Bengaluru Crime: ಟಾರ್ಚರ್ ಕೊಡ್ತಾಳೆ ಅಂತ ಬಾ ನಲ್ಲೆ ಮಧುಚಂದ್ರಕೆ ಸ್ಟೈಲಲ್ಲಿ ಮಡದಿ ಕೊಂದ ಪತಿರಾಯ!

Published : Aug 17, 2022, 12:12 PM ISTUpdated : Aug 17, 2022, 12:38 PM IST
Bengaluru Crime: ಟಾರ್ಚರ್ ಕೊಡ್ತಾಳೆ ಅಂತ ಬಾ ನಲ್ಲೆ ಮಧುಚಂದ್ರಕೆ ಸ್ಟೈಲಲ್ಲಿ ಮಡದಿ ಕೊಂದ ಪತಿರಾಯ!

ಸಾರಾಂಶ

ಮದುವೆಯಾದ ದಿನದಿಂದ ಇಬ್ಬರ ನಡುವೆ ಒಂದಿಲ್ಲೊಂದು ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿ ಪತ್ನಿ ಕೊಲೆ ಮಾಡೋಕೆ ಸ್ಕೆಚ್ ಹಾಕಿದ್ದ ಗಂಡ

ಬೆಂಗಳೂರು(ಆ.17):  ಪ್ರೀತಿಸಿ ಮದುವೆಯಾದವಳ ಟಾರ್ಚರ್ ತಡೆಯಲಾಗದೆ ಹೆಂಡತಿಯನ್ನ ಕೊಲೆ ಮಾಡಿದ ಘಟನೆ ಮಡಿವಾಳದಲ್ಲಿ ಇಂದು(ಬುಧವಾರ) ನಡೆದಿದೆ. ಜ್ಯೋತಿ ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಪ್ರಥ್ವಿರಾಜ್ ಹೆಂಡತಿಯನ್ನೇ ಕೊಲೆ ಮಾಡಿದ ಆರೋಪಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ: 

ಪ್ರಥ್ವಿರಾಜ್ ಹಾಗೂ ಜ್ಯೋತಿ ಇಬ್ಬರೂ ಕಳೆದ ಎಂಟು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ದಿನದಿಂದ ಇಬ್ಬರ ನಡುವೆ ಒಂದಿಲ್ಲೊಂದು ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇದರಿಂದ ರೋಸಿ ಹೋದ ಪ್ರಥ್ವಿರಾಜ್ ಪತ್ನಿ ಜ್ಯೋತಿಯನ್ನ ಕೊಲೆ ಮಾಡೋಕೆ ಸ್ಕೆಚ್ ಹಾಕುತ್ತಾನೆ. ಹೆಂಡತಿಯನ್ನ ಉಡುಪಿಯ ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಆ.2 ರಂದು ಕರೆದೊಯ್ದಿದ್ದ. ಆದರೆ, ಪ್ರವಾಸಕ್ಕೆ ಹೋಗೋ ಮುನ್ನ ಮನೆಯಲ್ಲೇ ಪ್ರಥ್ವಿರಾಜ ಮೊಬೈಲ್ ಬಿಟ್ಟು ಹೆಂಡತಿಯ ಮೊಬೈಲ್ ಕೂಡ ಮನೆಯಲ್ಲಿ ಬಿಟ್ಟು ಹೋಗ್ತಾನೆ.

Bengaluru: ದಿವಂಗತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹತ್ಯೆಗೈದ ದುಷ್ಕರ್ಮಿಗಳು

ಸುಮುದ್ರದಲ್ಲಿ ಮುಳುಗಿಸಿ ಜ್ಯೋತಿಯನ್ನ ಕೊಲೆ ಮಾಡಿ ನ್ಯಾಚುರಲ್ ಡೆತ್ ಅಂತ ಮಾಡ್ಬೇಕು ಅಂತ ಪ್ರಥ್ವಿರಾಜ ಪಕ್ಕಾ ಪ್ಲ್ಯಾನ್ ಮಾಡಿದ್ದ, ಆದ್ರೆ, ಸಮುದ್ರದ ಆಳಕ್ಕೆ ಇಳಿಯದಂತೆ ಬೋರ್ಡ್ ಹಾಕಿದ್ದರಿಂದ ಪ್ಲ್ಯಾನ್ ಫ್ಲಾಫ್ ಆಗುತ್ತೆ. ನಂತರ ಜೂಮ್ ಕಾರಿನಲ್ಲಿ ಸಕಲೇಶಪುರದ ಗುಂಡ್ಯಾ ಬಳಿ ಜ್ಯೋತಿಯನ್ನ ಕರೆದುಕೊಂಡು ಬಂದು ಅಲ್ಲಿ ಜ್ಯೋತಿಯ ವೇಲ್‌ನಿಂದ ಆಕೆಯನ್ನ ಉಸಿರುಗಟ್ಟಿಸಿ ಕೊಲೆಗೈದಿದ್ದ ಪ್ರಥ್ವಿರಾಜ. ಕೊಲೆಯ ಬಳಿಕ ಶವವನ್ನ ಗುಂಡ್ಯಾ ಬಳಿಯ ಪೊದೆಯೊಂದರಲ್ಲಿ ಎಸೆದು ಬೆಂಗಳೂರಿಗೆ ಬಂದಿದ್ದ. ಕೊಲೆ ಮಾಡಿ ಬೆಂಗಳೂರಿಗೆ ಬಂದವನೇ ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಂಡ್ತಿ ಮಿಸ್ಸಿಂಗ್ ಅಂತ ಕಂಪ್ಲೆಂಟ್ ಕೂಡ ಕೊಟ್ಟಿದ್ದ.

ಕಂಪ್ಲೆಂಟ್ ಪಡೆದ ಪೊಲೀಸರು ಇನ್ವೆಸ್ಟಿಗೇಷನ್‌ಗೆ ಇಳೀತಾರೆ. ಹೆಂಡತಿ ಹಾಗೂ ತನ್ನ ಮೊಬೈಲ್ ಮಾರುತಿ ನಗರದ ಮನೆಯಲ್ಲೇ ಇತ್ತು ಅನ್ನೋ ಸತ್ಯವನ್ನ ಪ್ರಥ್ವಿರಾಜ ಬಾಯ್ಬಿಟ್ಟಿದ್ದ. ಸಿಸಿಟಿವಿ, ಸಿಡಿಆರ್ ಆಧರಿಸಿ ಪ್ರಥ್ವಿರಾಜನನ್ನ ಪೊಲೀಸರು ಬಂಧಿಸುತ್ತಾರೆ. ಆಗ ಕೊಲೆಯ ಹಿಂದಿನ ಸತ್ಯವನ್ನ ಪ್ರಥ್ವಿರಾಜ ಬಾಯಿಬಿಟ್ಟಿದ್ದನು. 

ಬಾಯ್‌ಫ್ರೆಂಡ್‌ಗಾಗಿ ಗಂಡನನ್ನೇ ಮುಗಿಸಿದ ಪಾಪಿ ಪತ್ನಿ! ಮಕ್ಕಳನ್ನು ಕೂಡಿ ಹಾಕಿ ಅಪ್ಪನ ಭೀಕರ ಹತ್ಯೆ!

ಹೊಸದೊಂದು ಮೊಬೈಲ್ ಖರೀದಿಸಿ ಹೊಸ ಸಿಮ್ ಉಪಯೋಗಿಸುತ್ತಿದ್ದ. ಕೊಲೆಗಂತಾನೇ ಬೇಸಿಕ್‌ ಮೊಬೈಲ್ ಹಾಗೂ ಸಿಮ್ ಖರೀದಿಸಿದ್ದನಂತೆ. ಹಳೆಯ ಮೊಬೈಲ್‌ನ್ನ ಮನೆಯಲ್ಲೇ ಬಿಟ್ಟು ಹೆಂಡತಿಯನ್ನ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದೆ ಮಲ್ಪೆಯಲ್ಲಿ ಕೊಲೆ ಪ್ಲ್ಯಾನ್ ಫ್ಲಾಪ್ ಆದ್ರೆ ಗುಂಡ್ಯಾದಲ್ಲಿ ಕೊಲೆ ಪ್ಲ್ಯಾನ್ ಸಕ್ಸಸ್ ಆಗಿತ್ತು.

ಹೆಂಡತಿ ಸಕ್ಕತ್ ಕಿರಿಕ್ ಆಗಿದ್ಲು ಅದೇ ರೀತಿ ಬಾಯ್ ಫ್ರೆಂಡ್ ಕೂಡ ಹೊಂದಿದ್ದಳು ಅಂತ ಗಂಡ ಆರೋಪಿಸಿದ್ದಾನೆ. ಹೆಂಡತಿ ಜ್ಯೋತಿ ಯುಪಿಎಸ್‌ಸಿ ಎಕ್ಸಾಂ ಎರಡು ಬಾರಿ ಬರೆದಿದ್ದಳು. ದೆಹಲಿಗೂ ಟ್ರೈನಿಂಗ್ ನಿಮಿತ್ತ ಹೋಗಿದ್ದಳು.ಅಲ್ಲಿ ಯುವಕನೊಬ್ಬನ ಸಹವಾಸ ಬೆಳೆಸಿದ್ದಳು. ಅದಾದ ಬಳಿಕ ಹೆಂಡ್ತಿ ಗೈಯಾಳಿಯಾಗಿದ್ದಳು. ಹೀಗಾಗಿ ಕೊಲೆ ಮಾಡಿರೋದಾಗಿ ಗಂಡ ಪೃಥ್ವಿರಾಜ್ ಹೇಳಿದ್ದಾನೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!