಿಸಿತ್ತಿದ್ದರು. ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದು ತವರಿಗೆ ಹೆಣ್ಣು ಮಕ್ಕಳು ಬಂದಂತಹ ಸಂದರ್ಭದಲ್ಲಿ  ಮೊಮ್ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಯಾರ ಜೊತೆಯಲ್ಲು ಅತಿಯಾದ ಸ್ನೇಹ ಮಾಡದೆ ತಾನಾಯಿತು ತನ್ನ ಕೆಲಸವಾಯಿತು ಅನ್ನೊ ಹಾಗೆ ಜೀವನ ನೆಡೆಸ್ತಾ ಇದ್ದ ಆರೋಪಿಗೆ ಜೀವನ ನೆಡೆಸಲು ಹಣದ ಅವಶ್ಯಕತೆ ಹೆಚ್ಚಾದಾಗ ಇರುವ ಜಮೀನಿನಲ್ಲಿ ಎರಡೂವರೆ ಎಕರೆ ಜಮೀನು ಮಾರಾಟ ಮಾಡಲು ಮಹದೇವಪ್ಪ ಮುಂದಾಗಿದ್ರಂತೆ. ಆದ್ರೆ ಇದಕ್ಕೆ ಪತ್ನಿ ಮಹದೇವಮ್ಮ ವಿರೋಧ ವ್ಯಕ್ತಪಡಿಸುತ್ತಿದ್ರು. 

Chamarajnagar: ಹಸಿರಿನ ವನರಾಶಿಯಿಂದ ನಳನಳಿಸುತ್ತಿದೆ ಬಂಡೀಪುರ!

ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇವತ್ತು ಬೆಳಗ್ಗೆ ಇದೇ ವಿಚಾರಕ್ಕೆ ಆರಂಭವಾದ ಜಗಳ ತಾರಕ್ಕಕೇರಿ ಮಹದೇವಪ್ಪ ತನ್ನ ಪತ್ನಿಯನ್ನು  ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತೆರಕಣಾಂಬಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಶರಣಾದ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಆರೋಪಿ ಯಾವ ವಿಚಾರಕ್ಕೆ ತನ್ನ ಹೆಂಡತಿಯನ್ನು ಕೊಲೆ ಮಾಡುವಷ್ಟು ಕ್ರೂರಿಯಾದ, ಅವನೆ ಬಂದು ಯಾಕೆ ಶರಣಾದ ಎನ್ನುವುದು ತನಿಖೆಯಿಂದಷ್ಟೆ ಹೊರ ಬರಬೇಕಾಗಿದೆ. ಒಟ್ಟಾರೆ ಕೋಪದ ಕೈಗೆ ಬುದ್ದಿ ಕೊಟ್ಟು 30 ವರ್ಷ ಜೊತೆಯಾಗಿ ಬಾಳ್ವೆ ಮಾಡಿದವಳ ಪ್ರಾಣವನ್ನೇ ತೆಗೆದಿದ್ದು ಮಾತ್ರ ಘೋರ ದುರಂತ.

click me!